• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿಎನ್ ಬಿ ಹಗರಣ: ನೀರವ್ ಮೋದಿ ಸೋದರ ನೆಹಾಲ್ ವಿರುದ್ಧ ಅರೆಸ್ಟ್ ವಾರೆಂಟ್

|
   ಮೋದಿ, ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು..? | Oneindia Kannada

   ನವದೆಹಲಿ, ಸೆ. 13: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಸೋದರ ನೆಹಲ್​ ಮೋದಿ ವಿರುದ್ಧ ಇಂಟರ್​ಪೋಲ್​ ರೆಡ್​ಕಾರ್ನರ್​ ನೋಟಿಸ್, ಅರೆಸ್ಟ್ ವಾರೆಂಟ್ ಹೊರಡಿಸಿದೆ.

   ಯಾರೀತ ಬಹುಕೋಟಿ ವಂಚಕ ನೀರವ್ ಮೋದಿ?

   ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಸೇರಿ ವಿವಿಧ ಬ್ಯಾಂಕ್​ಗಳಿಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚು ವಂಚಿಸಿ ಬ್ರಿಟನ್​ಗೆ ವಜ್ರೋದ್ಯಮಿ ನೀರವ್​ ಮೋದಿ ಪರಾರಿಯಾಗಿದ್ದಾರೆ. ನೀರವ್ ಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ, ಹರಾಜು ಹಾಕಿದ ಬಳಿಕ ತನಿಖಾ ಸಂಸ್ಥೆ ಜಾರಿ ನಿರ್ದೇಶನಲಯವು ಜಪ್ತಿ ಕಾರ್ಯ ಮುಂದುವರೆಸಿದೆ. ಈ ನಡುವೆ ಸ್ವಿಸ್ ಬ್ಯಾಂಕಿನ ನಾಲ್ಕು ಖಾತೆಗಳು ಜಪ್ತಿಯಾಗಿತ್ತು. ಈಗ ಮೋದಿ ಅವರ ಸೋದರಿಗೆ ಸೇರಿದ ಸಿಂಗಪುರದ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

   ನೀರವ್ ಮೋದಿ, ಮೆಹುಲ್ ಚೊಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ. ಬೆಲ್ಜಿಯಂ ನಿವಾಸಿಯಾದ ನೆಹಲ್​ ನ್ಯೂಯಾರ್ಕ್​ನಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿಯಿದೆ. ನೆಹಾಲ್ ಬಂಧಿಸಿ ವಿಚಾರಣೆಗೊಳಪಡಿಸಲು ಜಾರಿ ನಿರ್ದೇಶನಾಲಯವು ಮುಂದಾಗಿದೆ. 1,400 ಕೋಟಿ ವಂಚ್ಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಹಾಲ್ ವಶಕ್ಕೆ ತೆಗೆದುಕೊಳ್ಳಲು ಮುಂಬೈ ಕೋರ್ಟಿಗೆ 'ಇಡಿ' ಅರ್ಜಿ ಹಾಕಿದೆ.

   ಹಲವು ವಂಚನೆ ಪ್ರಕರಣದಲ್ಲಿ ನೆಹಾಲ್ ಭಾಗಿ

   ಹಲವು ವಂಚನೆ ಪ್ರಕರಣದಲ್ಲಿ ನೆಹಾಲ್ ಭಾಗಿ

   ಕಳೆದ ವರ್ಷ ಏಪ್ರಿಲ್ ನಲ್ಲಿ 12 ಉದ್ಯೋಗಿಗಳನ್ನು ದುಬೈನಿಂದ ಕೈರೋಗೆ ಕರೆದೊಯ್ದಿದ್ದ ನೆಹಾಲ್ ಅವರು ನಕಲಿ ದಾಖಲೆ ಸೃಷ್ಟಿಸುವಂತೆ ಒತ್ತಡ ಹೇರಿದ್ದರು. ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾದ ಆಶೀಶ್ ಲಾಡ್ ಗೆ ಲಂಚ ನೀಡಿದ್ದರು. ನೀರವ್ ಆಪ್ತ ಮಿಹಿರ್ ಭಾನ್ಸಲಿ ಹಾಗೂ ನೆಹಾಲ್ ಸೇರಿಕೊಂಡು ವಜ್ರ ಸಂಸ್ಥೆಯ ಸಿಬ್ಬಂದಿಗೆ ಬೆದರಿಕೆ ಒಡ್ಡಿ, ದುಷ್ಕೃತ್ಯಗಳನ್ನು ಎಸಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಸುಮಾರು 2 ಮಿಲಿಯನ್ ಡಾಲರ್ ಖರ್ಚು ಮಾಡಿ ಯುರೋಪಿನ ನ್ಯಾಯಾಂಗ ಅಧಿಕಾರಿಗಳನ್ನು ತಮ್ಮತ್ತ ಸೆಳೆದುಕೊಂಡರು. ಫೈರ್ ಸ್ಟಾರ್ ಕಂಪನಿಯಿಂದ 50 ಕೆಜಿ ಚಿನ್ನ ರವಾನೆ, ಹಾಂಗ್ ಕಾಂಗ್ ನಿಂದ 150 ಬಾಕ್ಸ್ ಮುತ್ತು ರವಾನೆ ಸೇರಿದಂತೆ 335.95 ಕೋಟಿ ವಂಚನೆ ಆರೋಪ ನೆಹಾಲ್ ಮೇಲಿದೆ.

   ಲಂಡನ್ನಿನಲ್ಲಿ ಜಾಮೀನಿಗಾಗಿ ನೀರವ್ ಹೋರಾಟ

   ಲಂಡನ್ನಿನಲ್ಲಿ ಜಾಮೀನಿಗಾಗಿ ನೀರವ್ ಹೋರಾಟ

   ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನೀರವ್ ಮೋದಿ ಅವರು ಜಾಮೀನಿಗಾಗಿ ಐದು ಬಾರಿ ಮನವಿ ಸಲ್ಲಿಸಿದ್ದರೂ ಜಾಮೀನು ಸಿಕ್ಕಿಲ್ಲ. ನೀರವ್ ಮೋದಿಗೆ ಇಂಗ್ಲೆಂಡಿನ ವೆಸ್ಟ್‌ಮಿನಿಸ್ಟರ್ ಕೋರ್ಟ್ ಜಾಮೀನು ನಿರಾಕರಿಸುತ್ತಾ ಬಂದಿದೆ. ಮೋದಿ ಅವರ ಮಕ್ಕಳು ಲಂಡನ್ನಿನಲ್ಲೇ ವ್ಯಾಸಂಗ ಮಾಡುತ್ತಿದ್ದು, ಲಂಡನ್ ಬಿಡುವುದಿಲ್ಲ, ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಮೋದಿ ಪರ ವಕೀಲರು ವಾದಿಸಿದ್ದರು.

   ಪಿಎನ್ ಬಿ ಹಗರಣ: ಸ್ವಿಸ್ ಬ್ಯಾಂಕ್ ನಂತರ ಸಿಂಗಪುರ ಬ್ಯಾಂಕ್ ಖಾತೆ ಜಪ್ತಿ

   ಮನಿಲಾಂಡ್ರಿಂಗ್ ಅವ್ಯವಹಾರ

   ಮನಿಲಾಂಡ್ರಿಂಗ್ ಅವ್ಯವಹಾರ

   ನೀರವ್ ಮೋದಿ ಅವರು 6,400 ಕೋಟಿ ರು ಮನಿಲಾಂಡ್ರಿಂಗ್ ಅವ್ಯವಹಾರದಲ್ಲಿ ತೊಡಗಿದ್ದರು ಎಂದು ಜಾರಿ ನಿರ್ದೇಶನಾಲಯವು ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ. ಪಿಎಂಎಲ್ಎ ಕಾಯ್ದೆ ಉಲ್ಲಂಘನೆಯಡಿಯಲ್ಲಿ ಥೈಲ್ಯಾಂಡ್ ನಲ್ಲಿ 13 ಕೋಟಿ ರು ಮೌಲ್ಯದ ಆಸ್ತಿ ವಶ ಪಡಿಸಿಕೊಳ್ಳಲಾಗಿತ್ತು. ಗೀತಾಂಜಲಿ ಸಮೂಹ ಸಂಸ್ಥೆಗೆ ಸೇರಿದ ಈ ಆಸ್ತಿಗೆ ನೀರವ್ ಅವರ ಅಂಕಲ್ ಮೆಹುಲ್ ಚೋಕ್ಸಿ ಅವರು ಸಹ ಮಾಲೀಕರಾಗಿದ್ದಾರೆ

   ಸೋದರಿ ಪೂರ್ವಿ ಮೆಹ್ತಾ ಕೂಡಾ ಆರೋಪಿ

   ಸೋದರಿ ಪೂರ್ವಿ ಮೆಹ್ತಾ ಕೂಡಾ ಆರೋಪಿ

   ನೀರವ್ ಮೋದಿಯ 4 ಸ್ವಿಸ್ ಬ್ಯಾಂಕ್ ಖಾತೆಯಿಂದ ಸಿಕ್ಕ ಮೊತ್ತ ಬಹಿರಂಗವಾಗಿದ್ದು, ಸುಮಾರು 283.16 ಕೋಟಿ ರು ಗಳನ್ನು ತನಿಖಾ ಸಂಸ್ಥೆಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ. 3,74,11,596 ಡಾಲರ್ ಠೇವಣಿ ಹೊಂದಿದ್ದರೆ, ಸೋದರಿ ಪೂರ್ವಿ ಮೋದಿ ಖಾತೆಯಲ್ಲಿ 27,38,136 ಬ್ರಿಟಿಷ್ ಪೌಂಡ್ ಹೊಂದಿದ್ದರು. ಸುಮಾರು 13,700 ಕೋಟಿ ರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಪೂರ್ವಿ ಮೋದಿ ಕೂಡಾ ಸಹ ಆರೋಪಿಯಾಗಿದ್ದಾರೆ.

   ಮೆಹುಲ್ ಚೋಕ್ಸಿಗೆ ಸೇರಿದ ದುಬೈ ಆಸ್ತಿ, ಬೆಂಜ್ ಕಾರು ವಶಕ್ಕೆ

   English summary
   The Interpol has issued an arrest warrant against Nehal Modi, the brother of Nirav Modi in connection with the PNB fraud case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X