Gaza Conflict: ಇಸ್ರೇಲ್ & ಗಾಜಾ ಭೀಕರ ಕದನ 2 ವರ್ಷಗಳ ನಂತರ ಅಂತ್ಯ

ಯುದ್ಧದ ಅಮಲು ಕಡಿಮೆ ಆಗುತ್ತಿದೆ, ಮನುಷ್ಯರು ಕ್ರಮೇಣ ಮತ್ತೆ ಮನುಷ್ಯತ್ವ ತೋರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇದೀಗ ದಿಢೀರ್ ಇಸ್ರೇಲ್ & ಗಾಜಾ ಪಟ್ಟಿ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯಲಾಗಿದೆ. ಅಂದಹಾಗೆ 2023 ಅಕ್ಟೋಬರ್ 07 ಶನಿವಾರ ಶುರುವಾಗಿದ್ದ ಇಸ್ರೇಲ್ & ಹಮಾಸ್ ನಡುವಿನ ಯುದ್ಧ ಸರಿಯಾಗಿ 2 ಪೂರೈಸಿದ ಬೆನ್ನಲ್ಲೇ ಇದೀಗ ಯುದ್ಧಕ್ಕೆ ಬ್ರೇಕ್ ಹಾಕಲಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮುಂದಾಳತ್ವ ಹಾಗೂ ಕೊನೆಗೂ ಹಮಾಸ್ ತನ್ನ ಬಳಿ ಇದ್ದ ಇಸ್ರೇಲ್ ಒತ್ತೆಯಾಳು ಬಿಡುಗಡೆ ಮಾಡಲು ಒಪ್ಪಿದ ನಂತರ ಡೆಡ್ಲಿ ವಾರ್ ನಿಂತು ಹೋಗಿದೆ.

50,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಇಸ್ರೇಲ್ & ಹಮಾಸ್ ವಾರ್, ಜಗತ್ತಿನ ಅತ್ಯಂತ ಭೀಕರ ಯುದ್ಧಗಳ ಪೈಕಿ ಒಂದು ಎನಿಸಿಕೊಂಡಿದೆ. ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ & ಹಮಾಸ್ ಯುದ್ಧ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಇಸ್ರೇಲ್ ಸೇನೆಯಿಂದ ಗಾಜಾ ಪಟ್ಟಿಯಲ್ಲಿ ಭೀಕರ ದಾಳಿ ನಡೆಯುತ್ತಿದೆ ಅಂತಾ ಆರೋಪಿಸಿ ಇರಾನ್ ಕೂಡ ಯುದ್ಧ ಸಾರಿತ್ತು. ಕೊನೆಗೆ ಯುದ್ಧ ನಿಲ್ಲಿಸಲು ಅಮೆರಿಕ ಹೆಣಗಾಡಿತ್ತು. ಹಾಗೋ ಹೀಗೋ ಮಾಡಿ ಇರಾನ್ & ಇಸ್ರೇಲ್ ಯುದ್ಧಕ್ಕೆ ಕೂಡ ಇದೇ ಟ್ರಂಪ್ ಅವರು ಕೊನೆ ಹಾಡಿದ್ದರು. ಇದೀಗ ಇಸ್ರೇಲ್ & ಗಾಜಾ ಪಟ್ಟಿ ಯುದ್ಧಕ್ಕೆ ಬ್ರೇಕ್ ಹಾಕಿದ್ದು ಭಾರಿ ದೊಡ್ಡ ಬೆಳವಣಿಗೆಗೆ ಸಾಕ್ಷಿಯಾಗಿದೆ.

Israel Hamas Conflict End And This Is How Social Media Users Are Reacted

ಡೊನಾಲ್ಡ್ ಟ್ರಂಪ್‌ಗೆ ಭರ್ಜರಿ ಸ್ವಾಗತ!

ಇಸ್ರೇಲ್ & ಹಮಾಸ್ ಯುದ್ಧ ನಿಂತ ನಂತರ ಅಮೆರಿಕ ಅಧ್ಯಕ್ಷ ನೇರವಾಗಿ ಇಸ್ರೇಲ್‌ಗೆ ಭೇಟಿ ನೀಡಿ, ಮಾತುಕತೆ ಕೂಡ ನಡೆಸಿದ್ದಾರೆ. ಹೀಗೆ ಡೊನಾಲ್ಡ್ ಟ್ರಂಪ್ ಭೇಟಿ ಕೊಟ್ಟ ಸಮಯದಲ್ಲಿ, ಇಸ್ರೇಲ್‌ನ ಇಡೀ ಸಂಸತ್ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಟ್ರಂಪ್ ಅವರಿಗೆ ಭಾರಿ ದೊಡ್ಡ ಗೌರವ & ಪ್ರೀತಿ ತೋರಿಸಿದೆ. ಪ್ರಮುಖವಾಗಿ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ ವಿಚಾರ ಇದೀಗ ಸಂತಸವನ್ನು ತರಿಸಿದೆ.

ಮಧ್ಯಪ್ರಾಚ್ಯ ನೆಮ್ಮದಿಯಾಗಿ ನಿದ್ದೆ ಮಾಡಬಹುದು!

ಇಸ್ರೇಲ್ & ಗಾಜಾ ನಡುವೆ ಶಾಂತಿ ಮಾತುಕತೆ ನಡೆಸಿ ಪರಿಸ್ಥಿತಿ ಸರಿ ಮಾಡಿ, ಮಧ್ಯಪ್ರಾಚ್ಯದಲ್ಲಿ ಎದುರಾದ ಸಂಕಷ್ಟ ಸರಿ ಮಾಡೋಣ ಅಂತಾ ಇಡೀ ಜಗತ್ತು ಪ್ರಯತ್ನವನ್ನ ಮಾಡಿತ್ತು. ಕೊನೆಗೆ ಎಲ್ಲರ ಪ್ರಯತ್ನಕ್ಕೆ ಇದೀಗ ಯಶಸ್ಸು ಸಿಕ್ಕಂತೆ ಆಗಿದೆ. ಹಾಗೇ ಮಧ್ಯಪ್ರಾಚ್ಯ ನೆಮ್ಮೆದಿಯಾಗಿ ನಿದ್ದೆ ಮಾಡಬಹುದು ಅನ್ನೋ ಮಾತನ್ನು ಹೇಳುತ್ತಿದ್ದಾರೆ ಸೋಷಿಯಲ್ ಮೀಡಿಯಾ ಬಳಕೆದಾರರು. ಹಾಗೇ ಇಸ್ರೇಲ್ & ಗಾಜಾ ಪಟ್ಟಿ ಯುದ್ಧ ನಿಂತ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+