ಸಿಂಹ ಘರ್ಜನೆಗೆ ಬೆಚ್ಚಿಬಿದ್ದ ಇರಾನ್, ಸೇನಾ ಕಾರ್ಯಾಚರಣೆಗೆ ವಿಶೇಷ ಹೆಸರು ಇಟ್ಟ ಇಸ್ರೇಲ್ | Operation Roaring Lion

ಪ್ರಪಂಚದ ಶ್ರೀಮಂತ ರಾಷ್ಟ್ರಗಳೇ ತುಂಬಿ ಹೋಗಿರುವ ಮಧ್ಯಪ್ರಾಚ್ಯದಲ್ಲಿ ಘೋರ ಯುದ್ಧವೇ ಈಗ ಆರಂಭ ಆಗಿದೆ. ನೋಡ ನೋಡುತ್ತಲೇ ಇರಾನ್ ವಿರುದ್ಧ ಅಮೆರಿಕ & ಇಸ್ರೇಲ್ ದಾಳಿ ಮಾಡುತ್ತಿವೆ. ಅಮೆರಿಕ ಮತ್ತು ಇಸ್ರೇಲ್ ಮತ್ತೊಮ್ಮೆ ಒಟ್ಟಾಗಿ ಯುದ್ಧದ ಅಖಾಡಕ್ಕೆ ಎಂಟ್ರಿ ಕೊಟ್ಟಿವೆ. ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ & ಇಸ್ರೇಲ್ ಪಾಲಿಗೆ ಸಮಾನ ಶತ್ರುವಾಗಿರುವ, ಇರಾನ್ ವಿರುದ್ಧ ಭೀಕರ ಸೇನಾ ಕಾರ್ಯಾಚರಣೆ ಶುರುವಾಗಿದೆ. ಇಸ್ರೇಲ್ ಮತ್ತು ಅಮೆರಿಕ ಪಕ್ಕಾ ಪ್ಲಾನ್ ಮಾಡಿ ಯುದ್ಧವನ್ನ ಶುರು ಮಾಡಿದ್ದು, ಮೊದಲಿಗೆ ಇಸ್ರೇಲ್ ದಾಳಿ ಶುರು ಮಾಡಿ ಮುನ್ನೆಚ್ಚರಿಕೆ ಕ್ರಮ ಎಂದು ಕರೆದಿತ್ತು.

ಹೀಗೆ ಇಸ್ರೇಲ್ ದಾಳಿ ನಂತರ, ದಿಢೀರ್ ದಾಳಿ ಶುರು ಮಾಡಿರುವ ಅಮೆರಿಕ ಕೂಡ ಭರ್ಜರಿ ಹೊಡೆತ ನೀಡಿ ಇರಾನ್ ನಡುಗುವಂತೆ ಮಾಡಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಭೀಕರ ಕದನ ಶುರುವಾಗಿ, ಇಡೀ ಜಗತ್ತು ಈಗ ಚಿಂತೆ ಮಾಡುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಈ ಕಾರ್ಯಾಚರಣೆಗೆ ವಿಶೇಷ ಹೆಸರು ಕೊಟ್ಟಿದೆ ಇಸ್ರೇಲ್ ಮತ್ತು ಅಮೆರಿಕ. ಆಪರೇಷನ್ ಸಿಂಹ ಘರ್ಜನೆ ಎಂದು ಕರೆಯಲಾಗಿರುವ ಹೊಸ ಸೇನಾ ಕಾರ್ಯಾಚರಣೆಗೆ ಈಗ ಇರಾನ್ ನಲುಗಿ ಹೋಗಿದ್ದು, ಯುದ್ಧದ ಭೀಕರತೆ ಇನ್ನಷ್ಟು ಹೆಚ್ಚಾಗುವ ಆತಂಕ ಕಾಡುತ್ತಿದೆ.

Israel Military

ಆಪರೇಷನ್ ಸಿಂಹ ಘರ್ಜನೆ ಜೋರು!

ಅಮೆರಿಕ ಮತ್ತು ಇಸ್ರೇಲ್ ಈ ದಾಳಿ ನಡೆಸುವ ಮೊದಲು ಹಲವು ಬಾರಿ ಎಚ್ಚರಿಕೆಯನ್ನು ನೀಡಿದ್ದವು. ತಕ್ಷಣ ಪರಮಾಣು ಒಪ್ಪಂದಕ್ಕೆ ಇರಾನ್ ಒಪ್ಪದಿದ್ದರೆ 2025ರ ಜೂನ್ ದಾಳಿಗಿಂತ ಕಠಿಣ ದಾಳಿ ಗ್ಯಾರಂಟಿ, ಎಂಬ ಎಚ್ಚರಿಕೆ ನೀಡಿತ್ತು ಅಮೆರಿಕ. ಈ ಬೆಳವಣಿಗೆ ನಂತರ ವೇಗ & ಬಲದಿಂದ ಕಾರ್ಯನಿರ್ವಹಿಸುವ ಭಾರಿ ನೌಕಾಪಡೆ ಇರಾನ್ ಕಡೆಗೆ ಸಾಗುತ್ತಿದೆ ಎಂದು ವಾರ್ನಿಂಗ್ ಕೊಟ್ಟಿದ್ದರು ಟ್ರಂಪ್. ಆದರೆ ಎಲ್ಲವೂ ಮಾತುಕತೆ ಮೂಲಕ ಸರಿ ಹೋಗಬಹುದು ಎಂಬ ನಿರೀಕ್ಷೆಯಲ್ಲಿ ಮಧ್ಯಪ್ರಾಚ್ಯದ ಜನರು ಇದ್ದರೂ, ದಿಢೀರ್ ಯುದ್ಧ ಶುರುವಾಗಿದೆ. ಈ ಮೂಲಕ ಆಪರೇಷನ್ ಸಿಂಹ ಘರ್ಜನೆ ಜೋರಾಗಿದ್ದು, ಪ್ರಜೆಗಳು ಒದ್ದಾಡುವಂತಾಗಿದೆ.

ಬಲಿಷ್ಠ ಸೇನೆ ಹೊಂದಿರುವ ಇಸ್ರೇಲ್

ಅಂದಹಾಗೆ ಇಸ್ರೇಲ್ ಸೇನೆ ಕೂಡ ಬಲಿಷ್ಠವಾಗಿದ್ದು, ಸುಮಾರು 1,70,000 ಸಕ್ರಿಯ ಸೈನಿಕರನ್ನು ಈ ದೇಶ ಹೊಂದಿದೆ. ಇದರ ಜೊತೆಗೆ 4 ಲಕ್ಷಕ್ಕೂ ಹೆಚ್ಚು ಮೀಸಲು ಪಡೆ ಕೂಡ ಇರುವುದು ಈ ಪುಟಾಣಿ ದೇಶಕ್ಕೆ ಆನೆಬಲ ತರಿಸಿದೆ. ಹೀಗೆ 600ಕ್ಕೂ ಹೆಚ್ಚು ಯುದ್ಧ ವಿಮಾನಗಳು ಅಮೆರಿಕ ಜೊತೆ ಸೇರಿ, ಇರಾನ್ ಮೇಲೆ ದಾಳಿ ಮಾಡಲು ಸಜ್ಜಾಗಿವೆ. ಸಾವಿರಾರು ಕ್ಷಿಪಣಿಗಳು ಇಸ್ರೇಲ್ ಬಳಿ ಇದ್ದು, ಯಾವುದೇ ಕ್ಷಣ ಈ ಯುದ್ಧ 3ನೇ ಮಹಾ ಯುದ್ಧವಾಗಿ ಬದಲಾಗುವ ಭಯವೂ ಆವರಿಸಿದೆ ಪ್ರಪಂಚದಲ್ಲಿ. ಮತ್ತೊಂದು ಕಡೆ ಇರಾನ್ ಕೂಡ ಪ್ರತಿದಾಳಿ ಶುರು ಮಾಡಿದ್ದು ಇಸ್ರೇಲ್ ಹೈಅಲರ್ಟ್ ಆಗಿದೆ. ಹೀಗಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಕೂಡ ಈಗಾಗಲೇ ಘೋಷಣೆ ಆಗಿದ್ದು, ಇಸ್ರೇಲ್‌ನ ಹಲವೆಡೆ ಸೈರನ್ ಸದ್ದು ಕೇಳಿಬಂದಿದೆ.

ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದೇನು?

ಇರಾನ್ ರಾಜಧಾನಿ ತೆಹ್ರಾನ್ ನಗರದಲ್ಲಿ ದಿಢೀರ್ ದೊಡ್ಡ ಮಟ್ಟದ ಸ್ಫೋಟದ ಸದ್ದು ಕೇಳಿಬಂದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಇದೇ ಕಾರಣಕ್ಕೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಸೇನಾ ಉದ್ವಿಗ್ನತೆಯೂ ಹೆಚ್ಚಾಗಿ ಯುದ್ಧ ಶುರುವಾಗಿದೆ. ದಾಳಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಡೆಸಿದ್ದೇವೆ ಎಂದು ಈಗ ಇಸ್ರೇಲ್ ಹೇಳಿಕೊಂಡಿದ್ದು ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯೂ ಈಗ ಹುಸಿಯಾಗಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಸೇನಾ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿ ಗುಡುಗಿದ್ದಾರೆ. ಭದ್ರತೆಗೆ ಧಕ್ಕೆ ಉಂಟುಮಾಡುವ ಅಪಾಯ ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+