Gaza City: ಗಾಜಾ ಹೆದ್ದಾರಿ ಬಂದ್, ತಕ್ಷಣ ಜಾಗ ತೊರೆಯಲು ಜನರಿಗೆ ಇಸ್ರೇಲ್ ಸೇನೆಯ ವಾರ್ನಿಂಗ್

ಗಾಜಾ & ಇಸ್ರೇಲ್ ನಡುವೆ ನಡೆಯುತ್ತಿರುವ ರಣಭೀಕರ ಕಾಳಗಕ್ಕೆ ಇನ್ನೇನು 2 ವರ್ಷ ತುಂಬಲಿದ್ದು, ಈ ಯುದ್ಧ ಇದೀಗ ಅಂತಿಮ ಹಂತ ತಲುಪಿದಂತೆ ಕಾಣುತ್ತಿದೆ. ಹಮಾಸ್ ವಿರುದ್ಧ ರೊಚ್ಚಿಗೆದ್ದು ಈ ಯುದ್ಧ ಶುರು ಮಾಡಿದ್ದ ಇಸ್ರೇಲ್ ಮಿಲಿಟರಿ ಸತತವಾಗಿ ಎರಡು ವರ್ಷಗಳಿಂದ ಕಾರ್ಯಾಚರಣೆಯನ್ನ ನಡೆಸುತ್ತಿದೆ. ಹೀಗಿದ್ದರೂ ಯುದ್ಧ ಮಾತ್ರ ನಿಲ್ಲುತ್ತಿಲ್ಲ ಎನ್ನುವಾಗಲೇ ದಿಢೀರ್ ಗಾಜಾ ನಗರದ ಹೆದ್ದಾರಿ ಬಂದ್ ಮಾಡಿರುವ ಇಸ್ರೇಲ್ ಮಿಲಿಟರಿ, ಅಲ್ಲಿನ ಜನರಿಗೆ ಜಾಗ ತೊರೆಯುವಂತೆ ಅಂತಿಮ ಹಂತದ ಎಚ್ಚರಿಕೆ ರವಾನಿಸಿದೆ. ಹಾಗಾದ್ರೆ ಏನಾಗುತ್ತಿದೆ ಈಗ ಗಾಜಾ ಪಟ್ಟಿಯಲ್ಲಿ?

ಅಂದಹಾಗೆ ಇದೀಗ, ಇಸ್ರೇಲ್ ಸೇನೆಯ ಯುದ್ಧ ಟ್ಯಾಂಕರ್‌ಗಳು ಗಾಜಾದ ಮುಖ್ಯ ರಸ್ತೆಗಳನ್ನು ಬ್ಲಾಕ್ ಮಾಡಿವೆ. ರಕ್ಷಣಾ ಸಚಿವ ಇಸ್ರೇಲ್ ಕಾಟ್ಸ್ ಗಾಜಾ ನಿವಾಸಿಗಳಿಗೆ ಕೊನೆಯ ಸಂದೇಶ ರವಾನಿಸಿದ್ದು, ಈ ಸಮಯದಲ್ಲಿ ಗಾಜಾ ಪಟ್ಟಿ ತೊರೆಯಲು ನಿಮಗೆ ಇದು ಅಂತಿಮ ಅವಕಾಶ ಎಂದಿದ್ದಾರೆ. ಈಗಾಗಲೇ ಇಸ್ರೇಲ್ ನೀಡಿರುವ ಎಚ್ಚರಿಕೆ ಪ್ರಕಾರ, ಗಾಜಾ ನಗರದಲ್ಲಿ ವಾಸಿಸುತ್ತಿರುವ ಸುಮಾರು 10 ಲಕ್ಷ ಜನರು ತಕ್ಷಣ ದಕ್ಷಿಣಕ್ಕೆ ತೆರಳಲು ಆದೇಶಿಸಲಾಗಿದೆ. ಈ ಮೂಲಕ ಹಮಾಸ್ ನೆಲೆಗಳನ್ನು ಕಂಡು ಹಿಡಿದು & ಆ ಮೂಲಕ ತಮ್ಮ ಶತ್ರುಗಳ ವಿರುದ್ಧ ಕಠಿಣ ಕಾರ್ಯಾಚರಣೆಗೆ ಇದೀಗ ಇಸ್ರೇಲ್ ಮುಂದಾಗಿದೆ.

Israel Blocks Main Road to Gaza City for Evacuation of Residents

ಅಂತಿಮ ಹಂತ ತಲುಪಿದ ಕದನ?

2023 ಅಕ್ಟೋಬರ್ 7ರ ಶನಿವಾರ ಇಸ್ರೇಲ್‌ ಮೇಲೆ ನುಗ್ಗಿ ಬಂದ ಹಮಾಸ್ ರಾಕೆಟ್ & ಕ್ಷಿಪಣಿಗಳು ಘೋರ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟವು. ಹೀಗೆ 2023ರ ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಗಾಜಾ & ಇಸ್ರೇಲ್ ವಾರ್ ಇಂದಿಗೂ ನಿಂತಿಲ್ಲ. ಹೀಗಿದ್ದಾಗ ಗಾಜಾ ನಿವಾಸಿಗಳ ಮೇಲೆ ಈಗ ಒತ್ತಡ ಹೇರುವ ಮೂಲಕ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ.

ಆದರೆ ಈ ವಿಚಾರದಲ್ಲಿ ಯಾವುದೇ ಚಿಂತೆ ಮಾಡದೆ ಮುಂದೆ ನುಗ್ಗಲು ನಿರ್ಧಾರ ಮಾಡಿರುವ ಇಸ್ರೇಲ್ ಸೇನೆ ಈಗ ಕೆಲವೇ ದಿನಗಳಲ್ಲಿ ಭಾರಿ ದೊಡ್ಡ ಕಾರ್ಯಾಚರಣೆ ಕೈಗೊಳ್ಳುವ ಆತಂಕ ಗಾಜಾ ನಿವಾಸಿಗಳಲ್ಲಿ ಕಾಡುತ್ತಿದೆ. ಹೀಗಾಗಿ ಮತ್ತಷ್ಟು ಗೊಂದಲ ಸೃಷ್ಟಿಯಾಗಿದ್ದು, ಇನ್ನೊಂದು ಕಡೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹಮಾಸ್ ವಿರುದ್ಧ ರೊಚ್ಚಿಗೆದ್ದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಗಾಜಾ ಪಟ್ಟಿ ಮತ್ತಷ್ಟು ಸೂಕ್ಷ್ಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+