ಭಾರತ vs ಪಾಕಿಸ್ತಾನ ಯುದ್ಧವನ್ನು: ಆ ಒಂದು ಪ್ಲ್ಯಾನ್‌ನಿಂದ ನಿಲ್ಲಿಸಿದ್ದೆ ಡೊನಾಲ್ಡ್ ಟ್ರಂಪ್!
ಭಾರತ ಮತ್ತು ಪಾಕಿಸ್ತಾನ ಸಂಘರ್ಷ ನಿಂತಿದ್ದರ ಬಗ್ಗೆ ಹಾಗೂ ಅದರಲ್ಲಿ ಅಮೆರಿಕದ ಪಾತ್ರದ ವಿವಿಧ ವಿಚಾರಗಳ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಮಾತನಾಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಯುದ್ಧವನ್ನು ನಿಲ್ಲಿಸಿದ್ದು ನಾನೇ. ನನ್ನ ಮಧ್ಯ ಪ್ರವೇಶದಿಂದಲೇ ಯುದ್ಧ ನಿಂತಿತ್ತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು. ಇದೀಗ ಆ ಸಂದರ್ಭದಲ್ಲಿ ಏನಾಗಿತ್ತು ಎನ್ನುವ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದಗಳನ್ನು ಬಳಸಿಕೊಂಡು ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಕದನ ವಿರಾಮಕ್ಕೆ ಒಪ್ಪಿಸುವಂತೆ ಮಾಡಿದ್ದೆ. ಪಾಕಿಸ್ತಾನವು ಕದನ ವಿರಾಮವನ್ನು ರೂಪಿಸುವಲ್ಲಿ ಟ್ರಂಪ್ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಪಾಕಿಸ್ತಾನವು ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಆದರೆ ಭಾರತವು ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ನಿರಂತರವಾಗಿ ವಿರೋಧಿಸಿಕೊಂಡೇ ಬಂದಿದೆ. ನಾವು ಡೊನಾಲ್ಡ್ ಟ್ರಂಪ್ ಹೇಳಿ ಕದನ ವಿರಾಮ ಘೋಷಿಸಿರಲಿಲ್ಲ ಎಂದು ಭಾರತ ಸರ್ಕಾರವು ಸ್ಪಷ್ಟವಾಗಿ ಹೇಳಿದೆ. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಇದೇ ವಿಚಾರವನ್ನು ಮಾತನಾಡಿದ್ದಾರೆ. ಅಲ್ಲದೇ ಆ ಸಂದರ್ಭದಲ್ಲಿ ಅಮೆರಿಕ ಹೇಗೆ ಮಹತ್ವದ ಪಾತ್ರ ವಹಿಸುತ್ತು ಎನ್ನುವ ಬಗ್ಗೆಯೂ ಮಾತನಾಡಿದ್ದಾರೆ.
ಎರಡೂ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿವೆ. ಇದು ಉಳಿದ ಎಲ್ಲಾ ವಿಷಯಗಳಿಗಿಂತ ಮುಖ್ಯ ವಿಷಯವಾಗಿದೆ. ಭಾರತ ಮತ್ತು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಹುದೇ ಅಥವಾ ಇಲ್ಲವೇ ಎಂಬುದು ಅಲ್ಲ. ನಾವು ಇಸ್ರೇಲ್ ಮತ್ತು ಇರಾನ್‌ನೊಂದಿಗೆ ಮಾತನಾಡುತ್ತಿರುವಂತೆ. ಈ ದೇಶ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ನಾನು ಭಾರತ ಹಾಗೂ ಪಾಕಿಸ್ತಾನ ಯುದ್ಧ ನಡೆದ ಸಂದರ್ಭದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸರಣಿ ಫೋನ್ ಕರೆಗಳೊಂದಿಗೆ ಅದನ್ನು ಕೊನೆಗೊಳಿಸಿದೆ ಎಂದು ಟ್ರಂಪ್ ಹೇಳಿದ್ದು, ಈ ಹೋರಾಟವು ತುಂಬಾ ಕೆಟ್ಟ ಹಂತದಲ್ಲಿತ್ತು ಎಂದೂ ಅವರು ಹೇಳಿದ್ದಾರೆ.
ಆ ಸಂದರ್ಭದಲ್ಲಿ ನಾನು ಭಾರತ ಮತ್ತು ಪಾಕಿಸ್ತಾನಕ್ಕೆ ನೀವು ಪರಸ್ಪರ ಜಗಳವಾಡಲು ಹೋದರೆ, ನಾವು ಯಾವುದೇ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದೆ. ಆಗ ಭಾರತ ಮತ್ತು ಪಾಕಿಸ್ತಾನದವರು ಇಲ್ಲ, ಇಲ್ಲ, ಇಲ್ಲ, ನೀವು ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಬೇಕು ಎಂದಿದ್ದರು.
ನನಗೆ ಜನರಲ್ [ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್] ಇದ್ದರು ಅವರು ನಿಜವಾಗಿಯೂ ಪ್ರಭಾವಶಾಲಿಯಾಗಿದ್ದರು. ಪಾಕಿಸ್ತಾನದ ಜನರಲ್ ಕಳೆದ ವಾರ ನನ್ನ ಕಚೇರಿಯಲ್ಲಿದ್ದರು. ನಿಮಗೆ ಗೊತ್ತಾ, ಪ್ರಧಾನಿ ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ. ಅವರು ಒಬ್ಬ ಮಹಾನ್ ವ್ಯಕ್ತಿ ಮತ್ತು ನಾನು ಅವರನ್ನು ಈ ವಿಚಾರದಲ್ಲಿ ಪ್ರೇರೇಪಿಸಿದೆ. ಭಾರತ ಮತ್ತು ಪಾಕಿಸ್ತಾನ ಜಗಳವಾಡಿದರೆ ಅಮೆರಿಕದೊಂದಿಗೆ ಯಾವುದೇ ವ್ಯಾಪಾರ ಒಪ್ಪಂದಗಳು ಇರುವುದಿಲ್ಲ ಎಂದು ನಾನು ಇಬ್ಬರಿಗೂ ಹೇಳಿದ್ದೇನೆ ಎಂದು ಪುನರಾವರ್ತಿಸಿದ್ದಾರೆ. ಇರಾನ್ - ಇಸ್ರೇಲ್ ಯುದ್ಧದಿಂದ ಅಮೆರಿಕ ತೀವ್ರ ಮುಜುಗರಕ್ಕೆ ಒಳಗಾಗಿದೆ. ಈ ಸಂದರ್ಭದಲ್ಲಿ ಅವರು ಮತ್ತೆ ಭಾರತ ಹಾಗೂ ಪಾಕಿಸ್ತಾನದ ಸಂಘರ್ಷ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ.












Click it and Unblock the Notifications