ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಮುಖ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16 : ಅಮೆರಿಕಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಳೆದ 8 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದೇ ಮೊದಲ ಬಾರಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ಅಮೆರಿಕದ ರಾಷ್ಟ್ರೀಯ ಪ್ರವಾಸ ಮತ್ತು ವಾಣಿಜ್ಯ ಕಚೇರಿ (ಎನ್‌ಟಿಟಿಓ) ವರದಿ ಈ ಕುರಿತು ಅಂಕಿ-ಅಂಶಗಳನ್ನು ನೀಡಿದೆ. ಅಮೆರಿಕಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಶೇ 5ರಷ್ಟು ಇಳಿಮುಖವಾಗಿದೆ ಎನ್ನುತ್ತದೆ ಅಂಕಿ-ಅಂಶ.

ಮಧುಚಂದ್ರಕ್ಕೆ ಭಾರತಕ್ಕೆ ಬಂದು, ರೈಲು ಬುಕ್ ಮಾಡಿ ಸುದ್ದಿಯಾದ ದಂಪತಿಮಧುಚಂದ್ರಕ್ಕೆ ಭಾರತಕ್ಕೆ ಬಂದು, ರೈಲು ಬುಕ್ ಮಾಡಿ ಸುದ್ದಿಯಾದ ದಂಪತಿ

2016ರಲ್ಲಿ 11.72 ರಷ್ಟು ಪ್ರವಾಸಿಗರು, 2017ರಲ್ಲಿ 11.14 ರಷ್ಟು ಭಾರತೀಯರು ಅಮೆರಿಕಕ್ಕೆ ಪ್ರವಾಸಕ್ಕಾಗಿ ಭೇಟಿ ನೀಡಿದ್ದರು. 2009ರಲ್ಲಿ 5.5 ಲಕ್ಷ ಜನರು ಭೇಟಿ ಕೊಟ್ಟಿದ್ದರು. 2008ಕ್ಕೆ ಹೋಲಿಕೆ ಮಾಡಿದರೆ ಇದು ಶೇ 8ರಷ್ಟು ಕಡಿಮೆಯಾಗಿತ್ತು.

ಭಾರತ, ಚೀನಾದಂಥ ದೇಶಗಳಿಗೆ ಅಮೆರಿಕ ಸಹಾಯಧನ ನೀಡಲ್ಲ: ಟ್ರಂಪ್ಭಾರತ, ಚೀನಾದಂಥ ದೇಶಗಳಿಗೆ ಅಮೆರಿಕ ಸಹಾಯಧನ ನೀಡಲ್ಲ: ಟ್ರಂಪ್

 Indian travellers to the America down by 5 percent

ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ ಕೇವಲ ತಾತ್ಕಾಲಿಕ. 2018 ರಿಂದ 2022ರ ತನಕ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಎನ್‌ಟಿಟಿಓ ನಿರೀಕ್ಷಿಸಿದೆ. ಟ್ರಾವೆಲ್ ಏಜೆಂಟ್‌ಗಳು ಅಮೆರಿಕಕ್ಕೆ ಭೇಟಿ ನೀಡುವವರ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗುತ್ತಲೇ ಇದೆ ಎಂದು ಹೇಳಿದ್ದಾರೆ.

ರುಪಾಯಿ ದುರ್ಬಲ ಆಗುತ್ತಿದ್ದಂತೆ ವಿದೇಶಿ ಹಣದ ಹರಿವು ಹೆಚ್ಚಾಗಿದೆ ಏಕೆ?ರುಪಾಯಿ ದುರ್ಬಲ ಆಗುತ್ತಿದ್ದಂತೆ ವಿದೇಶಿ ಹಣದ ಹರಿವು ಹೆಚ್ಚಾಗಿದೆ ಏಕೆ?

ಅಮೆರಿಕಕ್ಕೆ ಭೇಟಿ ನೀಡುವ ಪ್ರವಾಸಿಗರ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ 2013ರಲ್ಲಿ ಶೇ 8.6, 2014ರಲ್ಲಿ ಶೇ 9.6, 2015ರಲ್ಲಿ 11.3 ರಷ್ಟು ಏರಿಕೆಯಾಗಿತ್ತು. ಆದರೆ, 2017ರಲ್ಲಿ ಮಾತ್ರ ಶೇ 5ರಷ್ಟು ಇಳಿಕೆಯಾಗಿದೆ.

English summary
According to National Travel and Tourism Office's (NTTO) the number of Indian travellers to the America down by 5 percent. NTTO said that it's first decline compare to last 8 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X