ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ರಫ್ತಾಗಲಿದೆ ಭಾರತದ ಅಕ್ಕಿ: ಎರಡು ಒಪ್ಪಂದಗಳಿಗೆ ಸಹಿ

|
Google Oneindia Kannada News

ಶಾಂಡೋಂಗ್, ಜೂನ್ 9: ಬ್ರಹ್ಮಪುತ್ರ ನದಿ ನೀರು ಮಾಹಿತಿ ಪೂರೈಕೆ ಮತ್ತು ಭಾರತದಿಂದ ಚೀನಾಕ್ಕೆ ಅಕ್ಕಿ ರಫ್ತು ಸಂಬಂಧ ಭಾರತ ಹಾಗೂ ಚೀನಾಗಳು ಮಹತ್ವದ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದವು.

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಮ್ಮುಖದಲ್ಲಿ ನಡೆದ ನಿಯೋಗ ಮಟ್ಟದ ಮಾತುಕತೆ ನಂತರ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಜೂನ್ 12ರಂದು ಟ್ರಂಪ್ - ಕಿಮ್ ಜಾಂಗ್ ಉನ್ ಸಿಂಗಾಪುರದಲ್ಲಿ ಮುಖಾಮುಖಿಜೂನ್ 12ರಂದು ಟ್ರಂಪ್ - ಕಿಮ್ ಜಾಂಗ್ ಉನ್ ಸಿಂಗಾಪುರದಲ್ಲಿ ಮುಖಾಮುಖಿ

ಪ್ರವಾಹ ಸಂದರ್ಭಗಳಲ್ಲಿ ಬ್ರಹ್ಮಪುತ್ರ ನದಿ ನೀರಿನ ಮಟ್ಟದ ಬಗ್ಗೆ ಚೀನಾವು ಭಾರತಕ್ಕೆ ಮಾಹಿತಿ ನೀಡುವ ಮೊದಲ ಒಪ್ಪಂದಕ್ಕೆ ಚೀನಾ ಜಲಸಂಪನ್ಮೂಲ ಸಚಿವಾಲಯ ಮತ್ತು ಭಾರತದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯಗಳು ಸಹಿ ಹಾಕಿದವು.

india and china signs two mous on saturday

ಬಾಸ್ಮತಿಯೇತರ ವಿವಿಧ ಬಗೆಯ ಅಕ್ಕಿಗಳನ್ನು ಭಾರತದಿಂದ ಚೀನಾಕ್ಕೆ ರಫ್ತು ಮಾಡುವ ಸಂಬಂಧ ಭಾರತದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಹಾಗೂ ಚೀನಾದ ಕಸ್ಟಮ್ಸ್ ಆಡಳಿತ ಇಲಾಖೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಬೇಕಿಸ್ತಾನದ ಅಧ್ಯಕ್ಷ ಶಾವ್ಕತ್ ಮಿರ್ಜಿಯೊಯೆವ್ ಅವರೊಂದಿಗೆ ಮಾತುಕತೆ ನಡೆಸಿದರು.

English summary
India and China signed two bilateral agreements on saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X