ಬಾಂಬ್ ದಾಳಿಯಲ್ಲಿ 90 ಐಎಸ್ಐಎಸ್ ಉಗ್ರರು ಹತ: ಅಮೆರಿಕ
ಆಫ್ಘಾನಿಸ್ತಾನ- ಪಾಕಿಸ್ತಾನ ಗಡಿ ಭಾಗದಲ್ಲಿರುವ ನಂಗರ್ಹಾರ್ ಎಂಬ ಪ್ರಾಂತ್ಯದಲ್ಲಿ ಇರುವ ಗುಹೆಗಳನ್ನು ಐಎಸ್ ಉಗ್ರರು ತಮ್ಮ ಅಡಗುದಾಣವಾಗಿಸಿದ್ದ ಹಿನ್ನೆಲೆಯಲ್ಲಿ, ಅಮೆರಿಕ ಪಡೆ ಏಪ್ರಿಲ್ 13ರ ರಾತ್ರಿ ಬಾಂಬ್ ದಾಳಿ ನಡೆಸಿತ್ತು.
ವಾಷಿಂಗ್ಟನ್, ಏಪ್ರಿಲ್ 15: ಗುರುವಾರ ರಾತ್ರಿ ಆಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಐಎಸ್ ಉಗ್ರರ ಸಂಖ್ಯೆ 909ಕ್ಕೇರಿದೆ ಎಂದು ಅಮೆರಿಕ ಸರ್ಕಾರ ತಿಳಿಸಿದೆ. ಅಲ್ಲದೆ, ಉಗ್ರರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವವಿದೆ ಎಂದು ಅಮೆರಿಕ ಹೇಳಿದೆ.
ಆಫ್ಘಾನಿಸ್ತಾನ- ಪಾಕಿಸ್ತಾನ ಗಡಿ ಭಾಗದಲ್ಲಿರುವ ನಂಗರ್ಹಾರ್ ಎಂಬ ಪ್ರಾಂತ್ಯದಲ್ಲಿ ಇರುವ ಗುಹೆಗಳನ್ನು ಐಎಸ್ ಉಗ್ರರು ತಮ್ಮ ಅಡಗುದಾಣವಾಗಿಸಿದ್ದ ಹಿನ್ನೆಲೆಯಲ್ಲಿ, ಅಮೆರಿಕ ಪಡೆ ಏಪ್ರಿಲ್ 13ರ ರಾತ್ರಿ ಬಾಂಬ್ ದಾಳಿ ನಡೆಸಿತ್ತು.[ಅಮೆರಿಕಾದಿಂದ ಯಾವುದೇ ಕ್ಷಣದಲ್ಲಿ ಯುದ್ದ ಘೋಷಣೆ: ಚೀನಾ ಎಚ್ಚರಿಕೆ]

ಈ ದಾಳಿಯಲ್ಲಿ ಬಾಂಬ್ ಗಳ ಮಹಾ ತಾಯಿ ಎಂದೇ ಪರಿಗಣಿಸಲ್ಪಟ್ಟಿರುವ ಜಿಬಿಯು - 43 ಬಿ ಬಾಂಬ್ ಗಳನ್ನು ಐಎಸ್ ಉಗ್ರರಿರುವ ಗುಹೆಗಳ ಮೇಲೆ ಎಸೆಯಲಾಗಿತ್ತು.[ಕನಿಷ್ಠ 36 ಐಎಸ್ ಉಗ್ರರ ಹೆಣ ಕೆಡವಿದ ಅಮೆರಿಕ ಬಾಂಬ್]
ಶುಕ್ರವಾರ (ಏಪ್ರಿಲ್ 14) ಮಧ್ಯಾಹ್ನದ ಹೊತ್ತಿಗೆ ಆಫ್ಘಾನಿಸ್ತಾನ ಸರ್ಕಾರವು ಅಧಿಕೃತ ಮಾಹಿತಿ ಹೊರಹಾಕಿ, ಅಮೆರಿಕದ ಬಾಂಬ್ ದಾಳಿಯಲ್ಲಿ 36 ಉಗ್ರರು ಸಾವನ್ನಪ್ಪಿದ್ದಾರೆಂದು ತಿಳಿಸಿತ್ತು. ಆದರೆ, ಶುಕ್ರವಾರ ರಾತ್ರಿ ಹೊತ್ತಿಗೆ ಅಧಿಕೃತ ಹೇಳಿಕೆ ನೀಡಿದ್ದ ಐಎಸ್ ಉಗ್ರವಾದಿ ಸಂಘಟನೆ, ಅಮೆರಿಕದ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿತ್ತು.
ಆದರೆ, ಐಎಸ್ ಉಗ್ರ ಸಂಘಟನೆಯ ಹೇಳಿಕೆಯನ್ನು ತಳ್ಳಿಹಾಕಿರುವ ಅಮೆರಿಕ, ದಾಳಿಯಲ್ಲಿ ಮೃತಪಟ್ಟಿರುವವರ ಸಂಖ್ಯೆ 90ಕ್ಕೇರಿದೆ ಎಂದು ಹೇಳಿದೆ.












Click it and Unblock the Notifications