• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್ ಕದನ ವಿರಾಮ ಘೋಷಣೆ- ನೆತನ್ಯಾಹು ಸೋಲು, ಪ್ಯಾಲೆಸ್ತೇನ್‌ನ ಗೆಲುವು ಎಂದ ಹಮಾಸ್

|
Google Oneindia Kannada News

ಗಾಜಾ, ಮೇ 21: ಮಹತ್ವದ ಬೆಳವಣಿಗೆಯೊಂದರಲ್ಲಿ ಇಸ್ರೇಲ್ ಮತ್ತು ಹಮಾಸ್ ಎರಡೂ ಮುಂಜಾನೆ 2 ಗಂಟೆಗೆ ಕದನ ವಿರಾಮವನ್ನು ಘೋಷಿಸಿದೆ. ಈ ಮೂಲಕ ಗಾಜಾ ಪ್ರದೇಶದಲ್ಲಿ ಭಾರಿ ಪ್ರಾಣ ಹಾನಿ, ನಷ್ಟಕ್ಕೆ ಕಾರಣವಾದ 11 ದಿನಗಳ ಯುದ್ಧಕ್ಕೆ ತೆರೆಬಿದ್ದಿದೆ.

ಇನ್ನು ಈ ಬೆಳವಣಿಗೆಯನ್ನು ವಿಶ್ವಸಂಸ್ಥೆ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸ್ವಾಗತಿಸಿದ್ದಾರೆ. ಆದರೆ ಈ ನಡುವೆ, ಪ್ಯಾಲೆಸ್ತೇನ್‌ನ ಉಗ್ರಗಾಮಿ ಸಂಘಟನೆ ಹಮಸ್‌ನ ಅಧಿಕಾರಿಯೊಬ್ಬರು ಇಸ್ರೇಲ್ ಕದನ ವಿರಾಮ ಘೋಷಣೆಯು, ಪ್ಯಾಲೆಸ್ತೇನ್‌ಗೆ ಲಭಿಸಿದ ಜಯ ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಸೋಲು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಹಮಸ್‌ ಸದಸ್ಯ ಅಲಿ ಬರಾಕೆಹ್, ಹಮಾಸ್ ಮತ್ತು ಇಸ್ರೇಲ್ ನಡುವೆ ಕಾರ್ಯನಿರ್ವಹಿಸುತ್ತಿರುವ ಮಧ್ಯವರ್ತಿಗಳಿಂದ ಖಚಿತ ಮಾಹಿತಿ ಲಭಿಸುವವರೆಗೂ ನಾವು ಜಾಗರೂಕರಾಗಿರುತ್ತೇವೆ ಎಂದು ಹೇಳಿದ್ದಾರೆ.

ಗಾಜಾ ಪ್ರದೇಶದಲ್ಲಿ ನಡೆಯುತ್ತಿರುವ ಕದನ ವಿರಾಮಕ್ಕೆ ಗುರುವಾರ ರಾತ್ರಿ ಇಸ್ರೇಲ್ ಭದ್ರತಾ ಸಂಪುಟ ಅನುಮೋದನೆ ನೀಡಿದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಪ್ರಕಟಿಸಿದೆ ಎಂದು ವರಿದಿಯಾಗಿದೆ. ಸುಮಾರು ಎರಡೂವರೆ ಗಂಟೆಗಳ ಚರ್ಚೆಯ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೂಡಾ ಹೇಳಲಾಗಿದೆ. ಹಾಗೆಯೇ ಮಂತ್ರಿಗಳ ಸರ್ವಾನುಮತದಿಂದ ಈ ನಿರ್ಧಾರವು ಅಂಗೀಕೃತಗೊಂಡಿದೆ ಎಂದು ಕೂಡಾ ವರದಿಯಾಗಿದೆ.

ಮುಸ್ಲಿಂ ಹಾಗೂ ಯಹೂದಿಗಳ ಪವಿತ್ರವಾದ ಸ್ಥಳವಾದ ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿದ್ದು ಇಲ್ಲಿ ಉಂಟಾದ ಸಂಘರ್ಷವನ್ನು ತಡೆಯಲು ಪೊಲೀಸಲು ಅಶ್ರುವಾಯು ಹಾಗೂ ಗ್ರೆನೇಡ್ ಪ್ರಯೋಗಿಸಿದ್ದರು. ಬಳಿಕ ಗಾಜಾ ಪಟ್ಟಿಯಲ್ಲಿ ಭಾರಿ ಸಂಘರ್ಷ ನಡೆದಿತ್ತು.

2014 ರಿಂದ ಇಸ್ರೇಲ್ ಮತ್ತು ಗಾಜಾ ಉಗ್ರರ ನಡುವೆ ಕದನ ನಡೆದಿದ್ದು, ಈವರೆಗೆ 65 ಮಕ್ಕಳು, 39 ಮಹಿಳೆಯರು ಮತ್ತು 12 ಇಸ್ರೇಲಿಗಳು ಸೇರಿದಂತೆ 232 ಪ್ಯಾಲೇಸ್ತೀನಿಗರು ಸಾವನ್ನಪ್ಪಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Israel and Hamas have announced a ceasefire. Hamas said it is a Palestinian victory and Netanyahu's defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X