ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಗೆ ಮೈಕೊರೆಯುವ ಚಳಿಯಲ್ಲಿ ಸಿಯಾಚಿನ್ ಸವಾಲು!

|
Google Oneindia Kannada News

ನವದೆಹಲಿ, ಸಪ್ಟೆಂಬರ್.09: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಉದ್ವಿಗ್ನಗೊಳುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡದಂತೆ ಆಗಿದ್ದು, ಇದರ ನಡುವೆ ಮುಂಬರುವ ಚಳಿಗಾಲವನ್ನು ಎದುರಿಸಲು ಭಾರತೀಯ ಸೇನೆ ಅಣಿಯಾಗುತ್ತಿದೆ.

ಎತ್ತರದ ಪ್ರದೇಶಗಳಲ್ಲಿ ಬೀಸುವ ಚಳಿಗಾಳಿಯಲ್ಲೂ ವಿರೋಧಿ ಸೇನೆಯ ಎದುರು ಎದೆ ಉಬ್ಬಿಸಿ ನಿಲ್ಲುವುದಕ್ಕೆ ಭಾರತೀಯ ಸೇನಾ ಯೋಧರು ಸನ್ನದ್ಧರಾಗುತ್ತಿದ್ದಾರೆ. ಚಳಿಗಾಲದಲ್ಲೇ ಲಡಾಖ್ ಎತ್ತರದ ಪ್ರದೇಶದಲ್ಲಿ ನಿಯೋಜನೆಗೊಳ್ಳುವ ಯೋಧರಿಗೆ ಅಗತ್ಯವಿರುವ ಉಡುಪುಗಳನ್ನು ಸರಬರಾಜು ಮಾಡಲಾಗುತ್ತಿದೆ.

Fact Check: ಚೀನಾ ಯೋಧರ ಸಮಾಧಿ ಹಿಂದಿನ ಸತ್ಯವೇನು? Fact Check: ಚೀನಾ ಯೋಧರ ಸಮಾಧಿ ಹಿಂದಿನ ಸತ್ಯವೇನು?

ದೇಶದ ಮುಕುಟ ಪ್ರದೇಶದಲ್ಲಿರುವ ಪರ್ವತ ಶ್ರೇಣಿಯ ತುತ್ತತುದಿಯಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಪ್ರತಿಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ದೇಶವನ್ನು ಕಾಯಲು ನಿಂತ ಯೋಧರಿಗಾಗಿ ಹೊಸ ಶೈಲಿಯ ಉಡುಪುಗಳನ್ನು ಸಜ್ಜುಗೊಳಿಸಲಾಗಿದೆ.

ವಿಪರೀತ ಚಳಿಯ ನಡುವೆ ಭಾರತೀಯ ಸೇನೆ ಶಿಬಿರ

ವಿಪರೀತ ಚಳಿಯ ನಡುವೆ ಭಾರತೀಯ ಸೇನೆ ಶಿಬಿರ

ಚಳಿಗಾಲಕ್ಕೆ ಹೊಂದಿಕೊಳ್ಳುವಂತಾ ಪ್ಲಾಸ್ಟಿಕ್, ಫೈಬರ್ ಮತ್ತು ನಾರಿನ ವಸ್ತುಗಳಿಂದ ಶಿಬಿರಗಳನ್ನು ನಿರ್ಮಿಸಲಾಗುತ್ತಿದೆ. ಲಡಾಖ್ ಗಡಿರೇಖೆಯಲ್ಲಿ ಹಿಮದ ನಡುವೆ ಯೋಧರು ಸುರಕ್ಷಿತವಾಗಿರಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ದಪ್ಪನೆಯ ವಸ್ತ್ರಗಳ ಜೊತೆಗೆ ಹಿಮದ ಹಿಮದಿಂದ ರಕ್ಷಿಸಿಕೊಳ್ಳುವಂತಾ ಹಿಮದ ಬೂಟ್ ಗಳನ್ನು ನೀಡಲಾಗಿದೆ. ಏಕೆಂದರೆ ಅಂತಾರಾಷ್ಟ್ರೀಯ ನಿಗದಿತ ಗಡಿ ರೇಖೆಯಲ್ಲಿ ಭಾರತ-ಚೀನಾ ಬಿಕ್ಕಟ್ಟಿನಿಂದ ಎತ್ತರ ಪ್ರದೇಶವಾಗಿರುವ ಸಿಯಾಚಿನ್ ನಲ್ಲಿ ಯೋಧರನ್ನು ನಿಯೋಜನೆ ಮಾಡುವ ಅಪಾಯವೂ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಚೀನಾ-ಭಾರತ ಗಡಿರೇಖೆ ಬೂದಿ ಮುಚ್ಚಿದ ಕೆಂಡ

ಚೀನಾ-ಭಾರತ ಗಡಿರೇಖೆ ಬೂದಿ ಮುಚ್ಚಿದ ಕೆಂಡ

"ಭಾರತ ಮತ್ತು ಚೀನಾದ ಗಡಿರೇಖೆಯು ಬೂದಿ ಮುಚ್ಚಿದ ಕೆಂಡವಾಗಿ ಮಾರ್ಪಟ್ಟಿದೆ. ಭಾರತೀಯ ಸೇನೆ ಮತ್ತು ಪೀಪಲ್ಸ್ ಲಿಬರೇಷನ್ ಆರ್ಮಿ ಸೇನೆಗಳು ಎರಡೂ ಕಡೆಗಳಿಂದ ಅತಿಕ್ರಮಣದ ಪ್ರಯತ್ನಗಳು ನಡೆಯುವ ಸಾಧ್ಯತೆಯಿದೆ. ಗಡಿರೇಖೆಯ ಕೆಲವು ಪ್ರದೇಶಗಳಲ್ಲಿ ಹಗ್ಗ ಮತ್ತು ಬಟ್ಟೆಗಳನ್ನು ಬಳಸಿಕೊಂಡು ಸೇನಾ ಯೋಧರು ಬೆಟ್ಟ ಮತ್ತು ಎತ್ತರದ ಪ್ರದೇಶವನ್ನು ಹತ್ತುವುದಕ್ಕೆ ಪ್ರಯತ್ನಿಸುವ ಕೆಲಸವೂ ನಡೆಯಬಹುದು" ಎಂದು ಭದ್ರತೆ ಮತ್ತು ಯುದ್ಧತಂತ್ರ ವಿಶ್ಲೇಷಣಾ ಸಂಸ್ಥೆಯ ಸಂಶೋಧಕರಾಗಿರುವ ಕರ್ನಲ್ ವಿವೇಕ್ ಚಧಾ ತಿಳಿಸಿದ್ದಾರೆ.

Fact Check: ಲಡಾಖ್ ಸಂಘರ್ಷದ ವಿಷ್ಯ; ಏನು ಫೋಟೋಗಳ ಹಿಂದಿನ ಸತ್ಯ?Fact Check: ಲಡಾಖ್ ಸಂಘರ್ಷದ ವಿಷ್ಯ; ಏನು ಫೋಟೋಗಳ ಹಿಂದಿನ ಸತ್ಯ?

ಪ್ಯಾಂಗಾಂಗ್ ಬಳಿ ಚೀನಾ ಪ್ರಚೋದನಕಾರಿ ಚಟುವಟಿಕೆ

ಪ್ಯಾಂಗಾಂಗ್ ಬಳಿ ಚೀನಾ ಪ್ರಚೋದನಕಾರಿ ಚಟುವಟಿಕೆ

ಕಳೆದ ತಿಂಗಳು ಭಾರತೀಯ ಸೇನೆಯು ಸಾಂಪ್ರದಾಯಿಕ ಗಡಿರೇಖೆಯಲ್ಲಿ ಆತಿಕ್ರಮಿಸಿದ ಬ್ಲ್ಯಾಕ್ ಟಾಪ್ ಪರ್ವತ ಪ್ರದೇಶಕ್ಕೆ ಸ್ಪೆಷಲ್ ಫ್ರೆಂಟೀಯರ್ ಫೋರ್ಸ್ ಲಗ್ಗೆಯಿಟ್ಟಿತ್ತು. ಈ ಪ್ರದೇಶವು ಸಮುದ್ರ ಮಟ್ಟಕ್ಕಿಂತ 4000 ಅಡಿ ಎತ್ತರದಲ್ಲಿದ್ದು, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಅನುಕೂಲವಾಗಿತ್ತು. ಏಕೆಂದರೆ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಪೀಪಲ್ಸ್ ಲಿಬರೇಷನ್ ಆರ್ಮಿಯು ಪ್ರಚೋದನಕಾರಿ ಸೇನಾ ಚಟುವಟಿಕೆಗಳನ್ನು ಆರಂಭಿಸುವ ಬಗ್ಗೆ ಮೊದಲೇ ಭಾರತೀಯ ಸೇನೆಗೆ ಎಚ್ಚರಿಕೆ ಸಂದೇಶ ರವಾನೆಯಾಗಿತ್ತು.

ಬ್ಲ್ಯಾಕ್ ಟಾಪ್ ಅತಿಕ್ರಮಣದ ಹಿಂದೆ ಭಾರತದ ಪ್ರತೀಕಾರ

ಬ್ಲ್ಯಾಕ್ ಟಾಪ್ ಅತಿಕ್ರಮಣದ ಹಿಂದೆ ಭಾರತದ ಪ್ರತೀಕಾರ

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು ಗ್ರೀನ್ ಟಾಪ್ ನ್ನು ಅತಿಕ್ರಮಿಸಿದ ಹಿನ್ನೆಲೆ ಭಾರತೀಯ ಸೇನೆಯು ಪ್ರತೀಕಾರಕ್ಕಾಗಿ ಬ್ಲ್ಯಾಕ್ ಟಾಪ್ ಪ್ರದೇಶವನ್ನು ಅತಿಕ್ರಮಿಸಿಕೊಂಡಿತು. ಚೀನಾ ಸೇನೆಯು ಅತಿಕ್ರಮಿಸಿಕೊಂಡ ಗ್ರೀನ್ ಟಾಪ್ ನಲ್ಲಿ ನಿಂತು ಗಮನಿಸಿದರೆ ಫಿಂಗರ್ 3 ಪ್ರದೇಶದಲ್ಲಿರುವ 'ಧನ್ ಸಿಂಗ್ ಪೋಸ್ಟ್' ಕಾಣಿಸುತ್ತದೆ. ಭಾರತೀಯ ಸೇನೆಯ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಲು ಚೀನಾ ಸೇನೆಯು ಈ ಗ್ರೀನ್ ಟಾಪ್ ನಲ್ಲಿ ಬಳಸಿಕೊಳ್ಳುತ್ತಿದೆ.

ಭಾರತ ಮತ್ತು ಚೀನಾ ನಡುವೆ ಶಾಂತಿ ಮಾತುಕತೆ

ಭಾರತ ಮತ್ತು ಚೀನಾ ನಡುವೆ ಶಾಂತಿ ಮಾತುಕತೆ

ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತ ಮತ್ತು ಚೀನಾ ಕಮಾಂಡರ್ ಹಂತದ ಶಾಂತಿ ಮಾತುಕತೆ ನಡೆಸಲಾಯಿತು. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿರುವ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತೀಯ ಸೇನಾಧಿಕಾರಿಗಳು ಚೀನಾಗೆ ಆಗ್ರಹಿಸಿದರು. ಫಿಂಗರ್ 8 ನಿಂದ ಸೇನೆ ಹಿಂದೆತೆಗದುಕೊಂಡು ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕೆ ಚೀನಾ ಮೊದಲ ಹಂತದಲ್ಲಿ ಒಪ್ಪಿಗೆ ಸೂಚಿಸಿತು. ತದನಂತರದಲ್ಲಿ ಗ್ರೀನ್ ಟಾಪ್ ಮತ್ತು ಫಿಂಗರ್ 5 ಗಡಿರೇಖೆಯಲ್ಲಿ ನಿಯೋಜಿಸಿದ್ದ ಸೇನೆಯನ್ನು ಚೀನಾ ವಾಪಸ್ ತೆಗೆದುಕೊಳ್ಳುವುದಕ್ಕೆ ಒಪ್ಪಲಿಲ್ಲ. ಇದರಿಂದ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ನಡೆದ 18 ಸುತ್ತಿನ ಮಾತುಕತೆಯು ವಿಫಲವಾಗಿತ್ತು.

ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕರು ಚೀನಾ ಗಡಿಯೊಳಗೆ ಪತ್ತೆನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕರು ಚೀನಾ ಗಡಿಯೊಳಗೆ ಪತ್ತೆ

ನಿಗದಿತ ಗಡಿರೇಖೆ ಬಳಿ ದೊಣ್ಣೆ ಹಿಡಿದು ನಿಂತ ಸೈನಿಕರು

ನಿಗದಿತ ಗಡಿರೇಖೆ ಬಳಿ ದೊಣ್ಣೆ ಹಿಡಿದು ನಿಂತ ಸೈನಿಕರು

ಲಡಾಖ್ ಪೂರ್ವ ಭಾಗದಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಭಾರತ ಕೂಡಾ ಸೇನೆಯ ಪ್ರಮಾಣವನ್ನು ಹೆಚ್ಚಿಸಿತು. ಆಗಸ್ಟ್.30 ಮತ್ತು 31ರಂದು ಗಡಿಯಲ್ಲಿ ಗುಂಡಿನ ಸದ್ದು ಮೊಳಗಿತು. ಅಂದಿನಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಇದರ ಬೆನ್ನಲ್ಲೇ ಸಪ್ಟೆಂಬರ್.07ರಂದು ರಾಚಿನ್ ಲಾ- ರೆಂಜಂಗ್ಲಾ-ಮುಖ್ಪರಿ ಮತ್ತು ಮಗರ್ ಪರ್ವತ ಶ್ರೇಣಿಯ ಬಳಿ ಚೀನಾ ಯೋಧರು ಮಧ್ಯಕಾಲೀನ ಶೈಲಿಯ ಯುದ್ಧ ಶಸ್ತ್ರಾಸ್ತ್ರ ಮತ್ತು ದೊಣ್ಣೆಗಳನ್ನು ಹಿಡಿದು ನಿಂತಿರುವ ಫೋಟೋ ಸಾಕ್ಷ್ಯ ಸಿಕ್ಕಿತು.

ಗಡಿ ವಿಚಾರದಲ್ಲಿ ಚೀನಾ ನಡೆ ಬಗ್ಗೆ ಭಾರತದ ಉಲ್ಲೇಖ

ಗಡಿ ವಿಚಾರದಲ್ಲಿ ಚೀನಾ ನಡೆ ಬಗ್ಗೆ ಭಾರತದ ಉಲ್ಲೇಖ

"ಭಾರತ-ಚೀನಾ ಗಡಿ ಪ್ರದೇಶದ ಪರ್ವತ ಶ್ರೇಣಿಗೆ ಸಂಬಂಧಿಸಿದಂತೆ ಎರಡು ಕಡೆಗಳಿಂದ ಆತಂಕ ಸೃಷ್ಟಿಸುವ ಕೆಲಸವಾಗುತ್ತಿದೆ. ಭಾರತವು ದಕ್ಷಿಣ ಪ್ಯಾಂಗಾಂಗ್ ಪ್ರದೇಶದಲ್ಲಿ ಇರುವದರಿಂದ ಪೀಪಲ್ಸ್ ಲಿಬರೇಷನ್ ಆರ್ಮಿಯು ಉತ್ತರ ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿರುವುದೇ ಸರಿಯಾದ ಕ್ರಮವಾಗಿದೆ. ಆದರೆ ಚೀನಾ ಸೇನೆಯು ಸರಳವಾಗಿರುವ ವಿಚಾರವನ್ನು ಮತ್ತಷ್ಟು ಸೂಕ್ಷ್ಮಗೊಳಿಸುತ್ತಿದೆ" ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಯಾಚಿನ್ ನಲ್ಲಿ 10 ವರ್ಷದಲ್ಲೇ 167 ಯೋಧರು ಹುತಾತ್ಮ

ಸಿಯಾಚಿನ್ ನಲ್ಲಿ 10 ವರ್ಷದಲ್ಲೇ 167 ಯೋಧರು ಹುತಾತ್ಮ

ಕಳೆದ 17 ವರ್ಷಗಳ ಹಿಂದೆ 2003ರಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿರೇಖೆಯುದ್ದಕ್ಕೂ ಗುಂಡಿನ ಚಕಮಕಿ ನಡೆಯಿತು. ಅಂದು ನಿಗದಿತ ಗಡಿರೇಖೆಯ ಹೊರತಾಗಿ ಎತ್ತರದ ಪ್ರದೇಶಗಳಲ್ಲಿ ಸೇನೆ ನಿಯೋಜಿಸುವ ಸಂದರ್ಭ ಎದುರಾಗಿತ್ತು. ಇನ್ನು, 1999ರ ಕಾರ್ಗಿಲ್ ಯುದ್ಧದ ಬಳಿಕ ಸಿಯಾಚಿನ್ ಪ್ರದೇಶದ ಸುತ್ತಮುತ್ತಲಿನಲ್ಲಿ ಹೋರಾಡಬೇಕಾದ ಸವಾಲು ಎದುರಾಗಿರಲಿಲ್ಲ. ಅದಾಗ್ಯೂ ದೇಶದ ಅತಿಎತ್ತರದ ಪ್ರದೇಶವಾಗಿರುವ ಸಿಯಾಚಿನ್ ನಲ್ಲಿ 2009 ರಿಂದ 2019ರ ನಡುವೆ 167 ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಚಳಿಗಾಲದ ಸಂದರ್ಭದಲ್ಲಿ ಭಾರತೀಯ ಸೇನೆಗೆ ಸವಾಲು

ಚಳಿಗಾಲದ ಸಂದರ್ಭದಲ್ಲಿ ಭಾರತೀಯ ಸೇನೆಗೆ ಸವಾಲು

ಭಾರತೀಯ ಸೇನಾ ಯೋಧರನ್ನು ಚಳಿಗಾಲದ ಸಂದರ್ಭದಲ್ಲಿ ಸಿಯಾಚಿನ್ ನಂತಾ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸುವುದಕ್ಕೂ ಮೊದಲು ಮಾಡಿಕೊಳ್ಳಬೇಕಾದ ವ್ಯವಸ್ಥೆಗಳು ದೊಡ್ಡ ಪ್ರಮಾಣದ ಸವಾಲಿನ ರೀತಿಯಲ್ಲಿ ಇರುತ್ತವೆ. ಕಳೆದ ವರ್ಷ ಸಂಸದರೊಬ್ಬರು ಈ ಬಗ್ಗೆ ಲೋಕಸಭೆಯ ರಕ್ಷಣಾ ಸ್ಥಾಯಿ ಸಮತಿ ಗಮನಕ್ಕೆ ತಂದಿದ್ದರು. ಹಿಮದಿಂದಲೇ ಕೂಡಿದ ಪ್ರದೇಶದಲ್ಲಿ ರಕ್ಷಣೆಗೆ ನಿಲ್ಲುವ ಯೋಧರಿಗೆ ನೀಡುವ ಉಡುಪುಗಳಲ್ಲಿ ಶೇ.80ರಷ್ಟನ್ನು ಅನ್ಯರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಅವು ಕಳಪೆ ಗುಣಮಟ್ಟವನ್ನು ಹೊಂದಿವೆ. ಈ ಹಿನ್ನೆಲೆ ನಮ್ಮ ಯೋಧರಿಗೆ ಸುರಕ್ಷಿತವಾದ ಉಡುಪುಗಳನ್ನು ಸ್ವದೇಶಿಯಾಗಿ ಸಿದ್ಧಪಡಿಸಿ ನೀಡಬೇಕು ಎಂದು ಒತ್ತಾಯಿಸಿದ್ದರು.

ಸಿಯಾಚಿನ್ ನಲ್ಲಿ ಯೋಧರ ಪ್ರಮಾಣ ತಗ್ಗಿಸಲು ಒತ್ತಾಯ

ಸಿಯಾಚಿನ್ ನಲ್ಲಿ ಯೋಧರ ಪ್ರಮಾಣ ತಗ್ಗಿಸಲು ಒತ್ತಾಯ

ಭಾರತೀಯ ಯೋಧರಿಗೆ ಅತ್ಯವಶ್ಯಕ ಎನಿಸಿರುವ ಸಾಧನಗಳನ್ನು ದೇಶೀಯವಾಗಿ ಉತ್ಪಾದಿಸುವ ಸಾಮರ್ಥ್ಯವೇ ತಗ್ಗಿದೆ. 2015-2016ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಇತ್ತೀಚೆಗೆ ವರದಿ ನೀಡಿತ್ತು. ಇದರಲ್ಲಿ ಸಿಯಾಚಿನ್ ‌ನಲ್ಲಿರುವ ಸೈನಿಕರಿಗೆ ಹಿಮದ ಬೂಟುಗಳನ್ನು ಕಡಿಮೆ ಮಾಡಿದ್ದಾರೆ. ಹಿಮ ಕನ್ನಡಕಗಳು, ಬೆಡ್ ಶೀಟ್, ಮಲಗುವ ಚೀಲ, ಶೀತ-ಹವಾಮಾನದಿಂದ ರಕ್ಷಿಸಿಕೊಳ್ಳುವ ಮುಖವಾಡ ಮತ್ತು ಸಾಕ್ಸ್ ಗಳ ಗುಣಮಟ್ಟದ ಬಗ್ಗೆ ವರದಿಯಲ್ಲಿ ಟೀಕಿಸಲಾಗಿತ್ತು.

ಗಡಿಯಲ್ಲಿ ಸೇನೆ ನಿಷ್ಕ್ರಿಯಗೊಳಿಸುವ ಬಗ್ಗೆ ಮಾತುಕತೆ

ಗಡಿಯಲ್ಲಿ ಸೇನೆ ನಿಷ್ಕ್ರಿಯಗೊಳಿಸುವ ಬಗ್ಗೆ ಮಾತುಕತೆ

ಗಡಿಯಲ್ಲಿ ಸೇನೆ ನಿಷ್ಕ್ರಿಯಗೊಳಿಸುವ ಬಗ್ಗೆ ಮಾತುಕತೆ
ಚಳಿಗಾಲದಲ್ಲಿ ಎತ್ತರದ ಪ್ರದೇಶಗಳಲ್ಲಿ ಸೇನೆ ನಿಯೋಜನೆಯು ಅಪಾಯಕಾರಿ ಎಂಬುದನ್ನು ಪೀಪಲ್ಸ್ ಲಿಬರೇಷನ್ ಆರ್ಮಿ ಕೂಡಾ ಅರಿತುಕೊಂಡಿದೆ. ಚಳಿಗಾಲದಲ್ಲಿ ಸೇನೆ ನಿಯೋಜನೆ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆ ನಡೆಸುವಂತೆ ಚೀನಾ ತುದಿಗಾಲ ಮೇಲೆ ನಿಂತಿದೆ. "ಚಳಿಗಾಲವು ಮನುಷ್ಯರಿಗೆ ಬದುಕುವುದಕ್ಕೆ ಸೂಕ್ತವಾದ ಸಮಯವೇ ಅಲ್ಲ. ಶಾಂತಿ ಮಾತುಕತೆಯ ಮೂಲಕ ಸಾಧ್ಯವಾದಷ್ಟು ಬೇಗ ಗಡಿಯಲ್ಲಿ ಸೇನೆಗಳನ್ನು ನಿಷ್ಕ್ರಿಯಗೊಳಿಸುವ ವಿಶ್ವಾಸವಿದೆ" ಎಂದು ಚೀನಾದ ವಿದೇಶಾಂಗ ವಕ್ತಾರ ಝಾವೋ ಲಿಜಿಯಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Indian Army Prepares For Cold, Long Haul In Ladakh After Faced With Prospect Of 'Siachenised' LAC. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X