Israel: ಇಸ್ರೇಲ್ ಪ್ರಧಾನಿ ಗುಡುಗು.. ಅರೆಸ್ಟ್ ವಾರಂಟ್ ಬಗ್ಗೆ ಹೇಳಿದ್ದೇನು?

ಇಸ್ರೇಲ್ ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿ ನರಳುವಂತೆ ಆಗಿದೆ. ಗಾಜಾ, ಸಿರಿಯಾ ಮತ್ತು ಲೆಬನಾನ್ ವಿರುದ್ಧ ಯುದ್ಧ ಮಾಡುತ್ತಾ, ಇರಾನ್ ದೇಶವನ್ನೂ ಎದುರು ಹಾಕಿಕೊಂಡಿರುವ ಇಸ್ರೇಲ್‌ಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಅಂದ್ರೆ ಐಸಿಸಿ ದೊಡ್ಡ ಆಘಾತವನ್ನೇ ನೀಡಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ಬಂಧನದ ಭೀತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ಇಸ್ರೇಲ್ ಪ್ರಧಾನಿ ಇದೀಗ ಗುಡುಗಿದ್ದಾರೆ!

ಇಸ್ರೇಲ್ ಸರಿಯಾಗಿ 1 ವರ್ಷದ ಹಿಂದೆ ಗಾಜಾ ಪಟ್ಟಿ ಮೇಲೆ ಯುದ್ಧ ಸಾರಿತ್ತು. ಆ ನಂತರ ಲೆಬನಾನ್ ನೆಲದಿಂದ ಹಿಜ್ಬುಲ್ಲಾ & ಸಿರಿಯಾದ ನೆಲದಿಂದ ಕೂಡ ಪ್ರತಿರೋಧ ಎದುರಾಗಿತ್ತು. ಹೀಗೆ ಇಸ್ರೇಲ್ & ಮಧ್ಯಪ್ರಾಚ್ಯ ಭಾಗದ ದೇಶಗಳ ನಡುವೆ ದೊಡ್ಡ ಗಲಾಟೆ ಆರಂಭವಾಗಿತ್ತು. ಘೋರ ಯುದ್ಧವೂ ಆರಂಭ ಆಗಿತ್ತು. ಈಗಾಗಲೇ ಲಕ್ಷಾಂತರ ಜನರು ಈ ಗಲಾಟೆ ಹಿನ್ನೆಲೆ ಜೀವ ಕಳೆದುಕೊಂಡಿದ್ದಾರೆ ಎಂಬ ಆರೋಪ ಇದೆ. ಈ ಆರೋಪಗಳ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗುಡುಗಿದ್ದಾರೆ!

Israeli PM Benjamin Netanyahu Said This About The ICC Order

ಇಸ್ರೇಲ್ ರಕ್ಷಣೆಗಾಗಿ ನಾವು ಕೈಗೊಂಡ...

ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತೆ ಮಾಜಿ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಿದ್ದ ಕಾರಣಕ್ಕೆ ಇಸ್ರೇಲ್ ಗರಂ ಆಗಿದೆ. ಖುದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಕ್ಕ ತಿರುಗೇಟು ನೀಡಿದ್ದಾರೆ.

ಇಸ್ರೇಲ್ ರಕ್ಷಣೆಗೆ ನಾವು ಕೈಗೊಂಡ ಕ್ರಮ ಸರಿ ಇದೆ ಎಂದಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು. ಅಲ್ಲದೆ ಈ ರೀತಿಯಾಗಿ ಗಾಜಾ ಪಟ್ಟಿಯ ಮೇಲೆ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂಬ ಮುನ್ಸೂಚನೆ ಮಾತುಗಳನ್ನೂ ಆಡಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು.

ಯುದ್ಧ ಅಪರಾಧಕ್ಕೆ ಆಗುತ್ತಾ ಶಿಕ್ಷೆ?

ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಅಂದ್ರೆ ಐಸಿಸಿ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ವಿರುದ್ಧ ಗಂಭೀರ ಆರೋಪ ಹೊರಿಸಿತ್ತು. ಅಂದಹಾಗೆ ಯುದ್ಧದಲ್ಲಿ ನಡೆಸಿರುವ ಗಂಭೀರ ಅಪರಾಧ & ಇತರ ತಪ್ಪುಗಳಿಗೆ ಈ ರೀತಿ ಅರೆಸ್ಟ್ ವಾರಂಟ್ ಜಾರಿಗೊಳಿಸಿತ್ತು. ಇದೀಗ ಅರೆಸ್ಟ್ ವಾರಂಟ್‌ಗೆ ಉತ್ತರ ನೀಡಿದ ಇಸ್ರೇಲ್ ಪ್ರಧಾನಿ, ತಾವು ಇದಕ್ಕೆಲ್ಲಾ ಕೇರ್ ಮಾಡಲ್ಲ ಅಂತಿದ್ದಾರೆ.

ಒಟ್ನಲ್ಲಿ ಮಧ್ಯಪ್ರಾಚ್ಯ ಈಗ ಕೊತ ಕೊತ ಕುದಿಯುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗಲೇ, ಇಸ್ರೇಲ್ ಪ್ರಧಾನಿ ಕೂಡ ತಿರುಗೇಟು ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಮಾತಿಗೆ, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಏನು ಹೇಳುತ್ತೆ? ಅಂತಾ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+