ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೊಮಾಲಿಯಾದಲ್ಲಿ ಕೊರೊನಾ ಸೋಂಕಿತರ ಪತ್ತೆಯೇ ದೊಡ್ಡ ತಲೆನೋವು

|
Google Oneindia Kannada News

ಸೋಮಾಲಿಯಾ, ಏಪ್ರಿಲ್ 29: ಸೋಮಾಲಿಯಾದಲ್ಲಿ ಶೇ.90ರಷ್ಟು ಕೊವಿಡ್ 19 ರೋಗಿಗಳಿಗೆ ಕೊರೊನಾ ವೈರಸ್‌ನ ಲಕ್ಷಣಗಳೇ ಇಲ್ಲದಿರುವುದು ಆತಂಕಕ್ಕೀಡು ಮಾಡಿದೆ.

ಆರು ವಾರಗಳ ಬಳಿಕ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಒಟ್ಟು ಪರೀಕ್ಷೆಗೊಳಪಟ್ಟ 764 ಮಂದಿಯ ಪೈಕಿ 480 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.ಆದರೆ ಉಸಿರಾಟದ ತೊಂದರೆ ತೀವ್ರವಾದಾಗ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆಯೇ ವಿನಃ ಆರಂಭಿಕ ಹಂತದಲ್ಲಿದ್ದವರಿಗೆ ಮಾಹಿತಿ ಕೊರತೆಯಾಗಿದೆ.

ಈ ಕುರಿತು ಡಾ. ಅಬ್ದಿರಿಜಾಕ್ ಮಾತನಾಡಿ, ಈಗ ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆ ಇದೆ ಆದರೆ ಕೊರೊನಾ ಸೋಂಕಿತರ ಸಂಖ್ಯೆ ಖಂಡಿತವಾಗಿಯೂ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

In Somalia 90 Percent Coronavirus Infections Go Undetected

ನಮಗೆ ಸಾವಿರಾರು ಪ್ರಕರಣಗಳ ಬಗ್ಗೆ ಮಾಹಿತಿಯೇ ಇಲ್ಲ, ಕೇವಲ ಲಕ್ಷಣಗಳು ಕಂಡು ಬಂದರೆ ಮಾತ್ರ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಹೆಚ್ಚು ಮಂದಿಯನ್ನು ಒಟ್ಟಿಗೆ ತಪಾಸಣೆ ಮಾಡುವ ಮೂಲ ಸೌಕರ್ಯಗಳು ಕೂಡ ನಮ್ಮಲ್ಲಿಲ್ಲ ಎಂದು ವಿವರಿಸಿದ್ದಾರೆ.

ಕೊರೊನಾ ಪತ್ತೆಗೆ ಕೇವಲ ಮೂರು ಪ್ರಯೋಗಾಲಯಗಳು ಮಾತ್ರ ಲಭ್ಯವಿದೆ. ನಿತ್ಯ ಕೆಲವೇ ಕೆಲವು ಮಂದಿಯ ರಕ್ತ ಹಾಗೂ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ.

English summary
Six weeks after registering its first coronavirus case, Somalia on Monday had confirmed 480 infections out of 764 people tested for COVID-19, the highly infectious respiratory disease that has disrupted life worldwide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X