ಕೋವಿಡ್ ರೋಗಿ ಜತೆ ಟಾಯ್ಲೆಟ್‌ನಲ್ಲಿ ಸೆಕ್ಸ್ ಮಾಡಿದ ನರ್ಸ್ ಅಮಾನತು

ಜಕಾರ್ತಾ, ಡಿಸೆಂಬರ್ 30: ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿದ್ದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬನೊಂದಿಗೆ ನರ್ಸ್ ಒಬ್ಬರು ಲೈಂಗಿಕ ಕ್ರಿಯೆ ನಡೆಸಿದ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ. ಪಿಪಿಇ ಸೂಟ್ ಧರಿಸದ ಕೊರೊನಾ ವೈರಸ್ ರೋಗಿ ಜತೆಗೆ ಕಾಮ ಚಟುವಟಿಕೆಗೆ ಆಕೆ ಪ್ರಯತ್ನಿಸಿದ್ದಾರೆ.

ರಾಜಧಾನಿ ಜಕಾರ್ತಾದಲ್ಲಿನ ವಿಸ್ಮಾ ಅಟ್ಲೆಟ್ ಕ್ವಾರೆಂಟೈನ್ ಸೌಲಭ್ಯದಲ್ಲಿನ ಟಾಯ್ಲೆಟ್ ಒಳಗೆ ಈ ಘಟನೆ ನಡೆದಿದ್ದು, ತಡವಾಗಿ ವರದಿಯಾಗಿದೆ. ಘಟನೆ ನಡೆದ ಸಮಯದಲ್ಲಿ ಕೋವಿಡ್ ಪಾಸಿಟಿವ್ ರೋಗಿಯಾಗಿದ್ದ ವ್ಯಕ್ತಿ ಈ ವಿಚಾರದ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಬೆಳಕಿಗೆ ಬಂದಿದೆ.

ರೋಗಿಯು ವಾಟ್ಸಾಪ್ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನರ್ಸ್‌ಳ ಪಿಪಿಇ ಕಿಟ್ ನೆಲದ ಮೇಲೆ ಬಿದ್ದಿದ್ದು ಮತ್ತು ಅವರಿಬ್ಬರೂ ಕಾಮದಾಟದಲ್ಲಿ ತೊಡಗಿರುವ ಅಂಶಗಳನ್ನು ಒಳಗೊಂಡಿದೆ. ಇಬ್ಬರ ಲೈಂಗಿಕ ಚಟುವಟಿಕೆಯ ವಿಡಿಯೋ ಕೂಡ ಅಪ್ಲೋಡ್ ಮಾಡಲಾಗಿದೆ.

ಇಂಡೋನೇಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 7 ಲಕ್ಷದಷ್ಟಿದೆ. ಇದುವರೆಗೂ 21,000 ಮಂದಿ ವೈರಸ್‌ನಿಂದ ಮೃತಪಟ್ಟಿದ್ದಾರೆ. ಮುಂದೆ ಓದಿ.

ನರ್ಸ್ ಅಮಾನತು

ನರ್ಸ್ ಅಮಾನತು

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಆಸ್ಪತ್ರೆ ಅಧಿಕಾರಿಗಳು ರೋಗಿ ಮತ್ತು ನರ್ಸ್ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಕೊರೊನಾ ವೈರಸ್ ರೋಗಿಯ ಪಿಪಿಇ ಕಿಟ್ ಕಳಚಿದ್ದನ್ನು ಒಪ್ಪಿಕೊಂಡ ನರ್ಸ್‌ಅನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ಸೆಂಟ್ರಲ್ ಜಕಾರ್ತಾ ಪೊಲೀಸ್ ತನಿಖೆಗೆ ಒಪ್ಪಿಸಲಾಗಿದೆ.

ರೋಗಿಯಲ್ಲಿ ಪಾಸಿಟಿವ್, ನರ್ಸ್‌ಗೆ ನೆಗೆಟಿವ್

ರೋಗಿಯಲ್ಲಿ ಪಾಸಿಟಿವ್, ನರ್ಸ್‌ಗೆ ನೆಗೆಟಿವ್

ರೋಗಿಯೊಬ್ಬರ ಜತೆಗೆ ಲೈಂಗಿಕ ಸಂಪರ್ಕಕ್ಕೆ ಬಂದಿದ್ದ ಕಾರಣ ದಾದಿಯನ್ನು ಕೂಡ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಘಟನೆ ಬಳಿಕ ಇಬ್ಬರನ್ನೂ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೋಗಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದರೆ, ನರ್ಸ್ ವರದಿ ನೆಗೆಟಿವ್ ಬಂದಿದೆ.

ಇಬ್ಬರೂ ವ್ಯಕ್ತಿಗಳ ಬಂಧನ

ಇಬ್ಬರೂ ವ್ಯಕ್ತಿಗಳ ಬಂಧನ

ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ಬಳಿಕ ತೀವ್ರ ವೈರಲ್ ಆಗಿದ್ದು, ಇಂಡೋನೇಷ್ಯಾದ ಕಠಿಣ ಲೈಂಗಿಕ ಚಟುವಟಿಕೆಗಳ ಚಿತ್ರೀಕರಣ ನಿಷೇಧ ಕಾಯ್ದೆಗಳಡಿ ಸೆಂಟ್ರಲ್ ಜಕಾರ್ತಾ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಲೈಂಗಿಕ ಕ್ರಿಯೆ ನಡೆಸುವಂತಿಲ್ಲ

ಲೈಂಗಿಕ ಕ್ರಿಯೆ ನಡೆಸುವಂತಿಲ್ಲ

ಕೊರೊನಾ ವೈರಸ್ ತಡೆಗೆ ತೆಗೆದುಕೊಂಡಿರುವ ಕಠಿಣ ನಿಯಮಗಳ ಪ್ರಕಾರ ಒಣ ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಂತಹ ಕೋವಿಡ್ ಸಂಬಂಧಿ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ಜತೆಗೆ ಲೈಂಗಿಕ ಕ್ರಿಯೆ, ಚುಂಬನದಂತಹ ಇತರೆ ಚಟುವಟಿಕೆಗಳನ್ನು ನಡೆಸುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+