ಅಮೆರಿಕ ಚುನಾವಣೆ: ಭಾರತೀಯರ ಬೆಂಬಲ ಕಳೆದುಕೊಂಡ ಕಮಲಾ
ವಾಷಿಂಗ್ಟನ್, ನವೆಂಬರ್ 07: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ, ಈ ಬಾರಿಯ ಅಧ್ಯಕೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾದ ಡೊನಾಲ್ಡ್ ಟ್ರಂಪ್, 2ನೇ ಅವಧಿಗೆ ಅಧ್ಯಕ್ಷರಾಗಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಟ್ರಂಪ್‌ಗೆ ಶುಭಾಶಯ ಸಲ್ಲಿಸಿದ್ದಾರೆ.
ಈ ಬಾರಿಯ ಅಮೆರಿಕ ಚುನಾವಣೆಯಲ್ಲಿ ಭಾರತೀಯ ಮೂಲದ 6 ಜನರು ಆಯ್ಕೆಯಾಗಿದ್ದಾರೆ. ಅಮೆರಿಕ ಹಾಲಿ ಉಪಾಧ್ಯಕ್ಷೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮೂಲ ಭಾರತೀಯರ ಬೆಂಬಲವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ನಡೆಸಿದ ಸಮೀಕ್ಷೆಯೊಂದು ಅಂಕಿ ಸಂಖ್ಯೆಗಳನ್ನು ಹೇಳಿದೆ.

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ ನ್ಯಾಷನಲ್ ಪೀಸ್ ಎಂಬ ಸಂಸ್ಥೆ ಅಮೆರಿಕ ಅಧ್ಯಕೀಯ ಚುನಾವಣೆಯಲ್ಲಿ ಭಾರತೀಯ ಮೂಲ ನಿವಾಸಿಗಳು ಹೇಗೆ ಮತದಾನ ಮಾಡಿದ್ದಾರೆ? ಎಂದು ವಿಶ್ಲೇಷಣೆಯನ್ನು ಮಾಡಿದೆ. ಈ ಬಾರಿ ರಿಪಬ್ಲಿಕನ್ ಪಕ್ಷಕ್ಕೆ ಹೆಚ್ಚು ಬೆಂಬಲವನ್ನು ನೀಡಿದ್ದಾರೆ ಎಂದು ಹೇಳಿದೆ.
ಕಮಲಾಗೆ ಬೆಂಬಲವಿಲ್ಲ: ಸಮೀಕ್ಷೆಯ ಮಾಹಿತಿ ಪ್ರಕಾರ 2024ರ ಚುನಾವಣೆಯಲ್ಲಿ ಮೂಲ ಭಾರತೀಯರು ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ನೀಡಿದ ಪ್ರಮಾಣ ಶೇ 57ಕ್ಕೆ ಕುಸಿದಿದೆ. 2020ರ ಚುನಾವಣೆಯಲ್ಲಿ ಶೇ 66ರಷ್ಟು ಜನರು ಪಕ್ಷವನ್ನು ಬೆಂಬಲಿಸಿದ್ದರು.
ಮೂಲ ಭಾರತೀಯರು ರಿಪಬ್ಲಿಕನ್ ಪಕ್ಷದ ಕಡೆಗೆ ವಾಲುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ 18ರಷ್ಟು ಜನರು ಪಕ್ಷಕ್ಕೆ ಬೆಂಬಲ ನೀಡಿದ್ದರು. ಅದು ಈ ಬಾರಿ ಶೇ 27ರಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆಯ ಅಂಕಿ ಸಂಖ್ಯೆಗಳು ಹೇಳಿವೆ.
2020ರ ಅಧ್ಯಕೀಯ ಚುನಾವಣೆಯಲ್ಲಿ ಶೇ 68ರಷ್ಟು ಮೂಲ ಭಾರತೀಯರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಬೆಂಬಲಿಸಿದ್ದರು. ಡೆಮಾಕ್ರಟಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರನ್ನು ಶೇ 22ರಷ್ಟು ಜನರು ಬೆಂಬಲಿಸಿದ್ದರು.
2024ರಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಭಾರತೀಯ ಮೂಲದವರಾದರೂ ಸಹ ಶೇ 60ರಷ್ಟು ಜನರು ಬೆಂಬಲಿಸಿದ್ದಾರೆ ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ಶೇ 30ರಷ್ಟು ಜನರು ಬೆಂಬಲಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಡೊಲಾಲ್ಡ್ ಟ್ರಂಪ್ ಅವರನ್ನು ಅಮೆರಿಕ ಹಾಲಿ ಉಪಾಧ್ಯಕ್ಷೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಭಿನಂದಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಅವರು, 'ಈ ಚುನಾವಣೆ ಫಲಿತಾಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ನಿಮ್ಮೆಲ್ಲರ ಬೆಂಬಲಕ್ಕೆ, ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಅಭಾರಿಯಾಗಿದ್ದೇನೆ" ಎಂದರು.
"ಡೊನಾಲ್ಡ್ ಟ್ರಂಪ್ ಅವರೊಂದಿಗೆ ಇಂದು ಮುಂಜಾನೆ ಸಂಭಾಷಣೆ ನಡೆಸಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆಲುವಿಗಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ಅಧಿಕಾರ ವರ್ಗಾವಣೆ ಪ್ರಕ್ರಿಯೆ ಸುಗಮವಾಗಿಸಲು ನಾವು ಅವರಿಗೆ ಸಹರಿಸುತ್ತೇವೆ" ಎಂದು ತಿಳಿಸಿದ್ದಾರೆ.
"ನಮ್ಮ ದೇಶದ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಹಾಗಾಗಿ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಚುನಾವಣೆ ಸಂದರ್ಭದಲ್ಲಿ ಕಿಚ್ಚು ಹೊತ್ತಿಸಿದ ಹೋರಾಟವನ್ನು ನಾವು ಅಂಗೀಕಾರ ಮಾಡುವುದಿಲ್ಲ. ಪ್ರಜಾಪ್ರಭುತ್ವ, ಕಾನೂನು ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರೆಯಲಿದೆ" ಎಂದು ಹೇಳಿದ್ದಾರೆ.












Click it and Unblock the Notifications