ಶಿವ.. ಶಿವ.. ನೇರವಾಗಿ ಹೊಡೆದಾಡುವ ತಾಕತ್ ಇಲ್ಲದವನು ಹಿಂಗೆಲ್ಲಾ ಮಾಡಿದ್ನಾ? Israel And Iran
ಹೊಡಿ.. ಹೊಡಿ.. ಹೊಡಿ... ಹಿಂಗೆ ಇರಾನ್ & ಇಸ್ರೇಲ್ ಬಡಿದಾಡುತ್ತಿದ್ದರೆ ಜಗತ್ತು ನಡುಗಿ ಹೋಗುತ್ತಿದೆ. ಒಬ್ಬರ ಮೇಲೆ ಮತ್ತೊಬ್ಬರು ದೊಡ್ಡ ದೊಡ್ಡ ಬಾಂಬ್‌ನ ಹಾಕುತ್ತಾ & ಕಟ್ಟಡಗಳನ್ನು ಸರ್ವನಾಶ ಮಾಡುತ್ತಾ ಅಹಂಕಾರದ ನಗೆ ಬೀರುತ್ತಿದ್ದಾರೆ. ನೋಡ ನೋಡುತ್ತಾ ಇಡೀ ಜಗತ್ತು ಸರ್ವನಾಶ ಆಗುವ ಪರಿಸ್ಥಿತಿಯೇ ಸೃಷ್ಟಿ ಮಾಡುತ್ತಿದ್ದಾರೆ. ಈ ತುರ್ತು ಸಮಯದಲ್ಲೇ, ಶಿವ.. ಶಿವ.. ನೇರವಾಗಿ ಹೊಡೆದಾಡುವ ತಾಕತ್ ಇಲ್ಲದವನು ಹಿಂಗೆಲ್ಲಾ ಮಾಡಿದ್ನಾ? ಅಂತಾ ಇರಾನ್ ಜನರು ಚರ್ಚೆ ಮಾಡುತ್ತಿದ್ದಾರೆ. ಯಾಕೆ ಗೊತ್ತಾ?
ಇರಾನ್ & ಇಸ್ರೇಲ್ ನಡುವೆ ಘೋರ ಕದನ ಶುರುವಾಗಿ 1 ವಾರವೇ ಕಳೆದು ಹೋಗಿದೆ. ಇಬ್ಬರ ನಡುವಿನ ಈ ಘೋರ ಕಾಳಗ ನೋಡಿ ಪ್ರಪಂಚದ ಮೂಲೆ ಮೂಲೆಯಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಪರಮಾಣು ಯುದ್ಧ ನಡೆದರೆ ಪರಿಸ್ಥಿತಿ ಏನು? ಅನ್ನೋ ಚರ್ಚೆ ಕೂಡ ನಡೆಯುತ್ತಿದೆ. ವಿಶ್ವಸಂಸ್ಥೆ ಕೂಡ ಈ ಬಗ್ಗೆ ಗಮನವಿಟ್ಟು ಕೂತಿದ್ದು, ಇರಾನ್ & ಇಸ್ರೇಲ್ ಯುದ್ಧ ನಿಲ್ಲದೇ ಹೋದರೆ ಮುಂದಿನ ಪರಿಸ್ಥಿತಿಯೇ ಘೋರವಾಗಲಿದೆ ಅಂತಿದ್ದಾರೆ ಘಟಾನುಘಟಿ ದೇಶಗಳ ನಾಯಕರು. ಇದೇ ಸಮಯದಲ್ಲಿ, ಸ್ವತಃ ಇರಾನ್ ನೆಲದಲ್ಲೇ ಸುಪ್ರೀಂ ಲೀಡರ್ ಅಲಿ ಖಮೇನಿ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ.

ನೇರವಾಗಿ ಹೊಡೆದಾಡುವ ತಾಕತ್ ಇಲ್ಲದವನು...
ಹೌದು, ಇರಾನ್ ದೇಶದ ಸರ್ವೋಚ್ಛ ನಾಯಕ ಅಂತಾ ಕರೆಸಿಕೊಳ್ಳುವ ಸುಪ್ರೀಂ ಲೀಡರ್ ಅಲಿ ಖಮೇನಿ ಮಾಡಿರುವ ಎಡವಟ್ಟುಗಳು ಒಂದೆರಡಲ್ಲ. ಅದರಲ್ಲೂ ಸುಪ್ರೀಂ ಲೀಡರ್ ಅಲಿ ಖಮೇನಿ ಸಲುವಾಗಿಯೇ ಇದೀಗ ಇಸ್ರೇಲ್ ಜೊತೆಗೆ ಘೋರ ವಾರ್ ಶುರುವಾಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಆದರೆ, ಇಂತಹ ಕಠಿಣ ಸಮಯದಲ್ಲಿ ಇರಾನ್ ನೆಲದಲ್ಲಿ ಇದ್ದು ತಮ್ಮ ಜನರ ಪರವಾಗಿ ಹೋರಾಡಬೇಕಿದ್ದ ಅಲಿ ಖಮೇನಿ ರಹಸ್ಯ ಜಾಗದಲ್ಲಿ ಅಡಗಿ ಕುಳಿತಿರುವ ಆರೋಪವೂ ಕೇಳಿ ಬರುತ್ತಿದೆ.
ಅಲಿ ಖಮೇನಿ ವಿರುದ್ಧ ಜನಾಕ್ರೋಶ?
ಹೀಗೆ ಅಲಿ ಖಮೇನಿ ನೇರವಾಗಿ ಹೊಡೆದಾಡುವ ತಾಕತ್ ಇಲ್ಲದವನು, ಇರಾನ್ ದೇಶದ ಅಮಾಯಕರನ್ನು ಈಗ ಕಂಟಕಕ್ಕೆ ನೂಕಿದ್ದಾನೆ ಅಂತಾ ಜನರು ಕೂಡ ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೊಂದು ಕಡೆ ಅಲಿ ಖಮೇನಿ ವರ್ತನೆ ಇದೇ ರೀತಿಯಾಗಿ ಇದ್ದರೆ, ಇರಾನ್ ಜನರೇ ದಂಗೆ ಏಳುವ ಮುನ್ಸೂಚನೆಗಳು ಇದೀಗ ಸಿಗುತ್ತಿದೆ. ಇಷ್ಟೆಲ್ಲಾ ನಡೆದರೂ ಸಾಮಾನ್ಯ ಜನರನ್ನು ಬಲಿ ಕೊಡುತ್ತಾ, ಇರಾನ್ ಸೇನೆಯನ್ನೂ ನಾಶ ಮಾಡುತ್ತಿರುವ ಅಲಿ ಖಮೇನಿ ಅಂತಾ ಪ್ರಜೆಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications