Donald Trump: ಭಾರತದ ಜೊತೆ ತೆರಿಗೆ ಒಪ್ಪಂದ ಸುಧಾರಿಸಲು ಡೊನಾಲ್ಡ್ ಟ್ರಂಪ್ ಗ್ರೀನ್ ಸಿಗ್ನಲ್?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದಾದ ನಂತರ ಒಂದು ಎಡವಟ್ಟು ಮಾಡಿಕೊಂಡು ಇಡೀ ಜಗತ್ತನ್ನು ಎದುರು ಹಾಕಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಕಾರಣಕ್ಕೆ ಅಮೆರಿಕ ಮಿತ್ರರು ಅಂದ್ರೆ ಅಮೆರಿಕದ ಸ್ನೇಹಿತ ದೇಶಗಳು ದೂರ ಆಗಿದ್ದವು. ಹೀಗಾಗಿ ಸ್ವತಃ ಅಮೆರಿಕದಲ್ಲಿ ಕೂಡ ಇದು ಚಿಂತೆ ಮೂಡುವಂತೆ ಮಾಡಿತ್ತು. ಮತ್ತೊಂದು ಕಡೆ ಭಾರತದ ಜೊತೆಗೆ ದೊಡ್ಡ ಕಿರಿಕ್ ಮಾಡಿಕೊಂಡು ಎಲ್ಲವೂ ಅಲ್ಲೋಲ & ಕಲ್ಲೋಲ ಆಗುವಂತೆ ಮಾಡಿದ್ದರು ಟ್ರಂಪ್ ಎಂಬ ಆರೋಪ ಮಾಡಲಾಗಿತ್ತು. ಆದರೆ ಇದೀಗ ದಿಢೀರ್ ಎಲ್ಲವೂ ಬದಲಾಗುವ ಸಮಯ ಬಂದೇ ಬಿಟ್ಟಿದೆ...
ಹೌದು, ಆಗಸ್ಟ್ 27 ರಂದು ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆಯ ಮಾಡಿ ಟ್ರಂಪ್ ಆದೇಶ ಹೊರಡಿಸಿದ್ದರು. ಇದೇ ಕಾರಣಕ್ಕೆ ಭಾರತ ಕೂಡ ಅಮೆರಿಕ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಭಾರತದಿಂದ ಅಮೆರಿಕಗೆ ರಫ್ತು ಮಾಡುವ ವಸ್ತುಗಳ ಮೇಲೆ ಶೇಕಡಾ 25 ತೆರಿಗೆ ಜೊತೆಗೇ, ಹೆಚ್ಚುವರಿ ಶೇ. 25ರಷ್ಟು ಟ್ಯಾಕ್ಸ್ ಹಾಕಿದ್ದರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇದರಿಂದ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗಿ ತಲೆನೋವಾಗಿತ್ತು. ಇದೀಗ ಮಾತುಕತೆ ಮೂಲಕ ಎಲ್ಲವನ್ನೂ ಸರಿ ಮಾಡಿಕೊಳ್ಳಲು ಅಮೆರಿಕ ಮುಂದಾಗಿದೆ.

ಕೊನೆಗೂ ಬುದ್ಧಿ ಕಲಿತ ಅಮೆರಿಕ?
ಈಗಾಗಲೇ ಹಲವು ಸುತ್ತಿನಲ್ಲಿ ಭಾರತ & ಅಮೆರಿಕದ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಹೀಗಾಗಿಯೇ ಕೊನೆಗೂ ಎರಡೂ ದೇಶಗಳ ನಡುವೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ತೆರಿಗೆ ವಿವಾದ ಬಗೆಹರಿಯುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲೂ ಟ್ರಂಪ್ ಅವರ ಈ ನಡೆ ಆರ್ಥಿಕತೆಗೆ ಭಾರಿ ದೊಡ್ಡ ಪೆಟ್ಟು ನೀಡುವ ಭಯ ಆವರಿಸಿತ್ತು. ಈಗಾಗಲೇ ಯುರೋಪ್ ಸೇರಿದಂತೆ ಅನೇಕ ರಾಷ್ಟ್ರಗಳು ಟ್ರಂಪ್ ಅವರ ತೆರಿಗೆ ನೀತಿ ವಿರುದ್ಧ ಧ್ವನಿ ಎತ್ತಿದ್ದವು. ಇದೀಗ ಭಾರತ ಕೂಡ ಅಮೆರಿಕ ಜೊತೆ ಮಾತುಕತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.
ಮಹತ್ವದ ಮಾತುಕತೆಯಲ್ಲಿ ಏನೆಲ್ಲಾ ಆಯ್ತು?
ಸೆಪ್ಟೆಂಬರ್ 16 ಮಂಗಳವಾರ ಭಾರತ ಮತ್ತು ಅಮೆರಿಕದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ಮತ್ತೆ ಶುರುವಾಗಿತ್ತು. ಅಮೆರಿಕ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ನಿಯೋಗವು ನೇತೃತ್ವ ವಹಿಸಿದ್ದರು, ಡೊನಾಲ್ಡ್ ಟ್ರಂಪ್ ಆಡಳಿತದ ದಕ್ಷಿಣ & ಮಧ್ಯ ಏಷ್ಯಾದ ಸಹಾಯಕರಾಗಿ ಬ್ರೆಂಡನ್ ಲಿಂಚ್ ಕಾರ್ಯನಿರ್ವಣೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಭಾರತ ಮತ್ತು ಅಮೆರಿಕದ ನಡುವಿನ ಈ ದ್ವಿಪಕ್ಷೀಯ ಮಾತುಕತೆ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಚರ್ಚೆಯು ಒಂದು ಹಂತಕ್ಕೆ ಬಂದು ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ.












Click it and Unblock the Notifications