Axiom-4 Mission: ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ವಿಜ್ಞಾನಿ, ಹೊಸ ಇತಿಹಾಸ ಸೃಷ್ಟಿ!
ಶತಕೋಟಿ ಭಾರತೀಯರ ಕನಸು ಇಂದು ನನಸಾಗಿದೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆ ಸಾಲು ಸಾಲು ದಾಖಲೆ ಬರೆಯುತ್ತಾ ಇತಿಹಾಸ ನಿರ್ಮಿಸಿದೆ. ಇಂತಹ ಸಮಯದಲ್ಲೇ, ಭಾರತೀಯ ವಿಜ್ಞಾನಿಗಳು ಕೂಡ ದೊಡ್ಡ ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಇಂದು ಕೂಡ ಮಹತ್ವದ ಘಟನೆ ನಡೆದಿದೆ. ಭಾರತ ಮೂಲದ ವಿಜ್ಞಾನಿಯ ನೇತೃತ್ವದಲ್ಲಿ, ಇಂದು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿದೆ ನಾಸಾ ರಾಕೆಟ್.
ಮನುಷ್ಯರ ಭವಿಷ್ಯಕ್ಕಾಗಿ ಬಾಹ್ಯಾಕಾಶ ವಿಜ್ಞಾನಿಗಳು ಸಾಲು ಸಾಲು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಅದೇ ರೀತಿಯಾಗಿ ಇಂದು ಆಕ್ಸಿಯಮ್-4 ಮಿಷನ್ ಉಡಾವಣೆಯನ್ನು ಮಾಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಂಸ್ಥೆ ಸಿದ್ಧತೆ ನಡೆಸಿತ್ತು. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ನೇತೃತ್ವದಲ್ಲಿ ಈ ಯೋಜನೆ ಕೈಗೊಳ್ಳಲಾಗಿತ್ತು.

ಜಗತ್ತಿನಾದ್ಯಂತ ಜನರಿಂದ ಪ್ರಾರ್ಥನೆ
ಆಕ್ಸಿಯಮ್-4 ಮಿಷನ್ ಫ್ಲೊರಿಡಾದಲ್ಲಿ ಇರುವ ನಾಸಾ ಸಂಸ್ಥೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ. ಆಕ್ಸಿಯಮ್-4 ಮಿಷನ್ ಮಹತ್ವದ ಸಂಶೋಧನೆ & ಮನುಷ್ಯರು ಭವಿಷ್ಯದಲ್ಲಿ ಬಾಹ್ಯಾಶದಲ್ಲಿ ಬದುಕುವಂತೆ ಮಾಡಲು ವೈಜ್ಞಾನಿಕ ತನಿಖೆಗಳನ್ನ ನಡೆಸಲಿದೆ. ಹೀಗಿದ್ದಾಗ ಜಗತ್ತಿನಾದ್ಯಂತ ಈ ಉಡಾವಣೆ ಯಶಸ್ವಿಯಾಗಲಿ ಅಂತಾ ಜನರು ಪ್ರಾರ್ಥಿಸಿದ್ದರು. ಅದು ಈಗ ಯಶಸ್ವಿಯಾಗಿದ್ದು, ಕೋಟಿ ಕೋಟಿ ಪ್ರಾರ್ಥನೆ ಫಲಿಸಿದೆ.
ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ವಿಜ್ಞಾನಿ
ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿ ಮೂಲದ ವಿಜ್ಞಾನಿ ಟಿಬೊರ್ ಕಾಪು, ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ವಿಸ್ಕಿ ಸೇರಿ, ಒಟ್ಟಾರೆ 4 ಜನರಿದ್ದ ತಂಡ ಇಂದು ಬಾಹ್ಯಾಕಾಶಕ್ಕೆ ಹಾರಿದೆ. ಸ್ಪೆಸ್ ಎಕ್ಸ್ ಸಂಸ್ಥೆಯ ಸಹಯೋಗದಲ್ಲಿಯೇ ಯೋಜನೆ ಕೈಗೊಳ್ಳಲಾಗಿತ್ತು. ಈ ವಿಜ್ಞಾನಿಗಳು ಇನ್ನೇನು ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದು, ಹಲವು ಸಂಶೋಧನೆ ನಡೆಸಿ ಮರಳಿ ಭೂಮಿಗೆ ಬರಲಿದ್ದಾರೆ.












Click it and Unblock the Notifications