ಇರಾನಿನ ಹಲ್ಕ್, ಇರಾಕಿ ಉಗ್ರರ ಸದೆಬಡೆಯಲು ಸಜ್ಜು

By: ಸುಮಾ ಮುದ್ದಾಪುರ
Subscribe to Oneindia Kannada

ಆತನನ್ನು ಯಾರಾದರೂ ಒಮ್ಮೆ ತತ್ ಕ್ಷಣ ನೋಡಿದರೆ ಸಾಕು ಬೆಚ್ಚಿ ಬೀಳುತ್ತಾರೆ. ಅಂಥ ದೇಹಧಾರ್ಡ್ಯ ಹೊಂದಿರುವ ವ್ಯಕ್ತಿ ಅವನು. ಆದರೆ ಅತನಿಗಿನ್ನು ಕೇವಲ 24 ವಯಸ್ಸು. ನೋಡಿದರೆ ಬೆಚ್ಚಿ ಬೀಳಿಸುವಂಥ ಮೈಕಟ್ಟು. ಅಜಾನುಬಾಹು ಎಂದರೂ ಅತಿ ಶಯೋಕ್ತಿಯಲ್ಲ. ಈಗ ಇರಾನಿನ ಈ ದೈತ್ಯ ಸಜದ್ ಘರಿಬಿಗೆ ಇರಾಕಿ ಉಗ್ರರನ್ನು ಸದೆಬಡೆಯುವುದೊಂದೇ ಗುರಿ.

ರಾಕ್ಷಸನಂತಹ ದೇಹ ಹೊಂದಿರುವ ಈತ ಇರಾಕಿ ಉಗ್ರ ಸಂಘಟನೆ ಐಸಿಸ್ ವಿರುದ್ಧ ಸಮರ ಸಾರಲು ಸಿದ್ಧನಾಗಿದ್ದಾನೆ. ಐಸಿಸ್‌ನ ರಕ್ತಪಿಪಾಸುಗಳನ್ನು ಮಟ್ಟ ಹಾಕುವದು ಹೇಗೆ ಎಂದು ವಿಶ್ವದ ದೇಶಗಳೆಲ್ಲಾ ಚಿಂತಿಸುತ್ತಿವೆ. ಇಸ್ತಾಂಬುಲ್, ಢಾಕಾ, ಬಾಗ್ದಾದ್ ಹೀಗೆ ವಾರದಲ್ಲೇ ಮೂರು ಕಡೆ ಮಾರಣ ಹೋಮ ನಡೆಸಿ ಅಮಾಯಕ ಜನರ ರಕ್ತದಲ್ಲಿ ಓಕುಳಿಯಾಡುತ್ತಿದೆ ಐಸಿಸ್.

Iranian Hulk Persian Hercules, Weightlifter Gharibi to fight against ISIS

ಇಂತಹ ಉಗ್ರರ ಹುಟ್ಟಡಗಿಸಲು ನಾನು ಸಿದ್ಧ ಎನ್ನುತ್ತಿದ್ದಾನೆ ಸಜದ್. ಇಸ್ಲಾಮಿಕ್ ಸ್ಟೇಟ್‌ನ ಮಟ್ಟಹಾಕಲು ಪಣ ತೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಇರಾನಿ ಸೈನಿಕ ಪಡೆ ಸೇರಲು ಹಪಹಪಿಸುತ್ತಿದ್ದಾನೆ. ಆತ ಬೇರಾರು ಅಲ್ಲ, ಅವನೇ ಇರಾನ್‌ನ 24 ವರ್ಷದ ಯುವಕ ವೇಯ್ಟ್ ಲಿಫ್ಟರ್ ಸಜದ್ ಘರಿಬಿ(Sajad Gharibi).

ಸಿರಿಯಾದಲ್ಲಿರುವ ಇರಾನಿ ಪಡೆ ಸೇರಲು ತಾನು ಉತ್ಸುಕನಾಗಿರುವ ಬಗ್ಗೆ ಸಜೀದ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದು, ವಿಡಿಯೋ ಶೇರ್ ಮಾಡಿದ್ದಾನೆ.

Iranian Hulk Persian Hercules, Weightlifter Gharibi to fight against ISIS

ಆ ದೈತ್ಯ ದೇಹವನ್ನೊಮ್ಮೆ ನೋಡಿದರೆ ಗಾಬರಿ ಹುಟ್ಟುವಂತಿರುವ ಈತ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಆ ಮೈಕಟ್ಟನ್ನೊಮ್ಮೆ ನೋಡಿದವರು ಈತನನ್ನು ಇರಾನಿನ ಹಲ್ಕ್, ಪರ್ಷಿಯನ್ ಹರ್ಕ್ಯುಲಸ್ ಎಂದು ಹೊಗಳಿದ್ದಾರೆ. ಬರೋಬ್ಬರಿ 200 ಕೆಜಿಗೂ ಹೆಚ್ಚಿನ ತೂಕವನ್ನು ಸಲೀಸಾಗಿ ಎತ್ತುವ ಸಾಮರ್ಥ್ಯ ಹೊಂದಿದ್ದಾನೆ.

ಸದ್ಯ ಈತ ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸರ್ಜಿದ್ ಗಾರ್ಬಿ‌ಗೆ ಇನ್ಸ್ಟಾಗ್ರಾಮ್‌ನಲ್ಲಿ 1,24,000 ಫಾಲೋವರ್ಸ್ ಇದ್ದಾರೆ. ಆದರೆ ಸಜದ್ ನ ದೈತ್ಯ ದೇಹ ನೋಡಿದರೆ, ಎಂತಹವರು ಕೂಡ ಕ್ಷಣಕಾಲ ಬೆಚ್ಚಿಬೀಳುವುದು ಸುಳ್ಳಲ್ಲ. ಆತನ ಇನ್ಸ್ಟಾಗ್ರಾಮ್ ಖಾತೆಗೆ ನೀವು ಭೇಟಿ ಕೊಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Meet Iranian Hulk, Persian Hercules, 24 year weightlifter Sajad Gharibi who want to fight against ISIS. Gharibi's images are instant hit on Instragram and other social networking sites.
Please Wait while comments are loading...