ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಸ್ತ ದೇಶಗಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ರಕ್ತಸಿಕ್ತ ಸಂದೇಶ

|
Google Oneindia Kannada News

ಕೈರೋ, ಫೆ 16: ಈಜಿಪ್ಟ್ ದೇಶದ 21 ಕ್ರಿಶ್ಚಿಯನ್ ಸಮುದಾಯದ ನಾಗರೀಕರ ಶಿರಚ್ಛೇದ ಮಾಡಿರುವ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ (ISIS) ಉಗ್ರರು ಭಾನುವಾರ (ಫೆ 15) ಬಿಡುಗಡೆ ಮಾಡಿದ್ದಾರೆ. ಉಗ್ರರ ಈ ಪೈಶಾಚಿಕ ಕೃತ್ಯವನ್ನು ಕಂಡು ವಿಶ್ವವೇ ಬೆಚ್ಚಿಬಿದ್ದಿದೆ.

ಅಪಹೃತಗೊಂಡಿದ್ದ 21 ಮಂದಿಯನ್ನು ಲಿಬಿಯಾದ ರಾಜಧಾನಿ ಟ್ರಿಪೋಲಿಯಾ ಕಡಲ ತೀರದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಾಲಾಗಿ ಕೂರಿಸಿ ಅತ್ಯಂತ ಭೀಕರವಾಗಿ ಹತ್ಯೆಗೈದಿರುವ ವಿಡಿಯೋವನ್ನು ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತಾ-ಅಲ್-ಸಿಸಿ ಅವರಿಗೆ ಉಗ್ರರು ಕಳುಹಿಸಿದ್ದಾರೆ.

ಜೊತೆಗೆ ರೋಮ್ ನಗರವನ್ನೂ ಸದ್ಯದಲ್ಲೇ ವಶಪಡಿಸಿಕೊಳ್ಳಲಿದ್ದೇವೆ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ. (ಒಬಾಮಾ ರುಂಡ ಚೆಂಡಾಡುವೆವು)

Islamic State terrorist claims beheading of 21 Christians and says will conquer Rome City soon

ಇದು ಕ್ರೈಸ್ತ ದೇಶಗಳಿಗೆ ನಾವು ನೀಡುತ್ತಿರುವ ಎಚ್ಚರಿಕೆಯ ಸಂದೇಶ ಎನ್ನುವ ಶಿರೋನಾಮೆಯನ್ನೂ ವಿಡಿಯೋ ಜೊತೆ ಉಗ್ರರು ಕಳುಹಿಸಿದ್ದಾರೆಂದು ರಾಯ್ಟರ್ಸ್ ವರದಿ ಮಾಡಿದೆ. ಉಗ್ರರ ಕೃತ್ಯಕ್ಕೆ ತೀವ್ರ ವಿಷಾದ ವ್ಯಕ್ತ ಪಡಿಸಿರುವ ಈಜಿಪ್ಟ್ ಅಧ್ಯಕ್ಷರು ದೇಶಾದ್ಯಂತ ಏಳುದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.

21 ಮಂದಿಗೆ ಕಿತ್ತಳೆ ಬಣ್ಣದ ಉಡುಪುಗಳನ್ನು ತೊಡಿಸಿ, ಮುಖಕ್ಕೆ ಕಪ್ಪು ಬಟ್ಟೆಯನ್ನು ಹಾಕಿ, ಅವರೆಲ್ಲರನ್ನೂ ಮಂಡಿಯೂರಿ ಕೂರಿಸಿ ಶಿರಚ್ಛೇದ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ, ಅಂತರ್ಜಾಲದಲ್ಲಿ ಮೊದಲು ಬಿಡುಗಡೆಗೊಳಿಸಿದ ಉಗ್ರರು ನಂತರ ಈಜಿಪ್ಟ್ ಅಧ್ಯಕ್ಷರ ಕಚೇರಿಗೂ ವಿಡಿಯೋವನ್ನು ರವಾನಿಸಿದ್ದಾರೆ.

ಈಜಿಪ್ಟ್ ಸರಕಾರ ಮತ್ತು ಕಾಪ್ಟಿಕ್ ಚರ್ಚ್, ಈ ವಿಡಿಯೋ 'ಸೃಷ್ಟಿಸಿದ ಕಟ್ಟುಕಥೆಯ' ವಿಡಿಯೋ ಅಲ್ಲ ಎಂದು ಧೃಢೀಕರಿಸಿದೆ. ಈ ವಿಡಿಯೋ ಬಿತ್ತರವಾದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಅಧ್ಯಕ್ಷ ಅಬ್ದೆಲ್-ಫತಾ ಉಗ್ರರ ವಿರುದ್ದ ನಮ್ಮ ಕಾರ್ಯಾಚಾರಣೆ ಇನ್ಮುಂದೆ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. (ಟರ್ಕಿಯಿಂದ ಗಡೀಪಾರಾಗಿದ್ದ 9 ಜನ ಬಿಡುಗಡೆ)

ಇರಾಕ್ ಮತ್ತು ಸಿರಿಯಾದಲ್ಲಿ ಬೇರೂರಿರುವ ISIS ಉಗ್ರರ ಮೇಲೆ ಅಮೆರಿಕಾ ನೇತೃತ್ವದಲ್ಲಿ ನಡೆಯುತ್ತಿರುವ ವೈಮಾನಿಕ ಕಾರ್ಯಾಚರಣೆಯಲ್ಲಿ ಈಜಿಪ್ಟ್ ನೇರವಾಗಿ ಪಾಲ್ಗೊಂಡಿಲ್ಲ. ಬದಲಿಗೆ ತನ್ನ ಗಡಿಯನ್ನು ಈ ಉಗ್ರರಿಂದ ರಕ್ಷಿಸಿಕೊಳ್ಳಲು ಕೆಲವೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿತ್ತು.

2013ರಲ್ಲಿ ತನ್ನ ಮುಖಂಡ ಮೊಹಮ್ಮದ್ ಮುರ್ಸಿಯನ್ನು ಈಜಿಪ್ಟ್ ಪಡೆಗಳು ಸಾಯಿಸಿದ ನಂತರ ಐಸಿಎಸ್ ಉಗ್ರರು ಇದುವರೆಗೆ ನೂರಾರು ಈಜಿಪ್ಟಿನ ಸೈನಿಕರು ಮತ್ತು ಪೊಲೀಸರನ್ನು ಹತ್ಯೆಗೈದಿದ್ದಾರೆ. (ಚಿತ್ರಕೃಪೆ: ಎಪಿ, ಕೈರೋ)

English summary
Islamic State terrorist claims beheading of 21 Christians and says will conquer Rome City soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X