ಇರಾನ್ ಮುಟ್ಟಿದರೆ ಇಸ್ರೇಲ್ ವಿರುದ್ಧ ರಷ್ಯಾ ಎಂಟ್ರಿ ಕೊಡುತ್ತಾ? Israel And Iran
ಇರಾನ್ ಒಂದು ಡಮ್ಮಿ ದೇಶ, ಇರಾನ್ ಬೇಗ ಇಸ್ರೇಲ್ ವಿರುದ್ಧ ಸೋತು ಹೋಗುತ್ತದೆ... ಹಿಂಗೆ ಇಡೀ ಜಗತ್ತಿನಾದ್ಯಂತ ಇರಾನ್ & ಇಸ್ರೇಲ್ ಯುದ್ಧದ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುವಾಗಲೇ ಮತ್ತೊಂದು ಸಂಚಲನ ಸೃಷ್ಟಿಸುವ ಸುದ್ದಿ ಕೂಡ ಹಬ್ಬಿದೆ. ಅದು ಏನೆಂದರೆ ಇರಾನ್ & ಇಸ್ರೇಲ್ ಯುದ್ಧದ ನಡುವೆಯೇ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆ ಹೊಂದಿರುವ ರಷ್ಯಾ ಕೂಡ ಇಲ್ಲಿಗೆ ಎಂಟ್ರಿ ಆಗುತ್ತಾ? ಅನ್ನೋ ಡೌಟ್ ಕಾಡುತ್ತಿತ್ತು. ಈ ಪ್ರಶ್ನೆಗೆ ಇದೀಗ ಉತ್ತರ ಕೂಡ ಸಿಕ್ಕೇಬಿಟ್ಟಿದೆ!
ಯೆಸ್, ಇಸ್ರೇಲ್ & ಇರಾನ್ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ವಿಶ್ವಸಂಸ್ಥೆ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಸಮಾಧಾನ ಹೇಳುವ ಯತ್ನ ಮಾಡಿದೆ ಆದರೂ ಪ್ರಯೋಜನ ಆಗುತ್ತಿಲ್ಲ. ಹೀಗಿದ್ದರೂ ಇಸ್ರೇಲ್ ದೇಶದ ವಿರುದ್ಧ ಇರಾನ್ ಮಿತ್ರ ರಾಷ್ಟ್ರಗಳು ಈಗ ಗರಂ ಆಗಿವೆ. ಮತ್ತೊಂದು ಕಡೆ ಇಸ್ರೇಲ್ ದೇಶಕ್ಕೆ ಬೆಂಬಲ ನೀಡುತ್ತಿರುವ ಅಮೆರಿಕ ಎಲ್ಲಾ ರೀತಿ ಸಹಾಯ ಮಾಡಲು ಸಜ್ಜಾಗಿದೆ. ಇಂತಹ ಸಮಯದಲ್ಲೇ, ಇರಾನ್ ಮುಟ್ಟಿದರೆ ಇಸ್ರೇಲ್ ವಿರುದ್ಧ ರಷ್ಯಾನೇ ಎಂಟ್ರಿ ಕೊಡುತ್ತಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ...

ಇರಾನ್ ಮುಟ್ಟಿದರೆ ರಷ್ಯಾ ಎಂಟ್ರಿ?
ರಷ್ಯಾ & ಅಮೆರಿಕ ಹೊಡೆದಾಡುತ್ತಾ ಬಂದಿದ್ದು, ಹಾವು & ಮುಂಗುಸಿ ರೀತಿ ಎರಡೂ ದೇಶಗಳು ಫೈಟಿಂಗ್ ಮಾಡುತ್ತಿವೆ. ಹೀಗಾಗಿ ಅಮೆರಿಕದ ಶತ್ರು ದೇಶಗಳ ಜೊತೆಗೆ ರಷ್ಯಾ ಸಂಬಂಧ ಬೆಳೆಸುತ್ತಿದ್ದು, ಅಮೆರಿಕದ ಶತ್ರು ದೇಶಗಳಿಗೆ ಬೆಂಬಲ ನೀಡುತ್ತಿದೆ ರಷ್ಯಾ. ಇಂತಹ ಸಮಯದಲ್ಲೇ, ರಷ್ಯಾ ದೇಶದ ಗೆಳೆಯ ಇರಾನ್ ವಿರುದ್ಧ ಇಸ್ರೇಲ್ ಯುದ್ಧ ಸಾರಿದ್ದು ಇದೇ ಸಮಯದಲ್ಲೇ ಮತ್ತೊಂದು ದೊಡ್ಡ ಅನುಮಾನ ಕಾಡುತ್ತಿದೆ! ಅದು ಏನೆಂದರೆ ಅಮೆರಿಕ ಶತ್ರು ರಷ್ಯಾ ಕೂಡ ಇರಾನ್ ಪರವಾಗಿ ಯುದ್ಧದ ಅಖಾಡಕ್ಕೆ ಪ್ರವೇಶ ಮಾಡುತ್ತಾ?












Click it and Unblock the Notifications