ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ವಿಮಾನ ಪತನ; ಇರಾನ್ ಕೈವಾಡಕ್ಕೆ ಸಾಕ್ಷಿ ಕೊಟ್ಟ ಅಮೆರಿಕ

|
Google Oneindia Kannada News

ಟೆಹರಾನ್, ಜನವರಿ 10 : ಉಕ್ರೇನ್‌ನ ಜೆಟ್‌ಲೈನರ್ ವಿಮಾನ ಪತನ ಪ್ರಕರಣದಕ್ಕೆ ತಿರುವು ಸಿಕ್ಕಿದೆ. ನಿಲ್ದಾಣಕ್ಕೆ ಮರಳಲು ಯತ್ನಿಸುತ್ತಿದ್ದ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಅಮೆರಿಕ ಹೇಳಿದೆ.

ಜನವರಿ 8ರಂದು ಇರಾನ್‌ನಲ್ಲಿ ಟೆಹರಾನ್‌ನಿಂದ ಉಕ್ರೇನ್‌ಗೆ ಹೊರಟಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದಲ್ಲಿಯೇ ಪತನಗೊಂಡಿತ್ತು. 168 ಪ್ರಯಾಣಿಕರು ಮತ್ತು 9 ಸಿಬ್ಭಂದಿಗಳು ಮೃತಪಟ್ಟಿದ್ದರು.

ಉಕ್ರೇನ್ ವಿಮಾನ ಅಪಘಾತ ಪ್ರಕರಣಕ್ಕೆ ಹೊಸ ತಿರುವು: ಕ್ಷಿಪಣಿ ದಾಳಿಯ ಬಗ್ಗೆ ಶಂಕೆಉಕ್ರೇನ್ ವಿಮಾನ ಅಪಘಾತ ಪ್ರಕರಣಕ್ಕೆ ಹೊಸ ತಿರುವು: ಕ್ಷಿಪಣಿ ದಾಳಿಯ ಬಗ್ಗೆ ಶಂಕೆ

ಅಮೆರಿಕ ಇರಾನ್ ಈ ವಿಮಾನ ಪತನದ ಹಿಂದಿದೆ ಎಂದು ಆರೋಪಿಸಿದೆ. ವಿಮಾನ ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಎರಡು ಕ್ಷಿಪಣಿಗಳನ್ನು ಇರಾನ್ ಹಾರಿಸಿದೆ ಎಂದು ಅಮೆರಿಕ ಹೇಳಿದೆ. ಇದನ್ನು ಉಪಗ್ರಹದ ಕ್ಯಾಮರಾಗಳು ಸೆರೆ ಹಿಡಿದಿವೆ ಎಂದು ಸಾಕ್ಷಿಯನ್ನು ನೀಡಿದೆ.

ಇರಾನ್‌ನಲ್ಲಿ ವಿಮಾನ ಅಪಘಾತ: 180 ಮಂದಿ ಸಾವುಇರಾನ್‌ನಲ್ಲಿ ವಿಮಾನ ಅಪಘಾತ: 180 ಮಂದಿ ಸಾವು

ಉಕ್ರೇನ್ ವಿಮಾನ ವಿಮಾನ ನಿಲ್ದಾಣಕ್ಕೆ ಮರಳಲು ಯತ್ನಿಸುತ್ತಿದ್ದ ವೇಳೆ ಪತನಗೊಂಡು ಬೆಂಕಿಗೆ ಆಹುತಿಯಾಗಿದೆ ಎಂದು ಗುರುವಾರ ಇರಾನ್ ವರದಿ ಬಿಡುಗಡೆ ಮಾಡಿತ್ತು. ವಿಮಾನ ಪನತಗೊಂಡ ದಿನವೇ ಇರಾನ್ ಇರಾಕ್‌ನ ಅಮೆರಿದ ಸೇನಾ ನೆಲೆ ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿ ದಾಳಿಯನ್ನು ನಡೆಸಿತ್ತು.

ಮತ್ತೊಮ್ಮೆ ದಾಳಿ ಮಾಡಿದರೆ ಪುಡಿಗಟ್ಟುತ್ತೇವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆಮತ್ತೊಮ್ಮೆ ದಾಳಿ ಮಾಡಿದರೆ ಪುಡಿಗಟ್ಟುತ್ತೇವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಆಕಸ್ಮಿಕವಾಗಿ ದಾಳಿ

ಆಕಸ್ಮಿಕವಾಗಿ ದಾಳಿ

ಇರಾನ್ ಆಕಸ್ಮಿಕವಾಗಿ ಉಕ್ರೇನ್ ವಿಮಾನದ ಮೇಲೆ ದಾಳಿ ಮಾಡಿದೆ. ಇದರಿಂದಾಗಿ 168 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ ಎಂದು ಅಮೆರಿಕ ಹೇಳಿದೆ. ಉಕ್ರೇನ್ ವಿಮಾನ ಪತನದ ಕುರಿತು ತನಿಖೆಯನ್ನು ಆರಂಭಿಸಿದ್ದು, ಗುರುವಾರ ಇರಾನ್‌ಗೆ ಅಧಿಕಾರಿಗಳ ನಿಯೋಗ ಭೇಟಿ ಕೊಟ್ಟಿದೆ.

ಕ್ಷಿಪಣಿ ದಾಳಿ ಬಳಿಕ ವಿಮಾನ ಪತನ

ಕ್ಷಿಪಣಿ ದಾಳಿ ಬಳಿಕ ವಿಮಾನ ಪತನ

ವಿಮಾನ ಪತನಗೊಳ್ಳುವ ಕೆಲವು ಗಂಟೆಗಳ ಮೊದಲು ಇರಾನ್ ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿ ದಾಳಿ ನಡೆಸಿತ್ತು. ಉಕ್ರೇನ್ ವಿಮಾನ ಪತನಕ್ಕೂ ಮೊದಲು ಇರಾನ್ ಎರಡು ಕ್ಷಿಪಣಿ ಹಾರಿಸಿದೆ. ಇದು ಉದ್ದೇಶಪೂರ್ವಕ ದಾಳಿಯಲ್ಲ ಎಂಬುದು ಅಮೆರಿಕದ ಅಧಿಕಾರಿಗಳ ವಿಶ್ಲೇಷಣೆ.

ತನಿಖೆ ಆರಂಭಿಸಿದ ದೇಶಗಳು

ತನಿಖೆ ಆರಂಭಿಸಿದ ದೇಶಗಳು

ಉಕ್ರೇನ್ ವಿಮಾನ ಪತನದ ಬಗ್ಗೆ ಅಮೆರಿಕ, ಕೆನಡಾ ಜಂಟಿಯಾಗಿ ತನಿಖೆಯನ್ನು ಕೈಗೊಂಡಿವೆ. ಉಕ್ರೇನ್‌ ಸಹ ತನಿಖೆ ಆರಂಭಿಸಿದೆ. ಇರಾನ್ ಪತನಗೊಂಡ ವಿಮಾನದ ಬ್ಲಾಕ್ ಬಾಕ್ಸ್‌ ಅನ್ನು ಇನ್ನೂ ಉಕ್ರೇನ್‌ ಸರ್ಕಾರಕ್ಕೆ ನೀಡಿಲ್ಲ. ತನಿಖೆಯಲ್ಲಿ ಬ್ಲಾಕ್ ಬಾಕ್ಸ್ ಮಹತ್ವದ ಪಾತ್ರವನ್ನು ವಹಿಸಲಿದೆ.

ಇರಾನ್ ಹೇಳುವುದೇನು?

ಇರಾನ್ ಹೇಳುವುದೇನು?

ಪತನಗೊಳ್ಳುವ ಮುನ್ನ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿರಬಹುದು ಎಂದು ಇರಾನ್ ಹೇಳಿದೆ. ಕ್ಷಿಪಣಿ ದಾಳಿಯ ಹಿನ್ನಲೆಯಲ್ಲಿ ವಿಮಾನ ಪತನಗೊಂಡಿದೆ ಎಂಬ ಉಕ್ರೇನ್ ವಾದವನ್ನು ಇರಾನ್ ತಳ್ಳಿ ಹಾಕಿದೆ.

English summary
America confident that Iran air defenses had accidentally shot down the Ukraine airliner. Satellites had detected the launch of two missiles shortly before the plane crashed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X