ಯುದ್ಧಕ್ಕೆ ಮತ್ತೊಂದು ದಿನ ಬ್ರೇಕ್, ಇಸ್ರೇಲ್ & ಹಮಾಸ್ ಹೇಳಿದ್ದೇನು?
ಹಮಾಸ್ ಉಗ್ರಪಡೆ & ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಸಂಪೂರ್ಣವಾಗಿ ನಿಲ್ಲುವ ಲಕ್ಷಣ ನಿಧಾನವಾಗಿ ಗೋಚರಿಸುತ್ತಿದೆ. ಇಸ್ರೇಲ್ VS ಹಮಾಸ್ ಯುದ್ಧ ಶುರುವಾಗಿ 55ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಸಮಯದಲ್ಲಿ ಕದನ ವಿರಾಮವನ್ನು ಮತ್ತೊಂದು ದಿನಕ್ಕೆ ಮುಂದೂಡಲಾಗಿದೆ. ಈ ಮೂಲಕ ಒತ್ತೆಯಾಳು ಬಿಡುಗಡೆಗೆ ನೆರವಾಗಲು ನಿರ್ಧರಿಸಿದ್ದಾಗಿ, ಇಸ್ರೇಲ್ & ಹಮಾಸ್ ಹೇಳಿದೆ.
ಇದೀಗ ಇವರಿಬ್ಬರ ಮಧ್ಯೆ ಸಂಧಾನ ನಡೆಸುತ್ತಿರುವ ಕತಾರ್ ಈ ಸುದ್ದಿ ನೀಡಿದೆ. ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರು ಇನ್ನೂ ಒಂದು ದಿನ ತಾತ್ಕಾಲಿಕ ಕದನ ವಿರಾಮ ವಿಸ್ತರಣೆಗೆ ಒಪ್ಪಿದ್ದಾರೆ ಎಂದು ಕತಾರ್ ತಿಳಿಸಿದೆ. ಅಂದಹಾಗೆ 2 ದಿನ ವಿಸ್ತರಣೆ ಮಾಡಲಾಗಿದ್ದ ಈ ಕದನ ವಿರಾಮ ಇಂದು ಅಂದರೆ ಗುರುವಾರ ಬೆಳಗ್ಗೆ ಕೊನೆಯಾಗಿದೆ. ಹೀಗಾಗಿ ಮತ್ತೊಂದು ದಿನಕ್ಕೆ ಯುದ್ಧ ಮುಂದೂಡಿಕೆ ಆಗಿದೆ. ಪ್ರತಿ 10 ಒತ್ತೆಯಾಳು ಬಿಡುಗಡೆಗೆ 1 ದಿನದಂತೆ, ಈಗ ಕದನ ವಿರಾಮ ವಿಸ್ತರಣೆ ಮಾಡಲು ಇಸ್ರೇಲ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಒತ್ತೆಯಾಳು & ಕೈದಿಗಳ ಬಿಡುಗಡೆ
ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಒಪ್ಪಂದ ಏರ್ಪಟ್ಟಿರುವ ರೀತಿ, ಒಂದ್ಕಡೆ ಇತ್ತ ಹಮಾಸ್ ಉಗ್ರರು ಇಸ್ರೇಲ್ ಹಾಗೂ ವಿದೇಶಿ ಮೂಲದ ಒತ್ತೆಯಾಳುಗಳನ್ನ ರಿಲೀಸ್ ಮಾಡಿ ಪ್ರತಿಯಾಗಿ ಪ್ಯಾಲೆಸ್ತೀನ್ ನಾಗರಿಕರನ್ನ ರಿಲೀಸ್ ಮಾಡಿಸುತ್ತಿದ್ದಾರೆ. ಕದನ ವಿರಾಮದ 6ನೇ ದಿನವಾದ ಗುರುವಾರದ ಒಪ್ಪಂದದಂತೆ ಪ್ಯಾಲೆಸ್ಟೀನ್‌ನ ಒಟ್ಟು 30 ನಾಗರಿಕರನ್ನ ಇಸ್ರೇಲ್ ಈಗ ರಿಲೀಸ್ ಮಾಡಿದೆಯಂತೆ. ಅದೇ ರೀತಿ ಹಮಾಸ್ 16 ಒತ್ತೆಯಾಳುಗಳ ರಿಲೀಸ್ ಮಾಡಿದೆ.
ಸಾವಿರಾರು ಜನರು ಯುದ್ಧಕ್ಕೆ ಬಲಿ
ಹಮಾಸ್ ಉಗ್ರರು ಮಾಡಿದ್ದ ತಪ್ಪಿಗೆ 55 ದಿನದಲ್ಲಿ ಗಾಜಾಪಟ್ಟಿ ಜನ ನರಳುತ್ತಿದ್ದು, ಈಗಾಗಲೇ 15,000ಕ್ಕೂ ಹೆಚ್ಚು ಗಾಜಾಪಟ್ಟಿ ಜನರು ಯುದ್ಧಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಇಸ್ರೇಲ್ ಕೂಡ 1,200 ಜನರ ಕಳೆದುಕೊಂಡಿದೆ. ಕೇವಲ 55 ದಿನ ಅಂತರದಲ್ಲಿ ಇಷ್ಟೊಂದು ಸಾವು ನೋಡಿದ್ದ ಜಗತ್ತಿಗೆ ಚಿಂತೆ ಶುರುವಾಗಿತ್ತು. ಹೀಗಾಗಿ ಜಾಗತಿಕ ಮಟ್ಟದಲ್ಲಿ ಯುದ್ಧವನ್ನ ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಒತ್ತಾಯ ಕೂಡ ಜೋರಾಗಿದೆ. ಆದರೆ ಈ ವಿಚಾರದ ಬಗ್ಗೆ ಇಸ್ರೇಲ್ ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ. ಹೀಗಾಗಿ ಯುದ್ಧಕ್ಕೆ ಸಂಪೂರ್ಣ ಬ್ರೇಕ್ ಹಾಕುವುದು ತಡವಾಗುತ್ತಿದೆ.

ಬೀದಿಗೆ ಬಿದ್ದಿರುವ ಹತ್ತಾರು ಲಕ್ಷ ಜನ
ಹಮಾಸ್ ಉಗ್ರರು & ಇಸ್ರೇಲ್ ನಡುವೆ ಯುದ್ಧ ಶುರುವಾಗಿ ಇನ್ನೇನು 2 ತಿಂಗಳು ಕಂಪ್ಲೀಟ್ ಆಗಲಿದೆ. ಇದೇ ಸಮಯದಲ್ಲಿ ಗಾಜಾಪಟ್ಟಿ ಸಾವಿರಾರು ಜನರನ್ನ ಕಳೆದುಕೊಂಡಿದೆ. ಇದು ಮಾತ್ರವಲ್ಲ ಹತ್ತಾರು ಲಕ್ಷ ಜನರು ತಮ್ಮ ಮನೆ & ಆಸ್ತಿ ಮತ್ತು ಕುಟುಂಬ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ವಿಶ್ವಸಂಸ್ಥೆ ಸಹಿತ ಜಾಗತಿಕ ಮಟ್ಟದಲ್ಲಿ ಇದೀಗ ಇಸ್ರೇಲ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಯುದ್ಧವನ್ನು ಸಂಪೂರ್ಣ ನಿಲ್ಲಿಸುವಂತೆ ಒತ್ತಡ ಹೇರಲಾಗುತ್ತಿದ್ದು, ಈ ಬಗ್ಗೆ ಇಸ್ರೇಲ್ ಯಾವ ನಿರ್ಣಯ ಕೈಗೊಳ್ಳುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.
ಮಕ್ಕಳ ಸಾವಿನ ಸಂಖ್ಯೆ ಹೆಚ್ಚು
ಗಾಜಾಪಟ್ಟಿ ನಗರ ಪುಟಾಣಿ ಮಕ್ಕಳಿಂದಲೇ ತುಂಬಿ ಹೋಗಿದೆ ಇಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಎನ್ನಲಾಗಿದೆ. ಇದೇ ಕಾರಣಕ್ಕೆ ಹಮಾಸ್ ಉಗ್ರರು & ಇಸ್ರೇಲ್ ನಡುವೆ ಯುದ್ಧ ಶುರುವಾದ ನಂತರ, ಭಾರಿ ಪ್ರಮಾಣದಲ್ಲಿ ಮಕ್ಕಳೇ ಜೀವ ಬಿಟ್ಟಿದ್ದಾರೆ. ಹೀಗಾಗಿ ಇಡೀ ಜಗತ್ತೆ ಯದ್ಧದ ಬಗ್ಗೆ ಬೇಸರ ಹೊರಹಾಕುತ್ತಿದೆ. ಅಲ್ಲದೆ ಯುದ್ಧವನ್ನು ನಿಲ್ಲಿಸಬೇಕು ಎಂಬ ಒತ್ತಡ ಇದೀಗ ಹೆಚ್ಚಾಗುತ್ತಿದೆ. ಆದರೆ ಒತ್ತೆಯಾಳುಗಳು ಹಾಗೂ ಪ್ಯಾಲೆಸ್ತೀನ್ ನಾಗರಿಕರ ಬಿಡುಗಡೆ ನಂತರ ಮತ್ತೆ ಗಾಜಾಪಟ್ಟಿ ನಗರದಲ್ಲಿ ಯುದ್ಧ ಶುರುವಾಗುತ್ತಾ? ಎಂಬ ಆತಂಕದ ಕಾರ್ಮೋಡವೂ ಆವರಿಸಿದೆ.












Click it and Unblock the Notifications