ಕಾಂಗೋ: ಉಗ್ರರ ಹಿಡಿತದಲ್ಲಿದ್ದ 22 ಮಕ್ಕಳನ್ನು ರಕ್ಷಿಸಿದ ಭಾರತೀಯ ಸೇನೆ
Recommended Video

Indian soldiers rescue 22 kids in congo | Oneindia Kannada
ನವದೆಹಲಿ, ಸೆಪ್ಟೆಂಬರ್ 26: ವಿಶ್ವ ಸಂಸ್ಥೆ ವತಿಯಿಂದ ಕಾಂಗೋ ಗಣರಾಜ್ಯದಲ್ಲಿ ಶಾಂತಿ ಪಾಲನೆಗಾಗಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ತುಕಡಿಯು ಅಲ್ಲಿ ಉಗ್ರರ ಗುಂಪಿನಲ್ಲಿ ಸೇರಿಕೊಂಡಿದ್ದ 22 ಮಕ್ಕಳನ್ನು ಕಾಪಾಡಿದೆ.
ಆಂತರಿಕ ಗಲಭೆ ಪೀಡಿತ ಪ್ರದೇಶವಾದ ನ್ಯಾಬಿವೊಂಡೋ ಪ್ರಾಂತ್ಯದಲ್ಲಿ 16 ಗಂಡು ಮಕ್ಕಳು ಹಾಗೂ 8 ಹೆಣ್ಣು ಮಕ್ಕಳು ಈ ಪ್ರಾಂತ್ಯದಲ್ಲಿ ನೆಲೆಯೂರಿರುವ ಬಂಡುಕೋರರಿಂದ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದರು.

ಇದನ್ನು ಕಾರ್ಯಾಚರಣೆ ವೇಳೆ ಗಮನಿಸಿದ ಭಾರತೀಯ ಸೇನಾ ಯೋಧರು, ಆ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದ ಅಲ್ಲಿಂದ ಮಕ್ಕಳನ್ನು ಪಾರು ಮಾಡಿ ತಂದಿದ್ದಾರೆಂದು ವಿಶ್ವ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿಯಾಗಿದೆ.
ಇದೇ ವೇಳೆ, ಭಾರತದ ಮತ್ತೊಂದು ತುಕಡಿಯು ಬಂಡುಕೋರರು ಹಿಡಿತಕ್ಕೆ ಪಡೆಯಲು ಯತ್ನಿಸುತ್ತಿದ್ದ ಮಿರ್ಕಿ ಎಂಬ ಹಳ್ಳಿಯಲ್ಲಿದ್ದ ಸುಮಾರು 200 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications