ಉಗ್ರರಿಗೆ ಗಲ್ಲು ಶಿಕ್ಷೆ ಗ್ಯಾರಂಟಿ, ಇಸ್ರೇಲ್ ಮಹತ್ವದ ಹೆಜ್ಜೆ!
ಇಸ್ರೇಲ್ ಇದೀಗ ಗಾಜಾ ಪಟ್ಟಿಯಲ್ಲಿ ಡೆಡ್ಲಿ ಅಟ್ಯಾಕ್ ಮುಂದುವರಿಸಿ, ಹಮಾಸ್ ವಿರುದ್ಧ ಭಾರಿ ಘೋರ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೆ ಇಸ್ರೇಲ್ ನಡೆಸುತ್ತಿರುವ ದಾಳಿ ಇಡೀ ಜಗತ್ತಿನಾದ್ಯಂತ ದೊಡ್ಡ ಸೌಂಡ್ ಮಾಡುತ್ತಿದೆ. ಹೀಗಿದ್ದಾಗ ಉಗ್ರರಿಗೆ ಮರಣದಂಡನೆ ವಿಧಿಸುವ ಮಸೂದೆ ಮೊದಲ ವಾಚನವನ್ನು ಇಸ್ರೇಲ್ ಸಂಸತ್ತು ಅಂಗೀಕರಿಸಿದೆ. ಈ ಮೂಲಕ ಗಾಜಾ ಮೇಲೆ ದಾಳಿ ನಡೆಸುತ್ತಿರುವ ಸಮಯದಲ್ಲೇ ಇಸ್ರೇಲ್ ಪಾರ್ಲಿಮೆಂಟ್ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಈ ಮಸೂದೆ ಪ್ರಸ್ತಾಪ ಮಾಡಿದ್ದು, ದಂಡ ಸಂಹಿತೆ ತಿದ್ದುಪಡಿಯನ್ನು ಅಂಗೀಕಾರ ಮಾಡಲಾಗಿದೆ. 120 ಸದಸ್ಯ ಬಲದ ಸದನದಲ್ಲಿ ಇದೀಗ ಅಂಗೀಕಾರ ಮಾಡಲಾಗಿದೆ. ಇದೀಗ ಇಸ್ರೇಲ್ ಸಂಸತ್ ಅಂಗೀಕಾರ ಮಾಡಿರುವ ಬಿಲ್ ಜನಾಂಗೀಯ ಉದ್ದೇಶದಿಂದ ಮತ್ತು ಇಸ್ರೇಲ್ ಜನರನ್ನ ಹತ್ಯೆ ಮಾಡುವವರಿಗೆ ಮರಣದಂಡನೆ ಅನ್ವಯಿಸುವಂತೆ ಮಾಡಲಿದೆ ಎನ್ನಲಾಗಿದೆ.

2 ವರ್ಷದಿಂದ ಗಾಜಾದಲ್ಲಿ ಯುದ್ಧ
ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ಈಗಾಗಲೇ 2 ವರ್ಷದಿಂದ ಇಸ್ರೇಲ್ ಸೇನೆ ಯುದ್ಧ ಮಾಡ್ತಿದ್ದು ಭಾರಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂಬ ಭಾರಿ ಗಂಭೀರ ಆರೋಪಗಳನ್ನೇ ಮಾಡಲಾಗುತ್ತಿದೆ. ಈ ಸಮಯದಲ್ಲೇ, ಇಸ್ರೇಲ್ ಸಂಸತ್ ಹೊಸ ಮಸೂದೆ ಅಂಗೀಕರಿಸಿರುವುದು ಗಮನ ಸೆಳೆದಿದೆ. ಹಾಗೇ ಮಧ್ಯಪ್ರಾಚ್ಯದಲ್ಲಿ ಇನ್ನಷ್ಟು ತಿಕ್ಕಾಟ ಗ್ಯಾರಂಟಿ ಎಂಬ ಪರಿಸ್ಥಿತಿ ಕೂಡ ನಿರ್ಮಾಣ ಆಗಿದೆ.
ಉಗ್ರರಿಗೆ ಗಲ್ಲು ಶಿಕ್ಷೆ ಗ್ಯಾರಂಟಿ!
ಇದೀಗ ಇಸ್ರೇಲ್ ಅಂಗೀಕಾರ ಮಾಡಿರುವ ಮಸೂದೆ ಜಾರಿಗೆ ಬಂದರೆ ಭಯೋತ್ಪಾದಕರಿಗೆ ಹೊಸ ಕಂಟಕ ಗ್ಯಾರಂಟಿ. ಅದರಲ್ಲೂ ದಾಳಿ ಮಾಡಿ ಇಸ್ರೇಲ್ ನಾಗರಿಕರನ್ನು ಹತ್ಯೆ ಮಾಡುವ ಉಗ್ರರಿಗೆ ಗಲ್ಲು ಶಿಕ್ಷೆ ಕೊಡಿಸಲು ಇದೀಗ ಇಸ್ರೇಲ್ ಸಜ್ಜಾಗಿದೆ. ಈ ಮೂಲಕ ಇಸ್ರೇಲ್ ಸರ್ಕಾರ ಇಟ್ಟಿರುವ ಹೆಜ್ಜೆ ದೊಡ್ಡ ಸದ್ದು ಮಾಡುತ್ತಿದೆ.
ಗಾಜಾ ಯುದ್ಧ ಶುರುವಾಗಿದ್ದು ಹೇಗೆ?
2023 ಅಕ್ಟೋಬರ್ 7 ಶನಿವಾರ ಇಸ್ರೇಲ್ ಮೇಲೆ ನುಗ್ಗಿ ಬಂದ ಹಮಾಸ್ ಹಾರಿಸಿದ್ದ ರಾಕೆಟ್ & ಕ್ಷಿಪಣಿ ಘೋರ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟವು. ಹೀಗೆಲ್ಲಾ 2023ರ ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಗಾಜಾ & ಇಸ್ರೇಲ್ ವಾರ್ ಇಂದಿಗೂ ನಿಂತಿಲ್ಲ. ಹೀಗಿದ್ದಾಗ ಗಾಜಾ ನಿವಾಸಿಗಳ ಮೇಲೆ ಒತ್ತಡ ತರುವ ಮೂಲಕ ಇಸ್ರೇಲ್ ಗಾಜಾ ಪಟ್ಟಿ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಮತ್ತೊಂದು ಕಡೆ ಉಗ್ರರ ವಿರುದ್ಧ ನಮ್ಮ ಕ್ರಮ ನಿರಂತರ ಎಂದು ಇಸ್ರೇಲ್ ಸರ್ಕಾರವೂ ಸಮರ್ಥನೆ ಮಾಡಿಕೊಂಡಿದೆ. ಈ ವಿಚಾರದಲ್ಲಿ ಅಮೆರಿಕ ಕೂಡ ಇಕ್ಕಟ್ಟಿಗೆ ಸಿಲುಕಿದೆ.












Click it and Unblock the Notifications