ಭಾರತೀಯರನ್ನು ಬಿಟ್ಟು ಕಳಿಸಿ ಇಸ್ರೇಲ್ ಮಂದಿಯನ್ನು ವಶದಲ್ಲೇ ಇಟ್ಟುಕೊಂಡ ಇರಾನ್!
ಭಾರತ ಈಗ ಬಲಿಷ್ಠವಾಗಿ ಬೆಳೆದು ನಿಂತಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಭಾರತವನ್ನು ಕಂಡರೆ ಪ್ರೀತಿ ಮತ್ತು ಭಯ ಎರಡೂ ಇದೆ. ಯಾಕಂದ್ರೆ ಭಾರತ ಅಷ್ಟು ಶಕ್ತಿಶಾಲಿ ಆಗಿ ಬೆಳೆದು ನಿಲ್ಲುತ್ತಿದೆ. ಹೀಗಾಗಿಯೇ ಭಾರತದ ಜೊತೆ ಸ್ನೇಹ ಬೆಸೆಯಲು ದೊಡ್ಡ ದೊಡ್ಡ ದೇಶಗಳೇ ಹಾತೊರೆಯುತ್ತಿವೆ. ಇಂತಹ ಸ್ಥಿತಿ ಎದುರಾಗಿರುವ ಸಮಯದಲ್ಲೇ, ಭಾರತದ ಗತ್ತು ಏನು ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿದೆ!
ಇರಾನ್ ಮತ್ತು ಇಸ್ರೇಲ್ ಥೇಟ್ ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿವೆ. ಅದರಲ್ಲೂ ಕೆಲವೇ, ಕೆಲ ದಿನದ ಹಿಂದೆ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ದ ನಡೆಯೋದು ಬಹುತೇಕ ಪಕ್ಕಾ, ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇದೇ ಸಮಯದಲ್ಲಿ ಇಸ್ರೇಲ್‌ಗೆ ಸೇರಿದ್ದ ಹಡಗು ತನ್ನ ವಶಕ್ಕೆ ಪಡೆದು ಇರಾನ್ ಅಬ್ಬರಿಸಿತ್ತು. ಆದರೆ ಈ ಹಡಗಿನಲ್ಲಿ ಭಾರತೀಯರು ಕೂಡ ಇದ್ದರು, ಇದೇ ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇರಾನ್ ಮತ್ತು ಭಾರತದ ಸಂಬಂಧ ಚೆನ್ನಾಗೇ ಇದೆ. ಹೀಗಾಗಿ ಇದೀಗ ಹಡಗಿನಲ್ಲಿ ಇದ್ದ ಭಾರತೀಯರನ್ನು ಬಿಟ್ಟು ಕಳುಹಿಸಿದೆ ಇರಾನ್. ಆದ್ರೆ ಇಸ್ರೇಲ್‌ನ ಸಿಬ್ಬಂದಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

25 ಜನ ಹಡಗಿನಲ್ಲಿ ಅರೆಸ್ಟ್!
ಪೋರ್ಚುಗೀಸ್ ಧ್ವಜ ಇರುವ 'ಎಂಎನ್‌ಸಿ ಏರೀಸ್' ಹಡಗನ್ನು ಇದೇ ಏಪ್ರಿಲ್ 13 ರಂದು ಇರಾನ್ ಅರೆಸೇನಾ ಪಡೆ ತನ್ನ ವಶಕ್ಕೆ ಪಡೆದಿತ್ತು. ಅಲ್ಲದೆ ಈ ಹಡಗಿನಲ್ಲಿ 17 ಭಾರತೀಯರು ಸೇರಿದಂತೆ ಇಸ್ರೇಲ್ ಸಿಬ್ಬಂದಿಯೂ ಕೂಡಿ ಒಟ್ಟು 25 ಜನ ಇದ್ದರು. ಆದರೆ ಹಡಗಿನಲ್ಲಿ ಇದ್ದ ಭಾರತೀಯರ ಪೈಕಿ ಏಕೈಕ ಮಹಿಳೆ ಅಯನ್ ಟೆಸ್ಸಾ ಜೋಸೆಫ್ ಅವರನ್ನ ಏಪ್ರಿಲ್ 18ಕ್ಕೆ ಬಿಡುಗಡೆ ಮಾಡಲಾಗಿತ್ತು ಈಗ ಮತ್ತೆ 5 ಭಾರತೀಯರನ್ನು ಇರಾನ್ ಬಿಟ್ಟು ಕಳುಹಿಸಿದೆ. ಅಂದಹಾಗೆ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಭಾರತೀಯ ಆಯೋಗ & ಇರಾನ್ ಸರ್ಕಾರದ ನಡುವೆ, ನಿರಂತರ ಮಾತುಕತೆ & ಸಭೆ ನಡೆಸಲಾಗಿತ್ತು. ಹೀಗಾಗಿ ಇದೀಗ ಮತ್ತಷ್ಟು ಭಾರತೀಯರು ಹಡಗಿನಿಂದ ಹೊರಗೆ ಬಂದಿದ್ದಾರೆ.
ಇಸ್ರೇಲ್‌ಗೆ ಎದುರಾಯ್ತಾ ಅಪಾಯ?
ಈಗ 5 ಜನರನ್ನ ಇರಾನ್ ರಿಲೀಸ್ ಮಾಡಿರುವ ಹಿನ್ನೆಲೆಯಲ್ಲಿ ಒಟ್ಟು 6 ಭಾರತೀಯ ಪ್ರಜೆಗಳನ್ನ ಇರಾನ್ ಬಿಡುಗಡೆ ಮಾಡಿದಂತೆ ಆಗಿದೆ. ಆದರೆ ಇನ್ನೂ 11 ಮಂದಿ ಬಿಡುಗಡೆಗೆ ಚರ್ಚೆ ಪ್ರಯತ್ನ ಮುಂದುವರಿದಿದೆ. ಹಡಗಿನಲ್ಲಿರುವ ಭಾರತೀಯರನ್ನು ಬಿಡುಗಡೆ ಮಾಡುವ ಸಂಬಂಧ, ಇರಾನ್‌ನ ವಿದೇಶಾಂಗ ಸಚಿವರ ಜತೆಗೆ ಮಾತನಾಡಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಇತ್ತೀಚೆಗೆ ಮಾಹಿತಿ ನಿಡಿದ್ದರು. ಇದೀಗ ಆ ಮಾತಿನಂತೆ ಭಾರತೀಯರ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಇಸ್ರೇಲ್‌ಗೆ ಇದು ಕಂಟಕ ತರುವ ಸಾಧ್ಯತೆ ಇದೆ ಎಂಬ ಮಾತು ಕೂಡ ಕೇಳಿಬಂದಿದೆ.












Click it and Unblock the Notifications