ಭಾರತ - ಬಾಂಗ್ಲಾದೇಶದ ಸಂಬಂಧ ಏನಾದರು ಒಂದು ಎಡವಟ್ಟಾಗುತ್ತೆ: ಮೊಹಮ್ಮದ್ ಯೂನುಸ್!

ಭಾರತ ಹಾಗೂ ಬಾಂಗ್ಲಾದೇಶ ಸಂಬಂಧವು ಇತ್ತೀಚಿನ ವರ್ಷಗಳಲ್ಲಿ ಹಾಳಾಗಿದೆ. ಈಚೆಗೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಸಂಘರ್ಷ ಏರ್ಪಟ್ಟಾಗಲೂ ಭಾರತದ ವಿರುದ್ಧ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದರು. ಬಾಂಗ್ಲಾದೇಶ ಉದಯಕ್ಕೆ ಕಾರಣವಾಗಿದ್ದೇ ಭಾರತ. ಪಾಕಿಸ್ತಾನದಿಂದ ಬಾಂಗ್ಲಾದೇಶ ಬೇರ್ಪಟ್ಟು ಹೊಸ ರಾಷ್ಟ್ರ ಉದಯಿಸಿತು. ಇತ್ತೀಚಿನ ವರ್ಷದ ವರೆಗೂ ಭಾರತ ಹಾಗೂ ಬಾಂಗ್ಲಾದೇಶ ಸಂಬಂಧ ಉತ್ತಮವಾಗಿಯೇ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾವು ಭಾರತದ ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾದೊಂದಿಗೆ ಕೈಜೋಡಿಸಿದೆ. ಹೀಗಾಗಿ, ವಿವಾದಾತ್ಮಕ ಹೇಳಿಕೆಗಳು ಹೆಚ್ಚಾಗುತ್ತಿವೆ. ಒಂದೊಮ್ಮೆ ಭಾರತವು ಪಾಕಿಸ್ತಾನದ ಮೇಲೆ ಯುದ್ಧ ಮಾಡಿದರೆ ಬಾಂಗ್ಲಾದೇಶವು ಭಾರತದ 7 ಈಶಾನ್ಯ ರಾಜ್ಯಗಳನ್ನು ವಶಪಡಿಸಿಕೊಳ್ಳಲಿದೆ ಎನ್ನುವ ವಿವಾದಾತ್ಮಕ ಹೇಳಿಕೆ ಆ ದೇಶದಿಂದ ಬಂದಿತ್ತು.

ಇದೀಗ ಭಾರತ ಮತ್ತು ಬಾಂಗ್ಲಾದೇಶದ ಸಂಬಂಧದ ಬಗ್ಗೆ ಅಲ್ಲಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್ ಅವರು ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ಭಾರತದೊಂದಿಗೆ ನಾವೇನೋ ಉತ್ತಮ ಸಂಬಂಧವನ್ನು ಇರಿಸಿಕೊಳ್ಳಬೇಕು ಅಂತ ಬಯಸುತ್ತಿದ್ದೇವೆ. ಆದರೆ, ಸದಾ ಒಂದಿಲ್ಲೊಂದು ತಪ್ಪುಗಳಾಗುತ್ತಿವೆ ಅಂತ ಹೇಳಿದ್ದಾರೆ. ಹೌದು ಭಾರತ ಹಾಗೂ ಬಾಂಗ್ಲಾ ನಡುವಿನ ಸಂಬಂಧ ಉತ್ತಮವಾಗಿಲ್ಲ ಎನ್ನುವುದನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಇದರೊಂದಿಗೆ ಕೆಲವೊಂದು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

India-Bangladesh relations will become a stumbling block Mohammad Yunus

ಬಾಂಗ್ಲಾ - ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಯಾವ ರೀತಿ ಇದೆ ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ. ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಮರಳಿ ಬಾಂಗ್ಲಾಗೆ ಹಸ್ತಾಂತರಿಸಬೇಕು ಎಂದು ಭಾರತಕ್ಕೆ ಅನೌಪಚಾರಿಕ ರಾಜತಾಂತ್ರಿಕ ಮಾಹಿತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಶೇಖ್ ಹಸೀನಾ ಅವರು ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಎದುರಾದ ಮೇಲೆ ಭಾರತ ಸರ್ಕಾರದಿಂದ ಆಶ್ರಯ ಕೋರಿದ್ದರು. ಅವರನ್ನು ಮರಳಿ ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಬೇಕು ಎನ್ನುವ ಒತ್ತಾಯವು ಹೆಚ್ಚಾಗಿದೆ. ಈ ವಿಚಾರದಲ್ಲಿ ನಾವು ಕಾನೂನಾತ್ಮಕವಾಗಿ ಮುಂದುವರಿಯಲಿದ್ದೇವೆ. ಎಲ್ಲವೂ ಸರಿಯಾಗಿ ನಡೆಯಬೇಕು ಎನ್ನುವುದನ್ನು ನಮ್ಮ ಆಸೆಯಾಗಿದೆ. ಭಾರತದೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸುವುದಕ್ಕೆ ನಾವು ಸದಾ ಪ್ರಯತ್ನಿಸುತ್ತೇವೆ ಎಂದು ಹೇಳಲಾಗಿದೆ.

ಭಾರತದ ಜೊತೆ ಯಾವಾಗಲೂ ನಾವು ಒಳ್ಳೆಯ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಆಸೆಯನ್ನು ಹೊಂದಿದ್ದೇವೆ. ಭಾರತ ನಮ್ಮ ನೆರೆಯ ರಾಷ್ಟ್ರವಾಗಿದೆ. ನಾವು ಆ ದೇಶದ ಜೊತೆ ಯಾವುದೇ ಸಮಸ್ಯೆ ಎದುರಾಗುವುದನ್ನು ಇಚ್ಛಿಸುವುದಿಲ್ಲ. ಕೆಲವು ಮಾಧ್ಯಮಗಳು ವಿನಾಕಾರಣ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದೂ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+