ಯುದ್ಧ ನಿಲ್ಲಲ್ಲ.. ಯುದ್ಧ ನಿಲ್ಲಲ್ಲ.. ಯುದ್ಧ ನಿಲ್ಲಲ್ಲ.. ಹಿಂಗೆ ಹೇಳಿದ್ಯಾರು?
ಯುದ್ಧ ಶುರುವಾಗೋದು ಮಾತ್ರ ಗೊತ್ತು, ಆದರೆ ಅದು ಮುಗಿಯೋದು ಯಾರಿಗೂ ಗೊತ್ತೆ ಆಗಲ್ಲ. ಯಾಕಂದ್ರೆ ಯುದ್ದ ಮುಗಿಯುವ ವೇಳೆಗೆ ಎಲ್ಲವೂ ಸರ್ವನಾಶ ಆಗೋಗಿರುತ್ತೆ. ಈ ಮಾತು ಇದೀಗ ಮತ್ತೆ ನಿಜವಾಗಿದೆ. ಮನುಷ್ಯ 2024ಕ್ಕೆ ಕಾಲಿಟ್ಟರೂ ತನ್ನ ರಕ್ತದಾಹ ಗುಣ ಬಿಡುತ್ತಿಲ್ಲ. ಇದರ ಪರಿಣಾಮ ಲಕ್ಷ ಲಕ್ಷ ಜನರು ಯುದ್ಧಕ್ಕೆ ಬಲಿಯಾಗುತ್ತಿದ್ದಾರೆ. ಹೀಗಿಯೇ ಹಮಾಸ್ ಉಗ್ರರು & ಇಸ್ರೇಲ್ ನಡುವೆ ಬೆಂಕಿ ಹೊತ್ತಿಕೊಂಡಿದೆ.
ಅಂದಹಾಗೆ ಬರೋಬ್ಬರಿ ಮೂರುವರೆ ತಿಂಗಳಿಂದ ಧಗ ಧಗಿಸುತ್ತಿರುವ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ವಾರ್ ಭಾರಿ ದೊಡ್ಡ ಮಟ್ಟಕ್ಕೆ ಹೋಗಿದೆ. ನೋಡ ನೋಡುತ್ತಲೇ ಹತ್ತಾರು ಸಾವಿರ ಜನರು ಬಲಿಯಾಗಿದ್ದಾರೆ. ಹೀಗಿದ್ದಾಗ ಯುದ್ಧ ನಿಲ್ಲಿಸಬೇಕು ಎಂಬ ಭಾರಿ ಒತ್ತಡ ಸೃಷ್ಟಿಯಾಗಿದೆ. ಆದರೂ ಇಸ್ರೇಲ್ ಮಾತ್ರ ಯುದ್ಧ ನಿಲ್ಲಿಸೋದಕ್ಕೆ ಸಿದ್ಧವಿಲ್ಲ. ಇದೇ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಖಡಕ್ ಹೇಳಿಕೆ ನೀಡಿದ್ದು, ಯುದ್ಧ ನಿಲ್ಲಿಸೋದಿಲ್ಲ ಅಂತಾ ಸಂದೇಶ ರವಾನಿಸಿದ್ದಾರೆ.

ಇಸ್ರೇಲ್ ಪ್ರ್ರಧಾನಿ ಹೇಳಿದ್ದೇನು?
ಹೌದು, ಹಮಾಸ್ ಬಂಡುಕೋರರ ವಿರುದ್ಧ ಪೂರ್ಣ ಜಯ ಸಾಧಿಸುವವರೆಗೆ ನಾವು ಯುದ್ಧನ ನಿಲ್ಲಿಸಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಖಡಕ್ ಉತ್ತರ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಹಮಾಸ್ ನಾಶಕ್ಕೆ ಹೊಸ ಪ್ರತಿಜ್ಞೆಯ ಮಾಡಿದ್ದಾರೆ. ಅಷ್ಟಕ್ಕೂ ಇಸ್ರೇಲ್‌ನ 20ಕ್ಕೂ ಹೆಚ್ಚು ಯೋಧರನ್ನ ಗಾಜಾದಲ್ಲಿ ನಿನ್ನೆ ಹತ್ಯೆಗೈದ ಬೆನ್ನಲ್ಲೇ ಇಸ್ರೇಲ್ ಪ್ರದಾನಿ ಈ ರೀತಿಯ ಪ್ರತಿಜ್ಞೆ ಮಾಡಿದ್ದಾರೆ. ಇದಕ್ಕೂ ಮೊದಲು ಕೂಡ ಇಸ್ರೇಲ್ ಹೀಗೆಯೇ ಹಮಾಸ್ ಉಗ್ರರ ವಿರುದ್ಧ ಗುಡುಗಿತ್ತು.
ಯೋಧರು ಮೃತಪಟ್ಟಿದ್ದು ಹೇಗೆ?
ಅಷ್ಟಕ್ಕೂ ಗಾಜಾ ಪಟ್ಟಿಯ ದಕ್ಷಿಣ & ಕೇಂದ್ರ ಭಾಗದಲ್ಲಿ, ಈಗಲೂ ಹಮಾಸ್ ಉಗ್ರರ ಹಿಡಿತಕ್ಕೆ ಸಿಲುಕಿರುವ ಪ್ರದೇಶದ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿತ್ತು. ಇದರ ಜೊತೆಗೆ ಗಡಿ ಭಾಗನ ಹಮಾಸ್ ಉಗ್ರರಿಂದ ಮುಕ್ತಗೊಳಿಸುವ ಪ್ರಯತ್ನ ಕೂಡ ನಡೆಸಿದೆ. ಆದ್ರೆ ಹೀಗೆ ಕಾರ್ಯಾಚರಣೆ ನಡೆಸುವ ಸಮಯದಲ್ಲಿ ಗಡಿ ಬಳಿಯಿದ್ದ ಕಟ್ಟಡಗಳನ್ನ ನೆಲಸಮ ಮಾಡಲು ಸ್ಫೋಟಕವನ್ನು ಇರಿಸಲಾಗಿತ್ತು ಎನ್ನಲಾಗಿದೆ. ಆದರೆ ಇಸ್ರೇಲ್ ಸೇನೆ ಟ್ಯಾಂಕರ್ ಗುರಿಯಾಗಿಸಿ ಉಗ್ರ ಪಡೆಯು ಗ್ರೆನೇಡ್ ದಾಳಿ ನಡೆಸಿದೆ. ಆಗ ಕಟ್ಟಡಗಳಲ್ಲಿ ಸ್ಫೋಟ ಸಂಭವಿಸಿ, ಇಸ್ರೇಲ್ ಸೇನೆಯ ಒಟ್ಟಾರೆ 21 ಯೋಧರು ಮೃತಪಟ್ಟಿದ್ದಾರೆ.

ಕಡ್ಡಿ ತುಂಡು ಮಾಡಿದ ಮಾತು!
ಹೀಗೆ ತನ್ನ ಸೈನಿಕರ ಬಲಿಗೆ ಪ್ರತಿಯಾಗಿ ಇದೀಗ ಇಸ್ರೇಲ್ ಮತ್ತಷ್ಟು ಉಗ್ರರ ರಕ್ತ ಹರಿಸಲು ಸಜ್ಜಾಗಿದೆ. ಮತ್ತೊಂದು ಕಡೆ ಯುದ್ಧ ನಿಲ್ಲಿಸಬೇಕು ಎಂಬ ಒತ್ತಡ ಕೂಡ, ಇಸ್ರೇಲ್ ಮೇಲೆ ಇದೆ. ಈ ನಡುವೆ ತಾನು ಯುದ್ಧ ನಿಲ್ಲಿಸೋದೆ ಇಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಇಸ್ರೇಲ್‌ನ ಪ್ರಧಾನಿ ಹೇಳಿದ್ದಾರೆ. ಈ ಮೂಲಕ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.












Click it and Unblock the Notifications