ಹೊಡೆದಾಟ & ಬಡಿದಾಟದ ನಡುವೆ ಊಟ ಇಲ್ಲದೆ ನಲುಗಿ ಹೋದ ಗಾಜಾ ನಿವಾಸಿಗಳು?
ಗಾಜಾ ವಿಚಾರ ಪ್ರಪಂಚದ ಮೂಲೆ ಮೂಲೆಯಲ್ಲಿ ಚರ್ಚೆಗೆ ಬರುತ್ತಿದ್ದು, ಅಲ್ಲಿನ ಜನರ ಸ್ಥಿತಿಗೆ ಇದೀಗ ಪ್ರಪಂಚ ಮರುಗುವಂತೆ ಆಗಿದೆ ಎಂಬ ಆರೋಪ ಇದೆ. ಅದರಲ್ಲೂ ಹಮಾಸ್ ಮೇಲಿನ ಸಿಟ್ಟಿಗೆ ಇದೀಗ ಇಸ್ರೇಲ್ ಭಾರಿ ಘೋರವಾಗಿ ದಾಳಿ ಮಾಡುತ್ತಿರುವ ಆರೋಪ ಕೂಡ ಸಂಚಲನ ಸೃಷ್ಟಿ ಮಾಡುತ್ತಿದೆ. ಒಂದು ಕಡೆ ಅಮೆರಿಕ ಗಟ್ಟಿಯಾಗಿ ಇಸ್ರೇಲ್ ಪರ ನಿಂತಿದ್ದರೆ, ಇನ್ನೊಂದು ಕಡೆ ಇದೇ ವಿಚಾರ ಜಾಗತಿಕ ಮಟ್ಟದಲ್ಲಿ ತಲ್ಲಣಕ್ಕೆ ವೇದಿಕೆ ಒದಗಿಸಿದೆ. ಹಾಗಾದರೆ ಅಸಲಿಗೆ ಗಾಜಾ ಹೇಗಿದೆ ಈಗ?
ಅಂದಹಾಗೆ ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಟ್ರಂಪ್ ಹಮಾಸ್ & ಇಸ್ರೇಲ್ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡಿದ್ದೇವೆ ಅಂತಾ ಘೋಷಣೆ ಕೂಡ ಹೊರಡಿಸಿದ್ದರು. ಆದರೆ ಹೀಗೆಲ್ಲಾ ಘೋಷಣೆ ಹೊರಡಿಸಿದ ಕೆಲವೇ ದಿನಗಳಲ್ಲಿ ಮತ್ತೆ ಘೋರವಾಗಿ ಯುದ್ಧ ಆರಂಭವಾಗಿದೆ. ಅಲ್ಲದೆ ಗಾಜಾ ಪಟ್ಟಿಯಲ್ಲಿ ಈಗ ನರಕದ ವಾತಾವರಣ ಸೃಷ್ಟಿಯಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಇದೀಗ ಇಸ್ರೇಲ್ ಪಡೆಗಳು ಗಾಜಾದ ಮೇಲೆ ದಾಳಿಯನ್ನ ಇನ್ನಷ್ಟು ಭೀಕರಗೊಳಿಸಿವೆ. ಹೀಗಾಗಿಯೇ ಅಮೆರಿಕ ಈಗ ಇಕ್ಕಟ್ಟಿಗೆ ಸಿಲುಕಿದೆಯಾ? ಅನ್ನೋ ಪ್ರಶ್ನೆಗಳು ಕೂಡ ಮೂಡಿದೆ. ಮತ್ತೊಂದು ಕಡೆ ಈ ಸಂಕಷ್ಟದ ಸಮಯದಲ್ಲಿ ತುತ್ತು ಅನ್ನಕ್ಕೂ ಗಾಜಾ ನಿವಾಸಿಗಳು ಒದ್ದಾಡುವಂತೆ ಆಗಿದೆ...

ಗಾಜಾ ಪಟ್ಟಿಯಲ್ಲಿ ನರಕದ ವಾತಾವರಣ?
ಮಧ್ಯಪ್ರಾಚ್ಯ ಅನ್ನೋದು ಒಡೆದ ಮನೆಯಾಗಿದ್ದು, ಎಲ್ಲಿ ಯಾವಾಗ ಯುದ್ಧ ಶುರುವಾಗುತ್ತೋ? ಎಂಬ ಭಯ ಆವರಿಸಿದೆ. ಒಂದು ಯುದ್ಧ ಮುಗಿಯುತ್ತಿದ್ದಂತೆ ಮತ್ತೊಂದು ಯುದ್ಧ ಶುರುವಾಗಿ, ಆ ಮೂಲಕ ಇನ್ನಷ್ಟು ತಿಕ್ಕಾಟ ನಡೆಯುತ್ತಿದೆ. ಅಲ್ಲದೆ ಈ ರೀತಿ ಜಗಳ ಜೋರಾಗುತ್ತಿರುವ ವೇಳೆ ಗಾಜಾ ನಿವಾಸಿಗಳು ತುತ್ತು ಅನ್ನ & ಹನಿ ಹನಿ ನೀರಿಗೂ ನರಳುವ ವಾತಾವರಣ ಸೃಷ್ಟಿಯಾಗಿದೆ. ಈ ಮೂಲಕ ತಮ್ಮದಲ್ಲದ ತಪ್ಪಿಗೆ ಕಂದಮ್ಮಗಳು ಪರದಾಡುತ್ತಿದ್ದು, ಸ್ಥಳೀಯರ ಸಂಕಷ್ಟ ಈಗ ಪ್ರಪಂಚದ ಮೂಲೆ ಮೂಲೆಯಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆದಷ್ಟು ಬೇಗ ಹಿಂಸಾಚಾರ ನಿಲ್ಲಲಿ ಅಂತಾ ಇಡೀ ಪ್ರಪಂಚದಲ್ಲಿ ಜನರು ಪ್ರಾರ್ಥನೆ ಮಾಡುತ್ತಿದ್ದಾರೆ. ಹಾಗೇ ಮಧ್ಯಪ್ರಾಚ್ಯ ದೇಶಗಳು ಕೂಡ ಈ ವಿಚಾರದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತು ಹೋಗಿವೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗಿದ್ದು, ಈ ಎಲ್ಲಾ ತಿಕ್ಕಾಟಕ್ಕೂ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆ ಇದೆ...












Click it and Unblock the Notifications