• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ-ಚೀನಾ ಸಭೆ ಆರಂಭ: ಮಾನವ ಹಕ್ಕುಗಳು, ಭದ್ರತೆ ಕುರಿತು ಚರ್ಚೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 16: ವಿಶ್ವದ ದೊಡ್ಡಣ್ಣ ಅಮೆರಿಕ ಹಾಗೂ ಚೀನಾ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ಉಭಯ ನಾಯಕರು ಸಿದ್ಧರಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಮಾತುಕತೆ ಶುರುವಾಗಿದೆ. ಕ್ಸಿ ಜಿನ್‌ಪಿಂಗ್ ಜೋಬೈಡನ್‌ ಅವರನ್ನು ಹಳೆಯ ಸ್ನೇಹಿತ ಎಂದು ಕರೆದಿದ್ದು, ಬೈಡನ್ ಜತೆ ಮಾತನಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ನವೆಂಬರ್ 15 ರಂದು ಜೋ ಬೈಡನ್ ಜತೆ ಕ್ಸಿ ಜಿನ್‌ಪಿಂಗ್ ವರ್ಚ್ಯುವಲ್ ಸಭೆನವೆಂಬರ್ 15 ರಂದು ಜೋ ಬೈಡನ್ ಜತೆ ಕ್ಸಿ ಜಿನ್‌ಪಿಂಗ್ ವರ್ಚ್ಯುವಲ್ ಸಭೆ

ಉಭಯ ದೇಶಗಳಲ್ಲಿರುವ ಸವಾಲುಗಳನ್ನು ಪರಿಹರಿಸಲು ಜತೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು. ಬೈಡನ್ ಮಾತನಾಡಿ, ಎರಡು ದೇಶಗಳ ನಡುವೆ ಯಾವುದೇ ಸಂಘರ್ಷಗಳು ನಡೆಯದಂತೆ ನೋಡಿಕೊಳ್ಳಬೇಕಿದೆ, ಇಂದು ಬೆಳಗ್ಗೆ 7.45ಕ್ಕೆ ಸಭೆ ಆರಂಭಗೊಂಡಿದೆ.

ಕೆಲ ವರ್ಷದಿಂದಲೂ ಉಭಯ ರಾಷ್ಟ್ರಗಳ ನಡುವೆ ಮೇಲ್ನೋಟಕಷ್ಟೇ ಉತ್ತಮ ಸಂಬಂಧ ಇರುವಂತೆ ಕಂಡುಬಂದರೂ ವಾಸ್ತವಾಂಶ ಬೇರೆಯದ್ದೇ ಆಗಿತ್ತು.

ಬೈಡನ್- ಜಿನ್ ಪಿಂಗ್ ನಡುವೆ ವರ್ಷಾಂತ್ಯದಲ್ಲಿ ವರ್ಚ್ಯುಯಲ್ ಮಾತುಕತೆ ಏರ್ಪಡಿಸುವ ಸಂಬಂಧ ಕಳೆದ ತಿಂಗಳೇ ಒಮ್ಮತಕ್ಕೆ ಬಂದಿದ್ದರ ಬಗ್ಗೆ ಅಮೆರಿಕ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅಮೆರಿಕ-ಚೀನಾದ ನಡುವೆ ದ್ವಿಪಕ್ಷೀಯ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಹದಗೆಟ್ಟಿತ್ತು. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

ಸದ್ಯಕ್ಕೆ ಅಮೆರಿಕ-ಚೀನಾದ್ದು ಜಗತ್ತಿನ ಅತಿ ಸಂಕೀರ್ಣ ದ್ವಿಪಕ್ಷೀಯ ಸಂಬಂಧವಾಗಿದೆ. ಇದಕ್ಕೂ ಮುನ್ನ ಸೆ.09 ರಂದು ಇಬ್ಬರೂ ನಾಯಕರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು. ಅಮೆರಿಕದಲ್ಲಿರುವ ಚೀನಾದ ರಾಯಭಾರಿ ಕ್ವಿನ್ ಗ್ಯಾಂಗ್ ಅವರು ವಾಷಿಂಗ್ಟನ್‌ನಲ್ಲಿ ನಡೆದ ಅಮೆರಿಕ-ಚೀನಾ ಸಂಬಂಧಗಳ ರಾಷ್ಟ್ರೀಯ ಸಮಿತಿಯ ಭೋಜನಕೂಟದಲ್ಲಿ ಚೀನಾ ಅಧ್ಯಕ್ಷರ ಸಂದೇಶ ಪ್ರಸ್ತುತಪಡಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಅಮೆರಿಕದೊಂದಿಗೆ ಸಹಕರಿಸಲು ಚೀನಾ ಸಿದ್ಧವಾಗಿದೆ.

ಈ ಬೆಳವಣಿಗೆಗಳ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ನಡುವೆ ವರ್ಚ್ಯುಯಲ್ ಸಭೆ ನಿಗದಿಯಾಗಿದೆ ಎಂದು ವೈಟ್ ಹೌಸ್ ತಿಳಿಸಿತ್ತು.
ಮಾನವ ಹಕ್ಕುಗಳು ಹಾಗೂ ಭದ್ರತಾ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ವದಂತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿದಾಡಿದ್ದವು. ಆದರೆ ಇದಕ್ಕೆಲ್ಲ ಉತ್ತರ ಎಂಬಂತೆ ಕಮ್ಯೂನಿಸ್ಟ್ ಪಾರ್ಟಿ ಸಭೆಯಲ್ಲಿ ಒಂದು ತೀರ್ಮಾನ ಹೊರಗೆ ಬಂದಿದೆ.

ಮಹತ್ವದ ಸಭೆ ನಡೆಸಿದೆ. ಕ್ಸಿ ಜಿನ್ ಪಿಂಗ್ ಅವರನ್ನು ಅತ್ಯುನ್ನತ ನಾಯಕ ಎಂದು ಸರ್ವಾನುಮತದಿಂದ ತೀರ್ಮಾನ ಮಾಡಿದೆ. ಈ ಮೂಲಕ ಮುಂದಿನ ಅವಧಿಗೂ ಜಿನ್ ಪಿಂಗ್ ಅಧ್ಯಕ್ಷರಾಗುವುದು ಖಚಿತವಾಗಿದೆ.

ಕಮ್ಯೂನಿಷ್ಟ್ ಪಾರ್ಟಿ ನಿರ್ಣಯವನ್ನು ಪಾಸ್ ಮಾಡಿದೆ. ಈ ಹಿಂದೆ ಸಹ ಆಧುನಿಕ ಚೀನಾದ ನಿರ್ಮಾತೃ ಮಾವೋ ಝೆಡಾಂಗ್, ಚೀನಾ ಆರ್ಥಿಕತೆಯ ಹರಿಕಾರ ಡೆಂಗ್ ಕ್ಸಿಯಾಪಿಂಗ್ ಅವರಿಗೂ ಕಮ್ಯೂನಿಸ್ಟ್ ಪಾರ್ಟಿ ಇಂಥದ್ದೇ ಗೌರವ ನೀಡಿತ್ತು.

ಪಾಕ್ ಬತ್ತಳಿಕೆ ಸೇರಿದ ಚೀನಾದ ಅಸ್ತ್ರ: ನೂರು ವರ್ಷಗಳ ಸಾಧನೆಗೆ ಸಂಬಂಧಿಸಿ ಚೀನಾ ಕಮ್ಯುನಿಸ್ಟ್ ಪಾರ್ಟಿ (CPC)ಉನ್ನತ ಮಟ್ಟದ ಸಭೆ ನಡೆಸಿತು. ಈ ಸಭೆಯಲ್ಲಿ ಜಿನ್ ಪಿಂಗ್ ಅವರೇ ನಮ್ಮ ನಾಯಕರು ಎಂಬ ಪ್ರತಿಧ್ವನಿ ಕೇಳಿಬಂತು.

ಕಮ್ಯೂನಿಸ್ಟ್ ಪಕ್ಷದ 348 ಪ್ರಮುಖ ನಾಯಕರು ಪ್ರತಿ ಐದು ವರ್ಷಗಳಿಗೊಮ್ಮೆ ತನ್ನ ಹೊಸ ನಾಯಕರನ್ನು ಆಯ್ಕೆ ಮಾಡುತ್ತಾರೆ. ಬೀಜಿಂಗ್ ನಲ್ಲಿ ಸೋಮವಾರ ನಾಯಕರ ನಡುವೆ ಮಹತ್ವದ ಸಭೆ ನಡೆದಿತ್ತು.

ಇದು ಮೂರನೇ ಸಾರಿ; ಇದೆ ಬಗೆಯ ನಿರ್ಣಯವನ್ನು ಈ ಹಿಂದೆ ಎರಡು ಸಾರಿ ತೆಗೆದುಕೊಳ್ಳಲಾಗಿತ್ತು. 1945 ರಲ್ಲಿ ಮಾವೋ ಮತ್ತು 1981 ರಲ್ಲಿ ಡೆಂಗ್ ಅಧಿಕಾರದಲ್ಲಿ ಇದ್ದಾಗ ಪಕ್ಷ ಅವರನ್ನು ಮುಂದಿನ ಅವಧಿಗೆ ನಾಯಕರು ಎಂದು ಹೇಳಿತ್ತು.

English summary
President Joe Biden opened his virtual meeting with China’s Xi Jinping on Monday (local time) by saying his goal is to ensure competition “does not veer into conflict.” The two leaders met virtually amid mounting tensions in the US-China relationship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X