ಕಾಬೂಲ್: ಭಾರತದ ಜುಡಿತ್ ಡಿಸೋಜಾ ಅಪಹರಣ

Posted By:
Subscribe to Oneindia Kannada

ಕಾಬೂಲ್, ಜೂನ್ 10: ಇಲ್ಲಿನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಲ್ಕತಾ ಮೂಲದ ಭಾರತೀಯ ಮಹಿಳೆ ಜುಡಿತ್ ಡಿಸೋಜಾ(40) ಅವರನ್ನು ಗುರುವಾರ ರಾತ್ರಿ ಬಂದೂಕುಧಾರಿಯೊಬ್ಬ ಅಪಹರಿಸಿದ್ದಾನೆ. ಅಪಹರಣಕಾರರ ಬಗ್ಗೆ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆ ಬಗ್ಗೆ ಒಂದು ತಿಂಗಳ ಹಿಂದೆ ಎಚ್ಚರಿಕೆ ಸಂದೇಶವನ್ನು ಭಾರತೀಯ ವಿದೇಶಾಂಗ ಸಚಿವಾಲಯ ಹೊರಡಿಸಿತ್ತು. ಉಗ್ರ ಸಂಘಟನೆಗಳ ಕಣ್ಣು ಭಾರತೀಯರ ಮೇಲೆ ಬಿದ್ದಿದೆ ಎಂಬ ಆತಂಕಕಾರಿ ವಿಷಯ ಹೊರ ಬಂದಿತ್ತು. ಅಫ್ಘನ್ ಗೆ ತೆರಳು ಭಾರತೀಯರಿಗೂ ಈ ಬಗ್ಗೆ ಸೂಚನೆ ನೀಡಲಾಗಿತ್ತು.

Indian woman's abduction in Kabul a month after security advisory was issued

ಇದಾದ ಸುಮಾರು ಒಂದು ತಿಂಗಳ ಬಳಿಕ ಭಾರತೀಯ ಮಹಿಳೆಯನ್ನು ತೈಮನಿಯ ಕ್ವಾಲ ಇ ಫತೂಲ್ಲಾ ಎಂಬ ಪ್ರದೇಶದಿಂದ ಗುರುವಾರ ರಾತ್ರಿ 10.40ರ ಸುಮಾರಿಗೆ ಅಪಹರಿಸಲಾಗಿದೆ. ಅಪಹರಣಕ್ಕೆ ಒಳಗಾಗಿರುವ ಮಹಿಳೆ ಜುಡಿತ್ ಡಿಸೋಜಾ ಅವರು ಆಘಾ ಖಾನ್ ಫೌಂಡೇಷನ್​ನಲ್ಲಿ ಹಿರಿಯ ತಾಂತ್ರಿಕ ಸಲಹೆಗಾರರಾಗಿ ಕೆಲಸ ನಿರ್ಮಿಹಿಸುತ್ತಿದ್ದರು.

ಆಘ್ಘಾನಿಸ್ತಾನದ ಹಿರಿಯ ಅಧಿಕಾರಿಗಳೊಂದಿಗೆ ನಿಂರಂತರ ಸಂಪರ್ಕದಲ್ಲಿದ್ದೇವೆ. ಕೋಲ್ಕತಾದಲ್ಲಿರುವ ಡಿಸೋಜಾ ಅವರ ಕುಟುಂಬಕ್ಕೆ ವಿಷಯ ತಿಳಿಸಲಾಗಿದೆ. ಮಹಿಳೆಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲು ಎಲ್ಲಾ ವಿಧದ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Judith was abducted by unknown gunmen at Kabul. The abduction took place near the Qala-e-Fatullah area which has witnessed abductions in the past as well.The Indian embassy in Kabul is also in touch with the local officials and also family members of Judith.
Please Wait while comments are loading...