• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್‌ನಲ್ಲಿ ಕೋವಿಡ್‌ ತೀವ್ರ ಹೆಚ್ಚಳ: ಜಗತ್ತಿಗೆ ಈ ದೇಶ ಪಾಠ

|
Google Oneindia Kannada News

ಇಸ್ರೇಲ್‌, ಸೆಪ್ಟೆಂಬರ್‌ 08: ಕೊರೊನಾ ವೈರಸ್‌ ಸೋಂಕು ವಿಚಾರದಲ್ಲಿ ಜಾಗತಿಕ ಓಟದಲ್ಲಿ ಮುಂಚೂಣಿಯಾಗುವ ಗುರಿ ಇರುವಂತೆ ಕಂಡಿರುವ ಇಸ್ರೇಲ್‌ ಈಗ ಕೊರೊನಾ ವೈರಸ್‌ ಸೋಂಕಿನ ಮುಖ್ಯ ಹಾಟ್‌ಸ್ಪಾಟ್‌ ಆಗಿದೆ. ಈ ಹಿಂದೆ ತನ್ನ ದೇಶದ ಎಲ್ಲರಿಗೂ ಕೊರೊನಾ ವೈರಸ್‌ ವಿರುದ್ದದ ಲಸಿಕೆಯನ್ನು ಹಾಕಿಸಿದ್ದ ದೇಶ ಎಂದು ಕರೆಸಿಕೊಂಡಿದ್ದ ಇಸ್ರೇಲ್‌ ಈಗ ಅತೀ ಹೆಚ್ಚು ಪಾಸಿಟಿ‌ವ್‌ ಪ್ರಕರಣವನ್ನು ದಾಖಲು ಮಾಡುತ್ತಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳುತ್ತದೆ.

ಯುರೋಪ್‌ ಹಾಗೂ ಯುಎಸ್‌ ಸೇರಿದಂತೆ ಅಧಿಕ ದೇಶಗಳು ಈಗಲೂ ಕೊರೊನಾ ವೈರಸ್‌ ಕಾರಣದಿಂದಾಗಿ ಬಹುತೇಕ ಲಾಕ್‌ಡೌನ್‌ ಎಂದು ಕರೆಯಬಹುದಾದ ಸ್ಥಿತಿಯಲ್ಲಿ ಇದೆ. ಆದರೆ ತಮ್ಮ ಆರ್ಥಿಕ ವಲಯ ಹಾಗೂ ಸಮಾಜದಲ್ಲಿ ಕೊರೊನಾ ನಿರ್ಬಂಧಗಳನ್ನು ಇಸ್ರೇಲ್‌ ಸಡಿಲಿಕೆ ಮಾಡಿದೆ. ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಅಧಿಕವಾಗಿದ ಸ್ಥಳಗಳಲ್ಲಿ ಯಾವ ರೀತಿಯ ಪರಿಸ್ಥಿತಿ ಉಂಟಾಗಬಹುದು ಎಂಬುವುದಕ್ಕೆ ಇಸ್ರೇಲ್‌ ಈಗ ಒಂದು ಉದಾಹರಣಯಾಗಿ ಮಾರ್ಪಟ್ಟಿದೆ.

ಇನ್ನು ಜನರು ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆಯೇ ಎಂಬುವುದು ಈ ಸಂದರ್ಭದಲ್ಲಿ ಮುಖ್ಯವಾಗುವುದಕ್ಕಿಂತಲೂ, ಕೊರೊನಾ ಸೋಂಕಿನ ವಿರುದ್ದ ಜನರು ಲಸಿಕೆಯನ್ನು ಪಡೆದ ಬಳಿಕವೂ ಅದರ ಪರಿಣಾಮ ಹೇಗೆ ಉಂಟಾಗುತ್ತದೆ ಎಂಬುವುದು ಮುಖ್ಯವಾಗಿದೆ. ಅದರಲ್ಲೂ ಈ ಡೆಲ್ಟಾ ವೈರಸ್‌ನ ಸಂದರ್ಭದಲ್ಲಿ ಈ ಅಂಶವು ಪ್ರಮುಖವಾಗಿದೆ.

ಇಸ್ರೇಲ್‌ ತೀರಾ ಇತ್ತೀಚೆಗೆ ಮಕ್ಕಳಿಗೆ ಕೋವಿಡ್‌ ಲಸಿಕೆಯನ್ನು ಹಾಕಲು ಹಾಗೂ ಫೈಜರ್-ಬಯೋಟೆಕ್ ಲಸಿಕೆಯ ಬೂಸ್ಟರ್ ಶಾಟ್ ಅನ್ನು ಹೊರ ತರಲು ನಿರ್ಧರಿಸಿದ ಸಂದರ್ಭದಲ್ಲಿ ಈ ಕೊರೊನಾ ಪ್ರಕರಣಗಳ ಹೆಚ್ಚಳವು ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈಗ ಸುಮಾರು ಒಂದು ಲಕ್ಷಕ್ಕೂ ಅಧಿಕ ಇಸ್ರೇಲ್‌ ಜನರು ಕೊರೊನಾ ವೈರಸ್‌ ಸೋಂಕಿನ ವಿರುದ್ದ ತಮ್ಮ ಮೂರನೇ ಡೋಸ್‌ ಅನ್ನು ಪಡೆಯುತ್ತಿದ್ದಾರೆ.

ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಟೆಲ್ ಹಾ-ಶೋಮರ್‌ನ ಶೆಬಾ ವೈದ್ಯಕೀಯ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗಗಳಲ್ಲಿ ಪರಿಣತಿ ಹೊಂದಿರುವ ಪ್ರಾಧ್ಯಾಪಕರು ಇಯಾಲ್ ಲೆಶೆಂ, "ಲಾಕ್‌ಡೌನ್‌ ಇಲ್ಲದೆಯೇ ನೀವು ಈ ಕೊರೊನಾ ವೈರಸ್‌ ಪರಿಸ್ಥಿತಿಯನ್ನು ಸರಿದೂಗಿಸಬಲ್ಲಿರಿ, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಹಾಗೂ ಸಾವಿನ ಪ್ರಮಾಣವನ್ನು ನಿಯಂತ್ರಣ ಮಾಡಬಲ್ಲಿರಿ ಎಂದಾದರೆ, ಕೋವಿಡ್‌ ಪರಿಸ್ಥಿತಿ ಹೇಗೆ ಕಾಣುತ್ತದೆ ಎಂಬುವುದಕ್ಕೆ ಪ್ರಸ್ತುತ ಪರಿಸ್ಥಿತಿಯೇ ಉದಾಹರಣೆ," ಎಂದು ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಈವರೆಗೆ ಸುಮಾರು ಶೇಕಡ 61 ರಷ್ಟು ಮಂದಿಗೆ ಎರಡು ಡೋಸ್‌ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ಇಸ್ರೇಲ್‌ನಲ್ಲಿ ಡೆಲ್ಟಾ ವೈರಸ್‌ನ ಪ್ರಕರಣಗಳು ತೀವ್ರವಾಗಿ ಹರಡುತ್ತಿದ್ದಂತೆ ಇಸ್ರೇಲ್‌ನಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಇಸ್ರೇಲ್‌ನಲ್ಲಿ ಹಿಂದೆದಿಗಿಂತಲೂ ಅಧಿಕ ಪ್ರಮಾಣದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಈ ಸಂದರ್ಭದಲ್ಲಿ ದಾಖಲಾಗಿದೆ. ಅಂದರೆ ಸುಮಾರು 11,316 ಕೊರೊನಾ ಪ್ರಕರಣಗಳು ವರದಿಯಾಗಿದೆ. ಈ ನಡುವೆ ಗಂಭೀರವಾಗಿ ಸೋಂಕಿನ ಪ್ರಭಾವಕ್ಕೆ ಒಳಗಾದವರ ಸಂಖ್ಯೆಯೂ ತೀವ್ರತರವಾಗಿ ಏರಿಕೆಯಾಗಿದೆ.

ಇನ್ನು ಈ ನಡುವೆ ಕೊರೊನಾ ವೈರಸ್‌ ಸೋಂಕಿಗೆ ಲಸಿಕೆ ಪಡೆಯದ ಮಕ್ಕಳಲ್ಲಿ ಕೊರೊನಾ ವೈರಸ್‌ ಹರಡುವಿಕೆ ಹೆಚ್ಚಳವಾಗಲು ಆರಂಭವಾಗಿದೆ. ಇನ್ನು ಕೊರೊನಾ ವೈರಸ್‌ ಲಸಿಕೆಯನ್ನು ಪಡೆದವರಲ್ಲೂ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಆದರೆ ಈ ಕೊರೊನಾ ವೈರಸ್‌ ಸೋಂಕು ಯಾರು ಲಸಿಕೆಯನ್ನು ಪಡೆದಿಲ್ಲವೋ ಅವರಲ್ಲಿ ಹೆಚ್ಚು ಗಂಭೀರ ಪರಿಣಾಮವನ್ನು ಉಂಟು ಮಾಡಿದೆ. ಈ ಲಸಿಕೆಯು ಕೊರೊನಾ ಸೋಂಕು ಬಾರದಂತೆ ತಡೆಯದಿದ್ದರೂ ಕೂಡಾ ಜನರು ಗಂಭೀರವಾದ ಪರಿಣಾಮವನ್ನು ಎದುರುಸಿವುದರಿಂದ ಸುರಕ್ಷತೆಯನ್ನು ನೀಡಿದೆ.

(ಒನ್‌ ಇಂಡಿಯಾ ಸುದ್ದಿ)

English summary
Israel's Covid Surge Shows The World What's Coming Next.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X