Iran Protest: ಸರ್ವಾಧಿಕಾರಿ ಖಮೇನಿ ವಿರುದ್ಧ ಪ್ರತಿಭಟನೆ ಮಾಡಿದ್ದವರಿಗೆ ಆಘಾತ!
ಇರಾನ್ ನೆಲದಲ್ಲಿ ಶಾಂತಿ ನೆಲೆಸಿದೆ, ಭರ್ಜರಿಯಾಗಿ ಕಿತ್ತಾಡಿದ್ದ ಇರಾನ್ ಪ್ರತಿಭಟನಾಕಾರರು ಘೋರ ಹಿಂಸೆಗೆ ಇಳಿದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಪ್ರತಿಭಟನೆ ಹತ್ತಿಕ್ಕಲು ಇರಾನ್ ಸರ್ಕಾರ ಕೂಡ ಕಠಿಣ ಕ್ರಮ ಕೈಗೊಂಡು ಸಾವಿರಾರು ಹೋರಾಟಗಾರರ ಜೀವ ತೆಗೆದಿದೆ ಎಂಬ ಆರೋಪ ಕೂಡ ಇದೆ. ಮಧ್ಯಪ್ರಾಚ್ಯದ ಪ್ರಮುಖ ದೇಶಗಳ ಪೈಕಿ ಒಂದಾಗಿರುವ ಇರಾನ್ ಇದೀಗ ಮತ್ತೊಂದು ಸೇಡಿನ ರಾಜಕೀಯ ಮಾಡಲು ಮುಂದೆ ಬಂದಂತೆ ಕಾಣುತ್ತಿದೆ. ಇದೇ ವೇಳೆ ದಿಢೀರ್ ಸರ್ವಾಧಿಕಾರಿ ಖಮೇನಿ ವಿರುದ್ಧ ಪ್ರತಿಭಟನೆ ಮಾಡಿದ್ದವರಿಗೆ ಆಘಾತ ಎದುರಾಗಿದೆ. ಆಗ ಪ್ರತಿಭಟನೆ ಮಾಡಿ, ತಲೆಮರೆಸಿಕೊಂಡು ಬದುಕುತ್ತಿರುವ ಪ್ರತಿಯೊಬ್ಬ ಹೋರಾಟಗಾರ ಇದೀಗ ಕಂಬಿ ಹಿಂದೆ ಬೀಳುವಂತೆ ಆಗಿದೆ.
ಇರಾನ್ ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಮುಖ್ಯವಾಗಿ ಜನ ಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸಲು ಆಗುತ್ತಿಲ್ಲ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಯುದ್ಧದ ಉನ್ಮಾದದಲ್ಲಿ ಇರಾನ್ ನಾಯಕರು ತೇಲುತ್ತಿದ್ದರು. ಇಷ್ಟೆಲ್ಲದರ ನಡುವೆ ದಿಢೀರ್ ರೊಚ್ಚಿಗೆದ್ದ ಇರಾನ್ ಜನರು ತಾವು ಈಗ ಬದುಕಬೇಕೋ? ಬೇಡವೋ? ಎಂದು ಪ್ರಶ್ನೆ ಮಾಡಿ ಸರ್ಕಾರದ ವಿರುದ್ಧ ಹಿಂಸಾಚಾರಕ್ಕೆ ಇಳಿದಿದ್ದರು. ಹೀಗಿದ್ದಾಗ ಗಲಾಟೆ ದೊಡ್ಡದಾಗುತ್ತಾ ಸಾಗಿ ಇದೀಗ ಒಂದು ಹಂತಕ್ಕೆ ಬಂದಿದೆ. ಅಲ್ಲದೆ ಅತಿ ಶೀಘ್ರ ದೊಡ್ಡ ಬದಲಾವಣೆ ತರುವ ನಿರೀಕ್ಷೆ ಕೂಡ ಇಟ್ಟುಕೊಂಡಿದ್ದರು. ಇಷ್ಟೆಲ್ಲದರ ನಡುವೆ ಈಗ ದಿಢೀರ್ ಸರ್ಕಾರವೇ ಪ್ರತಿಭಟನೆ ನಡೆಸಿದ್ದವರಿಗೆ ಸರ್ಪ್ರೈರ್ಸ್ ಕೊಡುತ್ತಿದೆ!

ಖಮೇನಿ ವಿರೋಧಿಗಳಿಗೆ ಹಿಂಸೆ ಕೊಡುತ್ತಿರುವ ಆರೋಪ
ಮಧ್ಯಪ್ರಾಚ್ಯದ ದೊಡ್ಡ ಹಾಗೂ ಶಕ್ತಿಶಾಲಿ ದೇಶ ಎಂಬ ಖ್ಯಾತಿ ಪಡೆದ ಇರಾನ್ ದೇಶದಲ್ಲಿ ಖಮೇನಿ ಸರ್ವಾಧಿಕಾರಿ ಆಗಿದ್ದು, ಕಳೆದ ಕೆಲವು ದಶಕಗಳಿಂದ ನಿರಂತರವಾಗಿ ತನ್ನ ಕೈಯಲ್ಲೇ ಅಧಿಕಾರವನ್ನ ಇಟ್ಟುಕೊಂಡಿರುವ ಆರೋಪ ಇದೆ. ಅದರಲ್ಲೂ ಖಮೇನಿ ಕಾರಣಕ್ಕೆ ಇರಾನ್ ವಿರುದ್ಧ ಪಾಶ್ಚಿಮಾತ್ಯ ದೇಶಗಳು ತಿರುಗಿಬಿದ್ದು ಸಮಸ್ಯೆ ಆಗುತ್ತಿದೆ ಎಂಬುದು ಇರಾನ್‌ನಲ್ಲಿ ಪ್ರತಿಭಟನೆ ನಡೆಸಿದ ಜನರ ನಂಬಿಕೆ. ಇದರ ಜೊತೆಗೆ ಹಣದುಬ್ಬರ ಹಾಗೂ ಹಲವು ರೀತಿಯ ಆರ್ಥಿಕ ಸಮಸ್ಯೆಗಳಿಗೂ ಇದೇ ಖಮೇನಿಯೇ ಕಾರಣ ಎಂದು ಜನರು ಹೋರಾಟ ಶುರು ಮಾಡಿದ್ದರು. ಪ್ರಮುಖವಾಗಿ ಖಮೇನಿ ಅಧಿಕಾರ ಬಿಟ್ಟು, ಇರಾನ್ ನೆಲದಲ್ಲಿ ಹೊಸ ರೀತಿಯ ಆಡಳಿತ ಬರಲಿ ಎಂಬುದು ಹೋರಾಟಗಾರರ ಆಗ್ರಹವಾಗಿತ್ತು. ಈ ಕಾರಣಕ್ಕೆ ತಿಕ್ಕಾಟ ಜೋರಾಗಿ, ಸುಮಾರು 4,000ಕ್ಕೂ ಹೆಚ್ಚು ಜನರು ಹಿಂಸಾಚಾರಕ್ಕೆ ಬಲಿಯಾದರು.
ಇರಾನ್ ಪೊಲೀಸರಿಂದ ತೀವ್ರ ಶೋಧ
ಪ್ರತಿಭಟನೆ ಹಾಗೂ ಹಿಂಸಾಚಾರ ಎರಡನ್ನೂ ಕಂಟ್ರೋಲ್‌ಗೆ ತಂದಿರುವ ಇರಾನ್ ಭದ್ರತಾ ಪಡೆಗಳು ಇದೀಗ ಹೊಸ ಆಟ ಶುರು ಮಾಡಿದ್ದಾರೆ. ಅಂದಹಾಗೆ ಇರಾನ್ ನೆಲದಲ್ಲಿ ಪ್ರತಿಭಟನೆ ಮಾಡಿ, ಖಮೇನಿ ವಿರುದ್ಧ ಹೋರಾಡಿದ್ದವರಿಗೆ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ. ಅದರಲ್ಲೂ ಖಮೇನಿ ವಿರುದ್ಧ ಧ್ವನಿ ಎತ್ತಿದ್ದವರಿಗೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಹೋರಾಟ ಮಾಡಿದ್ದವರು ಇದೀಗ ಜೈಲಿನಲ್ಲಿ ಭಾರಿ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇರಾನ್ ನೆಲದಲ್ಲಿ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ ಕೂಡ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅಮೆರಿಕ ಈ ಸಮಯದಲ್ಲಿ ಸೈಲೆಂಟ್ ಆಗಿದೆ ಎಂದು ಇರಾನ್‌ನಲ್ಲಿ ಪ್ರತಿಭಟನೆ ನಡೆಸಿದ್ದವರು ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications