ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ: ಉಗ್ರರ ವಶದಲ್ಲಿ ಇನ್ಫೋಸಿಸ್ ಉದ್ಯೋಗಿ

By Mahesh
|
Google Oneindia Kannada News

ಸಿಡ್ನಿ, ಡಿ.15: ಇಲ್ಲಿನ ಒಪೆರಾ ಹೌಸ್ ನ ಮಾರ್ಟಿನ್ ಪ್ಲೇಸಿನ ಕೆಫೆಯಲ್ಲಿ ಉಗ್ರರ ಒತ್ತೆಯಾಳಾಗಿರುವವರ ಪೈಕಿ ಇನ್ಫೋಸಿಸ್ ನ ಉದ್ಯೋಗಿಯೂ ಇರುವುದು ದೃಢಪಟ್ಟಿದೆ.ಹೈದರಾಬಾದ್ ಮೂಲದ ವಿಶ್ವಕಾಂತ್ ರೆಡ್ಡಿ ಅವರು ಉಗ್ರರ ವಶದಲ್ಲಿದ್ದಾರೆ ಎಂದು ಇನ್ಫೋಸಿಸ್ ಕೂಡಾ ಸ್ಪಷ್ಟಪಡಿಸಿದೆ.

ಇರಾಕಿ ಉಗ್ರರ ಕಣ್ತಪ್ಪಿಸಿ Lindt Chocolat Cafeಯಿಂದ ಮೂವರು ಒತ್ತೆಯಾಳುಗಳು ಹೊರ ಬಂದಿರುವ ಸುದ್ದಿ ಬಂದ ಬೆನ್ನಲ್ಲೇ ಇನ್ಫೋಸಿಸ್ ಸಂಸ್ಥೆಯ ಸಾಫ್ಟ್ ವೇರ್ ಇಂಜಿನಿಯರ್ ವಿಶ್ವಕಾಂತ್ ರೆಡ್ಡಿ ಉಗ್ರರ ವಶದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

'ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೈದರಾಬಾದ್ ಮೂಲದ ವಿಶ್ವಕಾಂತ್ ರೆಡ್ಡಿ ಅವರು ಉಗ್ರರ ವಶದಲ್ಲಿದ್ದಾರೆ. ಸಂಸ್ಥೆಯ ಇತರೆ ಉದ್ಯೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಭಾರತೀಯ ರಾಯಭಾರ ಕಚೇರಿಗೆ ಮಾಹಿತಿಗಾಗಿ ಕೋರಲಾಗಿದೆ ಎಂದು ಇನ್ಫೋಸಿಸ್ ತನ್ನ ಪ್ರಕಟಣೆಯಲ್ಲಿ ಹೇಳಿದೆ. [ಬೆಂಗಳೂರಿಗೆ ಮುಹೂರ್ತವಿಟ್ಟ ಉಗ್ರರು?]

Infosys employee among those held hostage inside Lindt cafe

ಉಗ್ರರು ಸುಮಾರು 9 ಗಂಟೆಗಳ ಕಾಲದಿಂದ ಒಪೆರಾ ಹೌಸ್ ನ ಜನಪ್ರಿಯ ಕೆಫೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು 50 ಕ್ಕೂ ಅಧಿಕ ನಾಗರಿಕರನ್ನು ಒತ್ತೆಯಾಳು ಮಾಡಿಕೊಂಡಿದ್ದಾರೆ. ಈ ಪೈಕಿ ಐವರು ಉಗ್ರರ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ. ಐಎಸ್ಐಎಸ್ ಬಾವುಟ ಹಾರಾಟ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಜೊತೆ ಮಾತುಕತೆ ನಡೆಸಲು ಉಗ್ರರು ಮುಂದಾಗಿದ್ದಾರೆ. [ಸಿಡ್ನಿ: ಉಗ್ರರ ಚಟುವಟಿಕೆ ಕ್ಷಣ ಕ್ಷಣದ ಅಪ್ದೇಡ್ಸ್]

ಒಪೆರಾ ಹೌಸ್ ನ ಸುತ್ತಾ ಮುತ್ತಾ ನಾಲ್ಕು ಬಾಂಬ್ ಇರಿಸುವುದಾಗಿ ಉಗ್ರರು ಬೆದರಿಕೆ ಒಡ್ಡಿರುವುದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ. ಲಿಂಟ್ ಚಾಕಲೇಟ್ ಕೆಫೆ ಬಳಿ ಎರಡು ಬಾಂಬ್ ಹಾಗೂ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರೀಕ್ಟ್ ನ ಪ್ರಮುಖ ಸ್ಥಳವೊಂದರಲ್ಲಿ ಮಿಕ್ಕ ಎರಡು ಬಾಂಬ್ ಇಟ್ಟಿರುವುದಾಗಿ ತಿಳಿದು ಬಂದಿದೆ ಎಂದು ನೆಟ್ವರ್ಕ್ ಟೆನ್ ಹಾಗೂ ಸ್ಕೈ ನ್ಯೂಸ್ ವರದಿ ಮಾಡಿದೆ.

English summary
One of the Indian hostages being held captive in Sydney works with the Infosys in Hyderabad. Vishwakanth Reddy works with the Infosys in Hyderabad is also among the hostages in Sydney. Infosys too confirms that one of their employees is being held hostage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X