• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದೊಂದಿಗೆ ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅವಿನಾಭಾವ ಸಂಬಂಧ

|
Google Oneindia Kannada News

ನವದೆಹಲಿ,ಜು.8: ಶುಕ್ರವಾರ ಬೆಳಗ್ಗೆ ಸಂಸತ್ತಿನ ಚುನಾವಣಾ ಪ್ರಚಾರದ ವೇಳೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆದು ಅವರು ಸಾವನ್ನಪ್ಪಿದ್ದಾರೆ.

41 ವರ್ಷದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಶೀಂಜೋ ಅಬೆ ಅವರ ಆತ ಬಗ್ಗೆ ಅತೃಪ್ತರಾಗಿದ್ದರು ಮತ್ತು ಅಬೆ ಅವರನ್ನು ಕೊಲ್ಲಲು ಬಯಸಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಜಪಾನ್ ನಾಯಕನ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಬೆ ಅವರೊಂದಿಗಿನ ನನ್ನ ಒಡನಾಟವು ಹಲವು ವರ್ಷಗಳ ಹಿಂದಿನದು. ನಾನು ಗುಜರಾತ್ ಸಿಎಂ ಆಗಿದ್ದಾಗ ಅವರನ್ನು ಪರಿಚಯ ಮಾಡಿಕೊಂಡಿದ್ದೆ. ನಾನು ಪ್ರಧಾನಿಯಾದ ನಂತರ ನಮ್ಮ ಸ್ನೇಹ ಮುಂದುವರೆಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರ ತೀಕ್ಷ್ಣ ಒಳನೋಟಗಳು ಯಾವಾಗಲೂ ನನ್ನ ಮೇಲೆ ಆಳವಾದ ಪ್ರಭಾವ ಬೀರಿದವು ಎಂದು ಪ್ರಧಾನಿ ಮೋದಿ ಟ್ವಿಟ್‌ ಮಾಡಿದ್ದಾರೆ.

Video: ಜಪಾನ್ ಮಾಜಿ ಪ್ರಧಾನಿ ಅಬೆ ಮೇಲೆ ಗುಂಡಿನ ದಾಳಿVideo: ಜಪಾನ್ ಮಾಜಿ ಪ್ರಧಾನಿ ಅಬೆ ಮೇಲೆ ಗುಂಡಿನ ದಾಳಿ

2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಂಗಾ ಆರತಿಯನ್ನು ನೋಡಲು ಶಿಂಜೋ ಅಬೆ ಅವರು ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರಕ್ಕೆ ವಾರಣಾಸಿಗೆ ಬಂದಿದ್ದರು. ಎರಡು ವರ್ಷಗಳ ನಂತರ ಭಾರತದ ಮೊದಲ ಬುಲೆಟ್ ಟ್ರೈನ್‌ಗೆ ಅಡಿಪಾಯ ಹಾಕಲು ಜಪಾನ್‌ನ ಪ್ರಧಾನಿಯಾಗಿದ್ದಾಗ ಅಬೆ ಅವರು ಅಹಮದಾಬಾದ್‌ಗೆ ಭೇಟಿ ನೀಡಿದ್ದರು.

ಒಂದು ವರ್ಷದ ನಂತರ ಶಿಂಜೋ ಅಬೆ ಅವರು ಭಾರತ ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಭೇಟಿ ನೀಡಿದಾಗ ಪ್ರಧಾನಿ ಮೋದಿಯವರಿಗೆ ಅವರ ಖಾಸಗಿ ರಜಾದಿನದ ಮನೆಯಲ್ಲಿ ಆತಿಥ್ಯ ನೀಡಿದ್ದರು. ಜಪಾನ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿ ಶಿಂಜೋ ಅಬೆ ಭಾರತದೊಂದಿಗೆ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿದ್ದರು. 2021ರಲ್ಲಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ನೀಡಲಾಯಿತು.

2014ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕುತೂಹಲಕಾರಿಯಾಗಿ ಶಿಂಜೋ ಅಬೆ ಅವರ ಅಜ್ಜ ಕೂಡ ಭಾರತದೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದರು. 2007ರಲ್ಲಿ ಭಾರತೀಯ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವಾಗ ಅಬೆ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1957ರಲ್ಲಿ ನವದೆಹಲಿಯಲ್ಲಿ ತಮ್ಮ ಅಜ್ಜ, ಜಪಾನ್ ಪ್ರಧಾನಿ ನೊಬುಸುಕೆ ಕಿಶಿ ಅವರನ್ನು ಆತಿಥ್ಯ ವಹಿಸಿದ್ದರು ಎಂದು ನೆನಪಿಸಿಕೊಂಡಿದ್ದರು.

Japans former Prime Minister Shinzo Abes relationship with India

Breaking: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ವಿಧಿವಶBreaking: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ವಿಧಿವಶ

ತಮ್ಮ ಆರ್ಥಿಕ ಸುಧಾರಣೆಗಳು ಮತ್ತು ನೀತಿಗಳಿಗೆ ಹೆಸರುವಾಸಿಯಾದ ಅಬೆ ಅವರ ನೀತಿಗಳು ಜಪಾನಿನ ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡಿತು ಮತ್ತು ಸುಧಾರಣೆಗಳಿಗಾಗಿ ಅವರ ಪ್ರಯತ್ನವು ಜನಪ್ರಿಯವಾಗಿ ಅಬೆನೊಮಿಕ್ಸ್ ಎಂದು ಕರೆಯಲ್ಪಟ್ಟಿತು. ಜಪಾನ್ ಮತ್ತು ಭಾರತದ ನಡುವಿನ ಸಹಯೋಗದ ಸಾಮಾನ್ಯ ಕ್ಷೇತ್ರಗಳು ನಾಗರಿಕ ಪರಮಾಣು ಶಕ್ತಿಯಿಂದ ಇಂಡೋ ಪೆಸಿಫಿಕ್ ಸಮುದ್ರಗಳಲ್ಲಿನ ಭದ್ರತಾ ಕಾಳಜಿ ಹಾಗೂ ಆರ್ಥಿಕ ಪಾಲುದಾರಿಕೆ ಮತ್ತು ಮೂಲಸೌಕರ್ಯದಲ್ಲಿನ ಸಹಯೋಗವನ್ನು ಉತ್ತಮ ಸಂಬಂಧ ಹೊಂದಲಾಗಿತ್ತು.

English summary
Former Japanese Prime Minister Shinzo Abe was shot dead Friday morning while campaigning for parliamentary elections.,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X