ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್: 10,000 ಮನೆಗಳಲ್ಲಿ ಕತ್ತಲು ಆವರಿಸುವಂತೆ ಮಾಡಿದ ಹಾವು

|
Google Oneindia Kannada News

ಟೋಕಿಯೋ ಜುಲೈ 7: ಜಪಾನಿನ ನಗರದಲ್ಲಿ ಹಾವೊಂದು ಒಂದು ಗಂಟೆಯ ಕಾಲ ಸಾವಿರಾರು ಮನೆಗಳು ಮತ್ತು ಕಚೇರಿಗಳ ವಿದ್ಯುತ್ ಕಡಿತಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಮಧ್ಯಾಹ್ನದ ವೇಳೆಗೆ ವಿದ್ಯುತ್ ಕಡಿತಗೊಂಡಿದ್ದು ಅಲ್ಲಿನ ಜನರು ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿದ್ದಾರೆ. ಕೊರಿಯಾಮಾ ನಗರದ 10,000 ಮನೆಗಳ ದೀಪಗಳನ್ನು ಒಂದು ಗಂಟೆಯವರೆಗೆ ಆಫ್ ಮಾಡಲಾಗಿತ್ತು. ವಿದ್ಯುತ್ ಇಲ್ಲದೆ ಅಂಗಡಿಗಳು ಮುಚ್ಚಿದವು. ಮನೆಗಳಲ್ಲಿದ್ದವರು ಗಲಿಬಿಲಿಗೊಂಡರು. ಮತ್ತೊಂದೆಡೆ, ವಿದ್ಯುತ್ ಕಂಪನಿಯವರು ವಿದ್ಯುತ್ ಕಡಿತಕ್ಕೆ ಕಾರಣವನ್ನು ಹುಡುಕುತ್ತಿದ್ದರು.

ನ್ಯೂಸ್‌ವೀಕ್‌ನ ವರದಿಯ ಪ್ರಕಾರ, ಈ ಘಟನೆಯು ಜೂನ್ 29 ರ ಮಧ್ಯಾಹ್ನದ ನಂತರ ಸಂಭವಿಸಿದೆ. ಜೊತೆಗೆ ಈ ಘಟನೆ ಸಂಭವಿಸಿದಾಗ ಅಲ್ಲಿನ ತಾಪಮಾನ ಅತ್ಯಧಿಕವಾಗಿತ್ತು. ಆರಂಭದಲ್ಲಿ ವಿದ್ಯುತ್ ಸರಬರಾಜಿನ ಜವಾಬ್ದಾರಿಯನ್ನು ಹೊಂದಿರುವ ತೊಹೊಕು ಎಲೆಕ್ಟ್ರಿಕ್ ಪವರ್ ಕಂಪನಿಯು ವಿದ್ಯುತ್ ಏಕೆ ಕಡಿತಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಬಳಿಕ ಇತ್ತೀಚೆಗೆ ಜಪಾನ್‌ನ ವಿದ್ಯುತ್ ಉಪ-ಕೇಂದ್ರಕ್ಕೆ ದೊಡ್ಡ ಹಾವೊಂದು ಹರಿದಾಡಿತು ಎಂದು ಕಂಡುಕೊಂಡಿದ್ದಾರೆ.

ಶಾರ್ಟ್ ಸರ್ಕ್ಯೂಟ್

ಶಾರ್ಟ್ ಸರ್ಕ್ಯೂಟ್

ಹೆಚ್ಚಿನ ತನಿಖೆಯ ನಂತರ, ಹಾವು ಉಪ ಕೇಂದ್ರದ ವ್ಯವಸ್ಥೆಗೆ ಪ್ರವೇಶಿಸಿದ್ದು, ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸ್ಮೋಕ್ ಅಲಾರ್ಮ್‌ಗಳು ಸಹ ಧ್ವನಿಸಲು ಪ್ರಾರಂಭಿಸಿದವು, ಈ ದೃಷ್ಟಿಯಿಂದ 6 ಅಗ್ನಿಶಾಮಕ ವಾಹನಗಳು ಕೂಡ ತಕ್ಷಣ ಸ್ಥಳಕ್ಕೆ ತಲುಪಿದವು. ಸುರಕ್ಷತಾ ಕಾರಣಗಳಿಂದ ಶಾರ್ಟ್ ಸರ್ಕ್ಯೂಟ್ ಆದ ಕೂಡಲೇ ಸ್ವಯಂಚಾಲಿತವಾಗಿ ವಿದ್ಯುತ್ ಸ್ಥಗಿತಗೊಂಡಿದ್ದು, ಇದರಿಂದ ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಕಂಪನಿ ತಿಳಿಸಿದೆ.

ಸಾರ್ವಜನಿಕರಲ್ಲಿ ಅಸಮಾಧಾನ

ಸಾರ್ವಜನಿಕರಲ್ಲಿ ಅಸಮಾಧಾನ

ಅಲ್ಲದೇ, ಸಮಸ್ಯೆ ಪತ್ತೆಯಾದ ಕೂಡಲೇ ಶೀಘ್ರ ದೋಷ ಸರಿಪಡಿಸುವ ಕೆಲಸಕ್ಕೆ ಎಲೆಕ್ಟ್ರಿಷಿಯನ್ ಗಳು ಮುಂದಾಗಿದ್ದಾರೆ. ಇದು ಸುಮಾರು ಒಂದು ಗಂಟೆ ತೆಗೆದುಕೊಂಡಿತು. ಬಳಿಕ ಎಲ್ಲಾ 10,000 ಮನೆಗಳು, ಅಂಗಡಿಗಳು ಮತ್ತು ಕಚೇರಿಗಳಲ್ಲಿ ದೀಪಗಳು ಬಂದವು. ವಿದ್ಯುತ್ ಇಲ್ಲದೆ ಎಸಿ ಫ್ಯಾನ್‌ ಇಲ್ಲದಂತಾಗಿ ತುಂಬಾ ಬಿಸಿಯಾದ ವಾತವರಣದಿಂದಾಗಿ ಅಂಗಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ. ಹಾವಿನ ಕಾರಣದಿಂದ ದೀಪಗಳು ಆರಿಹೋಗಿವೆ ಎಂಬ ಸುದ್ದಿ ಪಟ್ಟಣದ ಜನರಲ್ಲಿ ಹರಡುತ್ತಿದ್ದಂತೆ, ಅವರ ಕೋಪ ಮತ್ತು ಅಸಮಾಧಾನವು ಆಸಕ್ತಿಗೆ ತಿರುಗಿತು ಎಂದು ಪತ್ರಿಕೆ ಜಪಾನ್ ಟುಡೇ ಅನ್ನು ಉಲ್ಲೇಖಿಸಿದೆ.

ಕೆಲಸಗಳಿಗೆ ಅಡಚಣೆ

ಕೆಲಸಗಳಿಗೆ ಅಡಚಣೆ

ಇದು ಜಪಾನ್‌ನಿಂದ ಬಂದಿದ್ದು, ಹಾವು ಉಪ ಕೇಂದ್ರಕ್ಕೆ ಹೇಗೆ ಪ್ರವೇಶಿಸುತ್ತದೆ ಎಂದು ಕೆಲವರು ಆಶ್ಚರ್ಯಪಟ್ಟರು. ಇದರಿಂದಾಗಿ ಅವರ ಎಲ್ಲಾ ಕೆಲಸಗಳು ನಿಂತುಹೋದವು ಎಂದು ದೂರಿದ್ದಾರೆ. 'ನಮ್ಮ ಜೀವನಕ್ಕೆ ಪ್ರಮುಖವಾದ ಮೂಲಸೌಕರ್ಯ ವಿದ್ಯುತ್ ಅದನ್ನೇ ಕಡಿತಗೊಳಿಸಿರುವುದು ವ್ಯಾಪಾರಕ್ಕೆ ತೊಮದರೆಯಾಗಿದೆ' ಎಂದು ನಿವಾಸಿಗಳು ಹೇಳಿರುವುದು ಜಪಾನ್ ಟುಡೇ ವರದಿ ಮಾಡಿದೆ. ಮತ್ತೊಬ್ಬರು, "ಹಾವಿನಿಂದ ವಿದ್ಯುತ್ ಕಡಿತಗೊಂಡಿರುವುದು ನಮಗೆ ನಿಜಕ್ಕೂ ಆಶ್ಚರ್ಯ ತಂದಿದೆ' ಎಂದು ಹೇಳಿದ್ದಾರೆ.

ಹಾವು ಜೀವಂತ ದಹನದಿಂದ ಹೊಗೆ

ಹಾವು ಜೀವಂತ ದಹನದಿಂದ ಹೊಗೆ

ವಾಸ್ತವವಾಗಿ, ಆ ಹಾವು ಸಬ್ ಸ್ಟೇಷನ್‌ನಲ್ಲಿನ ವಿದ್ಯುತ್ ತಂತಿಯನ್ನು ಕಚ್ಚಿದೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹೊಗೆ ಬರಲಾರಂಭಿಸಿದೆ. ವಿದ್ಯುತ್ ಕಂಪನಿಯ ಜನರು ಅಲ್ಲಿಗೆ ತಲುಪಿದಾಗ ಹಾವು ಇನ್ನೂ ಉರಿಯುತ್ತಿದ್ದು, ಜೀವಂತ ದಹನದಿಂದಾಗಿ ಹೊಗೆ ಹರಡಿತು. ಇದರಿಂದಾಗಿ, ಕೊರಿಯಾಮ ನಗರದ ಜನರು ಸುಮಾರು ಒಂದು ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಬದುಕಬೇಕಾಯಿತು, ಆದರೆ ಈ ಘಟನೆಯಲ್ಲಿ ಆ ಹಾವು ಕೂಡ ಜೀವ ಕಳೆದುಕೊಂಡಿದೆ.

English summary
Around 10,000 homes in Japan were recently left without electricity after a snake slithered into an electric substation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X