• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೋರ್ಡಾನ್ ರಾಜಕುಮಾರನಿಂದ ಗೃಹಬಂಧನ ವಿರುದ್ಧ ಧಿಕ್ಕಾರದ ಧ್ವನಿ

|

ಗೃಹ ಬಂಧನದಲ್ಲಿರುವ ಜೋರ್ಡಾನ್ ರಾಜಕುಮಾರ ಹಮ್ಜಾ ತಮ್ಮ ಗೃಹ ಬಂಧನದ ವಿರುದ್ಧ ಧಿಕ್ಕಾರದ ಧ್ವನಿ ಎತ್ತಿದ್ದಾರೆ.

ಮಲಸಹೋದರ ರಾಜ ಅಬ್ದುಲ್ಲಾ-2ರ ವಿರುದ್ಧ ಸಂಚು ಆರೋಪಕ್ಕೆ ಗುರಿಯಾಗಿ ಗೃಹ ಬಂಧನದಲ್ಲಿರುವ ಜೋರ್ಡಾನ್‌ನ ರಾಜಕುಮಾರ ಹಮ್ಜಾ ತಾನು ಗೃಹ ಬಂಧನಲ್ಲಿದ್ದು, ಯಾವುದೇ ಕಾರಣಕ್ಕೂ ಆದೇಶ ಪಾಲಿಸುವುದಿಲ್ಲ ಎಂದಿದ್ದಾರೆ.

ಸಾಮ್ರಾಜ್ಯದ ಭದ್ರತೆಯನ್ನು ಅಸ್ಥಿರಗೊಳಿಸುವ ದೇಶದ್ರೋಹದ ಪಿತೂರಿಯಲ್ಲಿ ಹಮ್ಜಾ ಭಾಗಿಯಾಗಿರುವುದಾಗಿ ಎಂದು ಸರ್ಕಾರ ಆರೋಪಿಸಿದ್ದು, ಅವರನ್ನು ಗೃಹ ಬಂಧನದಲ್ಲಿರಿಸಿದೆ. 16 ಜನರನ್ನು ಬಂಧಿಸಲಾಗಿದೆ.

ನಾನು ಇದೀಗ ಓಡಾಡುವಂತಿಲ್ಲ, ಆದರೆ, ನೀನು ಹೊರಗೆ ಹೋಗುವಂತಿಲ್ಲ, ಟ್ವೀಟ್ ಮಾಡುವಂತಿಲ್ಲ, ಜನರೊದಿಗೆ ಸಂಪರ್ಕಿಸುವಿಲ್ಲ, ಕುಟುಂಬದವರನ್ನು ನೋಡುವಂತಿಲ್ಲ ಎಂಬಂತಹ ಆದೇಶವನ್ನು ಪಾಲಿಸುವುದಿಲ್ಲ ಎಂದು ಭಾನುವಾರ ತಡ ರಾತ್ರಿ ಅವರು ಆಡಿಯೋವೊಂದನ್ನು ಟ್ವಿಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

ತನ್ನನ್ನು ಅಮ್ಮನ್ ಅರಮನೆಯೊಳಗೆ ಇರಲು ಆದೇಶಿಸಲಾಗಿದೆ ಎಂದು ಹೇಳುವ 41 ವರ್ಷದ ಹಮ್ಜಾ, ಓಡಾಟವನ್ನು ಸೀಮಿತಗೊಳಿಸುವ ಆದೇಶವನ್ನು ಧಕ್ಕಿರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಅಬ್ದುಲ್ಲಾ, 2004ರಲ್ಲಿ ಮಾಜಿ ರಾಜಕುಮಾರ ಹಮ್ಜಾನಿಂದ ಕಿರೀಟವನ್ನು ಕಿತ್ತುಕೊಂಡಿದ್ದ. ಶನಿವಾರ ಬಿಬಿಸಿಗೆ ವಿಡಿಯೋವೊಂದನ್ನು ಕಳುಹಿಸಿರುವ ಹಮ್ಜಾ, ಜೋರ್ಡಾನ್ ನ ಹಿರಿಯ ಮಿಲಿಟರಿ ಅಧಿಕಾರಿಗಳಿಂದ ತಾನು ಗೃಹ ಬಂಧನದಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಹಮ್ಜಾ, ಅರಮನೆಯಲ್ಲಿನ ಪ್ರಕ್ಷುಬ್ಧತೆಯು ಜೋರ್ಡಾನ್‌ನಲ್ಲಿ ಬಿರುಕು ಮೂಡಿಸಿದೆ ಎಂದಿದ್ದಾರೆ. ಇದನ್ನು ಸಾಮಾನ್ಯವಾಗಿ ಮಧ್ಯಪ್ರಾಚ್ಯದಲ್ಲಿ ಸ್ಥಿರತೆಯ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ.

English summary
Jordan's Prince Hamzah, accused of a "wicked" plot against his elder half-brother King Abdullah II, has struck a defiant tone, insisting he will not obey orders restricting his movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X