ಅಮೆರಿಕ ಯುದ್ಧನೌಕೆ ಮೇಲೆ ದಾಳಿ ಮಾಡಿದ ಇರಾನ್, ಮಧ್ಯಪ್ರಾಚ್ಯ ಸಮುದ್ರ ಭಾಗದಲ್ಲೂ ಹಿಂಸಾಚಾರ | Israel Military
ಇಸ್ರೇಲ್ ಹಾಗೂ ಅಮೆರಿಕ ದಾಳಿಯ ಹಿನ್ನೆಲೆ ನಲುಗಿ ಹೋಗಿರುವ ಇರಾನ್ ಮರುದಾಳಿ ನಡೆಸುತ್ತಾ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಸಾಲು ಸಾಲು ಹಿಂಸಾಚಾರ ಹಾಗೂ ತಿಕ್ಕಾಟ ಜೋರಾಗುತ್ತಿದೆ. ನೋಡ ನೋಡುತ್ತಲೇ ಮಧ್ಯಪ್ರಾಚ್ಯದ ಪ್ರತಿಯೊಂದು ದೇಶ ಕೂಡ ಈ ಹಿಂಸೆಯ ಬೆಂಕಿಯಲ್ಲಿ ಬಳಲಿ ಹೋಗುವ ಲಕ್ಷಣ ಗೋಚರಿಸುತ್ತಿದೆ. ಅದರಲ್ಲೂ ಅಮೆರಿಕ ಸೇನಾ ನೆಲೆ ಹೊಂದಿರುವ ದೇಶಗಳ ಮೇಲೆ ಇರಾನ್ ಸೇನೆ ದಾಳಿ ಶುರು ಮಾಡಿದೆ. ದೊಡ್ಡ ದೊಡ್ಡ ಕ್ಷಿಪಣಿ ಬಳಕೆ ಮಾಡಿ ದಾಳಿ ಮಾಡುತ್ತಿದೆ ಇರಾನ್ ಸೇನೆ. ಇಂತಹ ಸಮಯದಲ್ಲೇ ಅಮೆರಿಕ ಯುದ್ಧನೌಕೆ ಮೇಲೆ ಕೂಡ ಅಟ್ಯಾಕ್ ಆಗಿದೆ. ಅಮೆರಿಕದ ಯುದ್ಧ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಈಗ ಇರಾನ್ ನಡೆಸಿದ ದಾಳಿ ಪರಿಣಾಮ ದೊಡ್ಡ ಸಮಸ್ಯೆಗೆ ತುತ್ತಾಗಿದೆ.
ಅಂದಹಾಗೆ ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆ USS ಅಬ್ರಹಾಂ ಲಿಂಕನ್ ಮಧ್ಯಪ್ರಾಚ್ಯಕ್ಕೆ ಭರ್ಜರಿ ಎಂಟ್ರಿ ಕೊಟ್ಟು ಹಲವು ದಿನಗಳೇ ಕಳೆದು ಹೋಗಿದೆ. ಇರಾನ್ ಬಳಿ ಬೀಡುಬಿಟ್ಟು ಶತ್ರುಗಳ ಎದೆಯಲ್ಲಿ ನಡುಕ ತರಿಸಿದ್ದ USS ಅಬ್ರಹಾಂ ಲಿಂಕನ್ ಯುದ್ಧ ನೌಕೆ ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಯುದ್ಧ ನೌಕೆಗಳ ಪೈಕಿ ಒಂದಾಗಿದೆ. USS ಅಬ್ರಹಾಂ ಲಿಂಕನ್‌ಗೆ ಇರುವ ಮತ್ತೊಂದು ಶಕ್ತಿ ಏನು ಎಂದರೆ, USS ಅಬ್ರಹಾಂ ಲಿಂಕನ್ ಶತ್ರುಗಳ ಜಲಗಡಿಗೆ ಹತ್ತಿರದಲ್ಲೇ ಇದ್ದರೂ ಅದನ್ನ ಗುರುತಿಸುವುದು ಕಷ್ಟ. ಹಾಗೂ ಎಲೆಕ್ಟ್ರಾನಿಕ್ ಸಂಕೇತಗಳು ಸೇರಿ ಯುದ್ಧ ನೌಕೆಗಳ ನಿಖರ ಜಾಗ ತಿಳಿಯಲು ಪ್ರಯೋಗಿಸುವ ತಂತ್ರಗಳನ್ನ ಕೂಡ ಅಬ್ರಹಾಂ ಲಿಂಕನ್ ನಿಭಾಯಿಸುತ್ತೆ. ಹೀಗೆ ಶತ್ರು ದೇಶಗಳಿಗೆ ಈ ನೌಕೆ ವಿರುದ್ಧ ಹೋರಾಡುವುದು ಕಷ್ಟದ ಕೆಲಸವಾಗುತ್ತದೆ.

ಇನ್ನಷ್ಟು ಯುದ್ಧನೌಕೆ ಕಳಿಸುತ್ತಾ ಅಮೆರಿಕ?
ಹೌದು, ಇದೀಗ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧ ನೌಕೆ ಮೇಲೆ ಇರಾನ್ ದಾಳಿ ಮಾಡಿರುವ ಹಿನ್ನೆಲೆ ಅಮೆರಿಕ ಮತ್ತಷ್ಟು ಕೋಪಗೊಂಡಿದೆ. ಇರಾನ್‌ಗೆ ಹೇಗಾದರೂ ಮಾಡಿ ಇದೀಗ ಬುದ್ದಿ ಕಲಿಸಿ ಸೈಲೆಂಟ್ ಮಾಡಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ. ಇದೇ ಕಾರಣಕ್ಕೆ ಮತ್ತಷ್ಟು ಯುದ್ಧನೌಕೆ & ಯುದ್ಧ ವಿಮಾನಗಳನ್ನು ಮಧ್ಯಪ್ರಾಚ್ಯ ಕಡೆಗೆ ನುಗ್ಗಿಸಲು ಅಮೆರಿಕ ಕಾಯುತ್ತಿದೆ. ಹೀಗಾಗಿ ಅಮೆರಿಕ ಮತ್ತು ಇರಾನ್ ನಡುವೆ ಘೋರ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ನೇರವಾಗಿ ಇರಾನ್ ಒಳಗೆ ನುಗ್ಗುವ ಪ್ಲಾನ್ ಕೂಡ ಶುರುವಾಗಿದೆ. ಅಕಸ್ಮಾತ್ ಈ ಪ್ಲಾನ್ ಸಕ್ಸಸ್ ಕಂಡರೆ ಆಗ ಅದು ನೇರವಾಗಿ ಇರಾನ್ ಪಾಲಿಗೆ ದೊಡ್ಡ ಸಮಸ್ಯೆ ತಂದೊಡ್ಡಲಿದೆ, ಅಲ್ಲದೆ ಇರಾನ್ ಶರಣಾಗುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಕೂಡ.
ಇರಾನ್ ಬಳಿ ಪರಮಾಣು ಅಸ್ತ್ರ?
ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಖಮೇನಿ ಮೃತಪಟ್ಟಿರುವುದು ಕನ್ಫರ್ಮ್ ಆದ ನಂತರದಲ್ಲಿ ಭಾರಿ ದೊಡ್ಡ ಬಿರುಗಾಳಿ ಇರಾನ್ ನೆಲಕ್ಕೆ ಅಪ್ಪಳಿಸಿದೆ. ಖಮೇನಿ ಮಾತ್ರವಲ್ಲದೇ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯ ಕಮಾಂಡರ್ ಮೊಹಮ್ಮದ್ ಪಾಕ್‌ಪೂರ್ ಸೇರಿ ಇರಾನ್ ರಕ್ಷಣಾ ಮಂಡಳಿ ಕಾರ್ಯದರ್ಶಿ ಅಲಿ ಶಾಮ್ಖಾನಿ ದಾಳಿಯಲ್ಲಿ ಮೃತಪಟ್ಟಿರುವುದು ಕನ್ಫರ್ಮ್ ಆಗಿದೆ. ಹೀಗಾಗಿ, ಇದೀಗ ಇರಾನ್ ದೊಡ್ಡ ದಾಳಿಗೆ ಸ್ಕೆಚ್ ಹಾಕುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮತ್ತಷ್ಟು ಮೂಲಗಳ ಪ್ರಕಾರ ಇರಾನ್ ಬಳಿ ಈಗಾಗಲೇ ನ್ಯೂಕ್ಲಿಯರ್ ಎಂದರೆ ಪರಮಾಣು ಅಸ್ತ್ರಗಳು ಇದ್ದು, ಅದನ್ನ ನೇರ ಬಳಕೆ ಮಾಡಲು ಇರಾನ್ ಸಿದ್ಧವಾಗಿದೆ ಎಂಬ ಚರ್ಚೆ ಕೂಡ ಶುರುವಾಗಿದೆ. ಆದರೆ ಪರಮಾಣು ಅಸ್ತ್ರ ಇರುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ, ಹೀಗಿದ್ದರೂ ಆತಂಕ ಮಾತ್ರ ಹೆಚ್ಚಾಗಿದೆ.












Click it and Unblock the Notifications