ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ, ಇಸ್ರೇಲ್, ಅಮೆರಿಕ, ಯುಎಇ ಸೇರಿ I2U2 ಗುಂಪು, ಮುಂದಿನ ತಿಂಗಳು ಸಭೆ

|
Google Oneindia Kannada News

'I2U2' ಹೆಸರಿನ ನಾಲ್ಕು ರಾಷ್ಟ್ರಗಳ ವರ್ಚುವಲ್ ಶೃಂಗಸಭೆ ಜುಲೈ 13 ರಿಂದ 16 ರವರೆಗೆ ಪಶ್ಚಿಮ ಏಷ್ಯಾದ ದೇಶಗಳಿಗೆ ಬಿಡೆನ್ ಅವರ ಭೇಟಿಯ ಸಮಯದಲ್ಲಿ ನಡೆಯಲಿದೆ ಎಂದು ಬಿಡೆನ್ ಆಡಳಿತದ ಹಿರಿಯ ಅಧಿಕಾರಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 'I2U2' ಎಂದರೆ 'ಭಾರತ, ಇಸ್ರೇಲ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಯುಎಇ'. ಬಿಡೆನ್ ಅವರ ಪ್ರವಾಸದ ಸಮಯದಲ್ಲಿ ಇದು ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮುಂದಿನ ತಿಂಗಳು ನಡೆಯಲಿರುವ ಆನ್‌ಲೈನ್ ಶೃಂಗಸಭೆ 'ಐ2ಯು2'ನಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಈ I2U2 ಶೃಂಗಸಭೆಯಲ್ಲಿ ಆಹಾರ ಭದ್ರತೆ ಬಿಕ್ಕಟ್ಟು ಮತ್ತು ಇತರ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ.

ಪ್ರಧಾನಿ ಮೋದಿಗೆ ಪತ್ರದ ಮೂಲಕ ಕಣ್ಣೀರಿಟ್ಟ ನಿರ್ವಾಹಕನಿಗೆ ನ್ಯಾಯ ಸಿಗುತ್ತಾ?ಪ್ರಧಾನಿ ಮೋದಿಗೆ ಪತ್ರದ ಮೂಲಕ ಕಣ್ಣೀರಿಟ್ಟ ನಿರ್ವಾಹಕನಿಗೆ ನ್ಯಾಯ ಸಿಗುತ್ತಾ?

India, Israel, US, UAE Form I2U2, Summit Next Month

ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ಬೆನೆಟ್ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅವರೊಂದಿಗೆ ಈ ಅನನ್ಯ ಭೇಟಿಯನ್ನು ನಡೆಸಲು ಯುಎಸ್ ಅಧ್ಯಕ್ಷ ಬಿಡೆನ್ ಎದುರು ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ.

India, Israel, US, UAE Form I2U2, Summit Next Month

'I2U2' ಹೆಸರಿನ ಈ ನಾಲ್ಕು ರಾಷ್ಟ್ರಗಳ ಆನ್‌ಲೈನ್ ಶೃಂಗಸಭೆಯು ಜುಲೈ 13 ರಿಂದ 16 ರವರೆಗೆ ಪಶ್ಚಿಮ ಏಷ್ಯಾದ ದೇಶಗಳಿಗೆ ಬಿಡೆನ್ ಅವರ ಭೇಟಿಯ ಸಮಯದಲ್ಲಿ ನಡೆಯಲಿದೆ. ಈ ಸಮಯದಲ್ಲಿ, ಬಿಡೆನ್ ಅವರು ಇಸ್ರೇಲ್, ವೆಸ್ಟ್ ಬ್ಯಾಂಕ್ ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣಿಸುತ್ತಾರೆ ಮತ್ತು ಅನೇಕ ವಿಶ್ವ ನಾಯಕರನ್ನು ಭೇಟಿ ಮಾಡುತ್ತಾರೆ. ಬಿಡೆನ್ ಅವರ ಪ್ರಯಾಣದ ಮೊದಲ ನಿಲುಗಡೆ ಸ್ಥಳ ಇಸ್ರೇಲ್ ಆಗಿದೆ. ಇದು ಅಧ್ಯಕ್ಷರಾಗಿ ದೇಶಕ್ಕೆ ಬಿಡೆನ್ ಅವರ ಮೊದಲ ಭೇಟಿಯಾಗಿದೆ. ಅವರು ಸುಮಾರು 50 ವರ್ಷಗಳ ಹಿಂದೆ ಯುವ ಸಂಸದರಾಗಿ ಇಸ್ರೇಲ್‌ಗೆ ಹೋಗಿದ್ದರು.

(ಒನ್ಇಂಡಿಯಾ ಸುದ್ದಿ)

English summary
US President Joe Biden will host a virtual summit with Prime Minister Narendra Modi, Israel Prime Minister Naftali Bennett and UAE President Mohammed bin Zayed Al Nahyan during his visit to West Asia from July 13 to 16.'I2U2'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X