ಅವಳಲ್ಲ..ಅವನು..: ಮದುವೆಯಾದ ಬಳಿಕ ಗುಟ್ಟು ರಟ್ಟು, ವರ ಫುಲ್ ಶಾಕ್
ಮದುವೆ ಎಂದರೆ ನೂರಾರು ಕನಸುಗಳ ಸಮ್ಮಿಲನ. ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ಹತ್ತಾರು ಕನಸುಗಳಿರುತ್ತದೆ. ಅದರಲ್ಲೂ ಪ್ರೀತಿಸಿ ಮದುವೆಯಾಗುವರಿಗಂತೂ ತಮ್ಮ ಕಾಲು ಭೂಮಿ ಮೇಲೆ ನಿಲ್ಲದ ಅನುಭವ ಖುಷಿಯಲ್ಲಿ ತೇಲಾಡುತ್ತಿರುತ್ತಾರೆ. ಇಂತಹದ್ದೇ ಖುಷಿಯಲ್ಲಿದ್ದ, ಪ್ರೀತಿಸಿದ ಹುಡುಗಿಯನ್ನೇ ಕೈ ಹಿಡಿದು ಆಕೆಯೊಂದಿಗೆ ಸುಂದರ ಸಂಸಾರ ನಡೆಸಬೇಕು ಎಂದುಕೊಂಡಿದ್ದ ವ್ಯಕ್ತಿಯೊಬ್ಬನ ಖುಷಿ ಮದುವೆಯಾದ 12 ದಿನಕ್ಕೆ ಮಾಯಾವಾಗಿದೆ.
ನನ್ನ ಹುಡುಗಿ ಸುಂದರವಾಗಿದ್ದಾಳೆ..ಕೊನೆಗೂ ಆಕೆಯೊಂದಿಗೆ ಮದುವೆಯಾದೆ..ಇನ್ನು ಸುಖ ಸಂಸಾರ ಎಂದು ಕನಸು ಕಂಡಿದ್ದ ಯುವಕನ ಬಾಳು ನರಕವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ದುರಂತವೆಂದರೆ ಆತ ಅಷ್ಟು ಕನಸು ಕಂಡು ಮದುವೆಯಾಗಿದ್ದು ಹುಡುಗಿಯನ್ನಲ್ಲ..ಬದಲಿಗೆ ಹುಡುಗಿಯಂತೆ ನಟಿಸುತ್ತಿದ್ದ ಹುಡುಗನನ್ನು.

ಇಂಡೋನೇಷಿಯಾದ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿ ಒಬ್ಬಳನ್ನು ನೋಡಿ ಮೆಚ್ಚಿಕೊಂಡು ಮೆಸೇಜ್ ಮಾಡಿದ್ದಾನೆ. ಆಕೆಯಿಂದಲೂ ಉತ್ತರ ಬಂದಿದ್ದು, ಮೊದಲು ಸ್ನೇಹ, ಸಲುಗೆ ಆಮೇಲೆ ಪ್ರೀತಿ ಆರಂಭವಾಗಿದೆ. ಇಬ್ಬರು ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಡೇಟಿಂಗ್ ಮಾಡಿದ ನಂತರ ಭೇಟಿಯಾಗಿದ್ದಾರೆ.
ಭೇಟಿಯಾದಾಗ ಆಕೆ ತಲೆ ಹಾಗೂ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದು, ಕಣ್ಣುಗಳಷ್ಟೇ ಶುಭ್ರವಾಗಿ ಹೊಳೆಯುತ್ತಿದ್ದವು. ಆಕೆಯ ಕಣ್ಣುಗಳನ್ನು ನೋಡಿ ಮನಸೋತ ವ್ಯಕ್ತಿ ಇನ್ನಷ್ಟು ಪ್ರೀತಿಸಿದ್ದಾನೆ. ಬಳಿಕ ಪರಸ್ಪರ ಮನೆಯಲ್ಲಿ ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಆದರೆ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಾಗ ಎಲ್ಲ ಸತ್ಯ ಬಯಲಾಗಿದ್ದು, ವರ ಫುಲ್ ಶಾಕ್ ಆಗಿದ್ದಾನೆ. ಲಕ್ಷಾಂತರ ರೂಪಾಯಿ ವ್ಯಹಿಸಿ ಮದುವೆಯಾಗಿ ಬಂದ ಯುವಕ ಈ ಅವಾಂತರದಿಂದ ಬೆಚ್ಚಿಬಿದ್ದಿದ್ದಾನೆ.
ಮೋಸಗಾತಿ(ರ) ಸಿಕ್ಕಿ ಬಿದ್ದಿದ್ದೇಗೆ..?
ಮೋಸ ಹೋದ ಯುವಕನನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹಿಜಾಬ್ ಹಾಕಿಕೊಂಡೇ ಇರುತ್ತಿದ್ದಳು. ಆತನಿಗೆ ಆಕೆಯ ಬಗ್ಗೆ ಒಂದು ಚೂರು ಅನುಮಾನ ಬರದಂತೆ ನಡೆದುಕೊಂಡಿದ್ದಳು. ಆದರೆ ಮದುವೆಯಾದ ನಂತರವೂ ಮನೆಯವರ ಮುಂದೆಯೂ ಆಕೆ ಹಿಜಾಬ್ ತೆಗೆದಿರಲಿಲ್ಲ. ಆದರೆ ಮದುವೆಯಾಗಿ 12 ದಿನವಾದರೂ ಇದೆ ರೀತಿ ಹಿಜಾಬ್ ತೆಗೆಯದೇ ಇರುವುದನ್ನು ಕಂಡು ಅನುಮಾನ ಬಂದಿದೆ. ಬಳಿಕ ಪಟ್ಟು ಹಿಡಿದು ತನಿಖೆ ಮಾಡಿದಾಗ ಸತ್ಯಾಂಶ ಹೊರ ಬಿದ್ದಿದ್ದು, ಹುಡುಗಿ ಅಲ್ಲ..ಹುಡುಗ ಎನ್ನುವುದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications