ಭೂಕಂಪ ಪೀಡಿತ ಟರ್ಕಿಯಲ್ಲಿ ಓರ್ವ ಭಾರತೀಯ ಕಾಣೆ- ಪತ್ತೆ ಕಾರ್ಯ
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಓರ್ವ ಭಾರತೀಯ ಕಾಣೆಯಾಗಿರುವುದು ತಿಳಿದುಬಂದಿದೆ.
8,500 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಓರ್ವ ಭಾರತೀಯ ಕಾಣೆಯಾಗಿರುವುದು ತಿಳಿದುಬಂದಿದೆ. ಟರ್ಕಿಗೆ ಕೆಲಸದ ಕಾರಣ ಭೇಟಿ ನೀಡಿದ ಭಾರತೀಯರೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಇಂದು ತಿಳಿಸಿದೆ.
ಟರ್ಕಿಯಲ್ಲಿ 3,000 ಭಾರತೀಯರಿದ್ದಾರೆ. ಆದರೆ ಭೂಕಂಪನದಿಂದಾಗಿ ಹತ್ತು ಭಾರತೀಯರು ಟರ್ಕಿಯ ಹಲವು ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
"ನಾವು ಟರ್ಕಿಯ ಅದಾನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದೇವೆ. 10 ಭಾರತೀಯರು ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಅವರು ಸುರಕ್ಷಿತವಾಗಿದ್ದಾರೆ. ಆದರೆ ಕೆಲಸದ ಕಾರಣ ಟರ್ಕಿಯ ಪೀಡಿತ ಪ್ರದೇಶಕ್ಕೆ ಭೇಟಿಯಲ್ಲಿದ್ದ ಒಬ್ಬ ಭಾರತೀಯ ಪ್ರಜೆ ಕಾಣೆಯಾಗಿದ್ದಾರೆ. ನಾವು ಅವರ ಕುಟುಂಬ ಮತ್ತು ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ'' ಎಂದು ಪಶ್ಚಿಮ ಕಾರ್ಯದರ್ಶಿ ಸಂಜಯ್ ವರ್ಮಾ ಹೇಳಿದ್ದಾರೆ.
Under #OperationDost, India is sending search and rescue teams, a field hospital, materials, medicines and equipment to Türkiye and Syria.
— Dr. S. Jaishankar (@DrSJaishankar) February 8, 2023
This is an ongoing operation and we would be posting updates. pic.twitter.com/7YnF0XXzMx
ಟರ್ಕಿಯಲ್ಲಿ ಪ್ರಬಲ ಭೂಕಂಪದ ಬಳಿಕ ಭಾರತ ಸಹಾಯ ಹಸ್ತವನ್ನು ಚಾಚಿದೆ. ಭಾರತ 'ಆಪರೇಷನ್ ದೋಸ್ತ್' ಅಡಿಯಲ್ಲಿ ಸಿರಿಯಾಕ್ಕೆ ವಸ್ತು, ವೈದ್ಯಕೀಯ ಸರಬರಾಜು ಮತ್ತು ಉಪಕರಣಗಳನ್ನು ಒದಗಿಸುತ್ತಿದೆ. ಟರ್ಕಿಗೆ ಹುಡುಕಾಟ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇಂದು ತಿಳಿಸಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಬದುಕುಳಿದವರ ಹುಡುಕಾಟ ಮುಂದುವರೆದಿದೆ. ಇದು ಒಟ್ಟಾಗಿ 11,000 ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆಂದು ಅಂದಾಜಿಸಲಾಗಿದೆ. ಇಂತಹ ಕಠಿಣ ಪರಿಸ್ಥಿತಿಯಿಂದಾಗಿ ಟರ್ಕಿಗೆ ಅನೇಕ ದೇಶಗಳಿಂದ ವಿದೇಶಿ ನೆರವು ಬರಲಾರಂಭಿಸಿದೆ.

"ಆಪರೇಷನ್ ದೋಸ್ತ್ ಅಡಿಯಲ್ಲಿ, ಭಾರತವು ಟರ್ಕಿ ಮತ್ತು ಸಿರಿಯಾಕ್ಕೆ ಹುಡುಕಾಟ ಮತ್ತು ರಕ್ಷಣಾ ತಂಡಗಳು, ಆಸ್ಪತ್ರೆ ಸಾಮಗ್ರಿಗಳು, ಔಷಧಿಗಳು ಮತ್ತು ಉಪಕರಣಗಳನ್ನು ಕಳುಹಿಸುತ್ತಿದೆ. ನಾವು ನವೀಕರಣಗಳನ್ನು ಪೋಸ್ಟ್ ಮಾಡುತ್ತೇವೆ" ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಕಟ್ಟಡಗಳ ಅಡಿಯಲ್ಲಿ ಇನ್ನೂ ಜೀವಂತವಾಗಿರುವವರನ್ನು ಹುಡುಕಲು ಸಾವಿರಾರು ಶೋಧಕರು ಚಳಿಯಲ್ಲೂ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications