ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನ್ ನಲ್ಲಿ ದೊಡ್ಡ ಧ್ವನಿಯಲ್ಲಿ ಮಾತಾಡಿದ್ದಕ್ಕೆ ಚಾಕುವಿನಿಂದ ಇರಿದು ಕೊಂದ

|
Google Oneindia Kannada News

ಅಬುಧಾಬಿ, ಸೆಪ್ಟೆಂಬರ್ 11: ಫೋನ್ ನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದ ಎಂಬ ಸಿಟ್ಟಿನಲ್ಲಿ ಭಾರತೀಯನೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣ ದಾಖಲಾಗಿದೆ. ಈ ಘಟನೆ ಯುಎಇಯಲ್ಲಿ ನಡೆದಿದೆ. ಇಬ್ಬರೂ ಜತೆಯಲ್ಲಿಯೇ ವಾಸಗಿದ್ದರು. ಜತೆಗಾರ ಫೋನ್ ನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪ ಪಟ್ಟಿ ದಾಖಲಿಸಲಾಗಿದೆ.

37 ವರ್ಷದ ಕಟ್ಟಡ ನಿರ್ಮಾಣದ ಕಾರ್ಮಿಕ ಮದ್ಯಪಾನ ಮಾಡಿದ್ದ. ಕಳೆದ ಮಾರ್ಚ್ ನಲ್ಲಿ ತೀವ್ರವಾಗಿ ಇರಿದು ಕೊಲೆ ಮಾಡಿದ್ದ. ಈತನ ವಿರುದ್ಧ ಮೊದಲ ಪ್ರಕರಣ ಇದಾಗಿದೆ ಎಂದು ಮಂಗಳವಾರ ಖಲೀಜ್ ಟೈಮ್ಸ್ ವರದಿ ಮಾಡಿದೆ. ಈತನಿಗೆ ಕಠಿಣವಾದ ದಂಡ ವಿಧಿಸಬೇಕು ಎಂದು ಸರಕಾರಿ ಪರ ವಕೀಲರು ಮನವಿ ಮಾಡಿದ್ದಾರೆ.

'ಕುರುಡು' ತ್ರಿಕೋನ ಪ್ರೇಮ ಅಂತ್ಯವಾಗಿದ್ದು ಹತ್ಯೆಯಿಂದ 'ಕುರುಡು' ತ್ರಿಕೋನ ಪ್ರೇಮ ಅಂತ್ಯವಾಗಿದ್ದು ಹತ್ಯೆಯಿಂದ

ನನಗೆ ಚಾಲಕರೊಬ್ಬರು ತಿಳಿಸಿದರು. ರೂಮಿನ ಬಳಿ ಹೋಗುವಷ್ಟರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಸೇರಿದ್ದರು. ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಯಾವುದೇ ಚಲನೆ ಇರಲಿಲ್ಲ. ಆತನ ಹೊಟ್ಟೆ ಭಾಗದಲ್ಲಿ ಇರಿದ ಗಾಯವಾಗಿತ್ತು ಎಂದು ಮತ್ತೊಬ್ಬ ಭಾರತೀಯ ಕಾರ್ಮಿಕ ಕೋರ್ಟ್ ನಲ್ಲಿ ಹೇಳಿದ್ದಾರೆ.

Indian man allegedly stabs roommate for talking loudly on phone

ಆರೋಪಿ ಹಾಗೂ ಸಂತ್ರಸ್ತನ ಮಧ್ಯೆ ಫೋನ್ ನಲ್ಲಿ ಜೋರಾಗಿ ಮಾತನಾಡುವ ವಿಚಾರವಾಗಿ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆಯಿತು ಎಂದು ಇತರ ಕಾರ್ಮಿಕರು ತಿಳಿಸಿದ್ದಾಗಿ ಸೂಪರ್ ವೈಸರ್ ಹೇಳಿದ್ದಾರೆ. ಸಿಟ್ಟಿನ ಭರದಲ್ಲಿ ಎದುರಿಗಿದ್ದ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ, ಅಲ್ಲಿಂದ ಹೊರಟು ಹೋದ ಎಂದು ಕೂಡ ತಿಳಿಸಿದ್ದಾರೆ.

ಇನ್ನು ಆ ಕಟ್ಟಡದ ಹೊರಭಾಗದಲ್ಲಿ ಆರೋಪಿಯನ್ನು ಕಂಡ ಪ್ರತ್ಯಕ್ಷದರ್ಶಿಗಳು, ಆತ ಮದ್ಯಪಾನ ಮಾಡಿದ್ದ. ಕೈ ಬೆರಳುಗಳ ಮಧ್ಯೆ ರಕ್ತ ಮೆತ್ತಿತ್ತು. ಏನಾಯಿತು ಎಂದು ಕೇಳಿದ್ದಕ್ಕೆ ಉತ್ತರ ಹೇಳಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಚಾಕುವನ್ನು ತನ್ನ ಬಟ್ಟೆಯೊಳಗೆ ಅವಿತಿಟ್ಟು ಕೊಳ್ಳುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡಲಾಗಿದೆ.

English summary
An Indian man in UAE has been charged with stabbing his roommate to death for talking loudly on the phone. Public prosecution records showed that the 37-year-old construction worker, who was drunk, fatally stabbed the victim in his room in the March. The man was charged at the Court of First Instance, the Khaleej Times reported on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X