Plane Crash: 179 ಜನರ ಸಾವಿಗೆ ಕಾರಣ ಏನು? ವಿಮಾನ ನಿಲ್ದಾಣದಲ್ಲಿ ತನಿಖೆ ಚುರುಕು!
ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತ ಇಡೀ ಜಗತ್ತು ಬೆಚ್ಚಿ ಬೀಳುವ ರೀತಿ ಮಾಡಿತ್ತು. ಯಾಕಂದ್ರೆ ಈ ದುರಂತದಲ್ಲಿ ಜೀವ ಬಿಟ್ಟವರು ಒಬ್ಬರಲ್ಲ, ಇಬ್ಬರಲ್ಲ. ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ 181 ಜನರಲ್ಲಿ ಬರೋಬ್ಬರಿ 179 ಜನರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೇ ಕಾರಣಕ್ಕೆ ಈ ಘಟನೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕೊರಿಯಾ ಸರ್ಕಾರ, ಕಠಿಣ ತನಿಖೆಗೆ ಮುಂದಾಗಿದೆ.
ಹೌದು ಲ್ಯಾಂಡಿಂಗ್ ಮಾಡುವ ಸಮಯದಲ್ಲಿ ರನ್‌ವೇ ಮೂಲಕ ಜಾರಿದ್ದ ದಕ್ಷಿಣ ಕೊರಿಯಾದ ವಿಮಾನ ನೇರ ರನ್‌ವೇ ಪಕ್ಕಕ್ಕೆ ಹೋಗಿ ಕ್ರಾಶ್ ಲ್ಯಾಂಡ್ ಆಗಿತ್ತು. 'ಜೆಜು ಏರ್ ಫ್ಲೈಟ್ 2216' ವಿಮಾನ ಥೈಲ್ಯಾಂಡ್ ಮೂಲಕ ದಕ್ಷಿಣ ಕೊರಿಯಾಗೆ ಬರುತ್ತಿತ್ತು.

ಆದರೆ ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲೇ ಈ ರೀತಿ ಭೀಕರ ಘಟನೆ ಸಂಭವಿಸಿತ್ತು. ಅಲ್ಲದೆ 181 ಜನರಲ್ಲಿ ಬರೋಬ್ಬರಿ 179 ಜನರು ಜೀವ ಬಿಟ್ಟ ವಿಚಾರ ತಲ್ಲಣ ಎಬ್ಬಿಸಿದೆ. ಹೀಗಾಗಿ ಭೀಕರ ಅಪಘಾತ ಸಂಭವಿಸಿದ್ದ ಮುವಾನ್ ಏರ್ಪೋರ್ಟ್ ಪೂರ್ತಿ ತಪಾಸಣೆ ನಡೆಸಿ ತನಿಖೆ ಮಾಡಲಾಗುತ್ತಿದೆ.
ಒಂದೇ ವಾರದಲ್ಲಿ 2 ಭೀಕರ ಘಟನೆ
ಕೇವಲ ಒಂದೇ ವಾರದ ಅಂತರದಲ್ಲಿ 2 ರಣಭೀಕರ ವಿಮಾನ ದುರಂತ ಸಂಭವಿಸಿ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಭೀಕರ ವಿಮಾನ ದುರಂತ ನೋಡಿ ನೊಂದಿದ್ದ ಜಗತ್ತಿಗೆ ಮತ್ತೊಂದು ಸ್ಫೋಟಕ ಸುದ್ದಿಯು ಸಿಕ್ಕಿತ್ತು. ದಕ್ಷಿಣ ಕೊರಿಯಾ ದೇಶದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿ ಒಟ್ಟಾರೆ 181 ಜನ ಇದ್ದ ವಿಮಾನ ಕ್ರಾಶ್ ಲ್ಯಾಂಡಿಂಗ್ ಆಗಿತ್ತು. ಕೆಲವು ದಿನಗಳ ಹಿಂದೆ ಕಝಕಿಸ್ತಾನ್ ದೇಶದಲ್ಲಿ ವಿಮಾನ ದುರಂತ ಸಂಭವಿಸಿ, 38 ಜನ ಬಲಿಯಾಗಿದ್ದರು. ಆ ನಂತರ ದಕ್ಷಿಣ ಕೊರಿಯಾದ ದುರ್ಘಟನೆ 179 ಜನರನ್ನು ಬಲಿಪಡೆದಿತ್ತು. ಹೀಗಾಗಿ ಈ ಘಟನೆ ಕುರಿತು ಗಂಭೀರ ತನಿಖೆ ಇದೀಗ ಆರಂಭವಾಗಿದೆ.












Click it and Unblock the Notifications