ಬುದ್ಧಿಮತ್ತೆಯಲ್ಲಿ ಐನ್ ಸ್ಟೀನ್ ಮೀರಿಸಿದ ಬಾಲಕ ರಾಹುಲ್
ಲಂಡನ್, ಆಗಸ್ಟ್ 21: ಆಲ್ಬರ್ಟ್ ಐನ್ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ ರಂಥ ವಿಜ್ಞಾನಿಗಳ ಬುದ್ಧಿಮತ್ತೆಯನ್ನು ಮೀರಿದ ಸಾಧನೆಯನ್ನು ಭಾರತೀಯ ಮೂಲದ ಬಾಲಕನೊಬ್ಬ ಲಂಡನ್ನಲ್ಲಿ ತೋರಿದ್ದಾನೆ.
12 ವರ್ಷದ ಬಾಲಕನ ಬುದ್ಧಿಮತ್ತೆ ಕಂಡು ಎಲ್ಲರೂ ಬೆರಗಾಗಿದ್ದಾರೆ. 'ಚೈಲ್ಡ್ ಜೀನಿಯಸ್' ಟಿವಿ ಶೋನ ಮೊದಲು ಸುತ್ತಿನಲ್ಲಿ ಜಯಗಳಿಸಿರುವ ಬಾಲಕನ ಹೆಸರು ರಾಹುಲ್.

ರಾಹುಲ್ 162 ಐಕ್ಯೂ ಸಾಮರ್ಥ್ಯವನ್ನು ಹೊಂದಿದ್ದು, ಆಲ್ಬರ್ಟ್ ಐನ್ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ಗಿಂತಲೂ ಅಧಿಕ ಐಕ್ಯೂ ಹೊಂದಿದ್ದಾನೆ. ಈ ಮೂಲಕ ರಾಹುಲ್ ಮೆನ್ಸಾ ಕ್ಲಬ್ನ ಸದಸ್ಯತ್ವಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಲಂಡನ್ ನಲ್ಲಿ ಟಿವಿ 4 ಎಂಬ ಚಾನಲ್ನಲ್ಲಿ ಚೈಲ್ಡ್ ಜೀನಿಯಸ್ ಎಂಬ ಶೋ ನಡೆಯುತ್ತಿದೆ. 8 ರಿಂದ 12 ವರ್ಷದ 20 ಬಾಲಕರು ಈ ಶೋ ಅಲ್ಲಿ ಭಾಗವಹಿಸಿದ್ದಾರೆ. ಸ್ಪೆಲ್ಲಿಂಗ್ ಟೆಸ್ಟ್, ಕಂಠಪಾಠ ಹಾಗೂ ಮುಂತಾದ ಹಲವು ಸ್ಪರ್ಧೆಗಳನ್ನು ನೀಡಲಾಗಿರುತ್ತದೆ. ರಾಹುಲ್ ತನಗೆ ಎದುರಾದ 15 ಪ್ರಶ್ನೆಗಳಲ್ಲಿ 14 ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಮೊದಲ ಸುತ್ತಿನಲ್ಲಿ ಜಯಗಳಿಸಿದ್ದಾನೆ.
'ನಾನು ಯಾವಗಲೂ ಉತ್ತಮವಾಗಿರುವುದನ್ನೆ ಮಾಡಲು ಬಯಸುತ್ತೇನೆ. ಒಳ್ಳೆಯದನ್ನು ಮಾಡುವಾಗ ಹಣದ ಬಗ್ಗೆ ಯೋಚನೆ ಮಾಡಲ್ಲ. ನನಗನಿಸುತ್ತದೆ ನಾನು ಜೀನಿಯಸ್, ಸಾಮಾನ್ಯ ಜ್ಞಾನ, ಗಣಿತ ಎರಡರಲ್ಲೂ ನಾನು ಹಿಡಿತ ಸಾಧಿಸಿದ್ದೇನೆ' ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾನೆ.(ಐಎಎನ್ಎಸ್)












Click it and Unblock the Notifications