ಅಮೆರಿಕದಲ್ಲಿ ಪತ್ನಿ ಮೇಲೆ ಹಲ್ಲೆ, ಭಾರತೀಯ ಸಿಇಒಗೆ 1 ತಿಂಗಳು ಜೈಲು
ನ್ಯೂಯಾರ್ಕ್, ಏಪ್ರಿಲ್ 20 : ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಸಿಲಿಕಾನ್ ವ್ಯಾಲಿಯ ಸಿಇಒಗೆ ಅಮೆರಿಕ ಕೋರ್ಟ್ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಅಭಿಷೇಕ್ ಗಟ್ಟಾನಿ ಅವರಿಗೆ ಕ್ಯಾಲಿಪೋರ್ನಿಯಾದ ಸಂತಾ ಕ್ಲೇರಾ ಸೂಪಿರಿಯರ್ ಕೋರ್ಟ್ ಒಂದು ತಿಂಗಳು ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಅಭಿಷೇಕ್ ಜೊತೆ ಮದುವೆಯಾಗಿ 10 ವರ್ಷ ಕಳೆದಿದೆ. ತಮ್ಮ ಎರಡು ವರ್ಷದ ಮಗಳ ಮುಂದೆಯೇ ತನ್ನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ನೇಹಾ ರಸ್ತೋಗಿ ಆರೋಪಿಸಿದ್ದರು.

ಇನ್ನು ಪತ್ನಿಗೆ ಯಾವುದೇ ಕಿರುಕುಳ ನೀಡಿಲ್ಲ. ತಮಗೆ ಜಾಮೀನು ನೀಡಬೇಕೆಂದು ಗುಟ್ಟಾನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು.
ಪತ್ನಿಗೆ ಕಿರುಕುಳ ನೀಡಿದ ಆರೋಪಕ್ಕೆ 6 ತಿಂಗಳ ಜೈಲು ಶಿಕ್ಷೆಯಾಗಬೇಕಿತ್ತು. ಕೊರ್ಟ್ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಒಂದು ತಿಂಗಳು ಮಾತ್ರ ಜೈಲು ಶಿಕ್ಷೆ ವಿಧಿಸಿದೆ.












Click it and Unblock the Notifications