ವಿಶ್ವದೆಲ್ಲೆಡೆ ಈದ್ ಉಲ್ ಫಿತ್ರ್ ವಿಶೇಷ ಪ್ರಾರ್ಥನೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 07: ಮುಸ್ಲಿಮರ ಪವಿತ್ರ ಮಾಸದ ಅಂತ್ಯದೊಂದಿಗೆ ವಿಶೇಷ ಪ್ರಾರ್ಥನೆ ಎಲ್ಲೆಡೆ ಮೊದಲುಗೊಂಡಿದೆ. ಕೋಟ್ಯಂತರ ಇಸ್ಲಾಂ ಧರ್ಮಪಾಲಕರು ವಿಶೇಷ ಪ್ರಾರ್ಥನೆ ಸಲ್ಲಿಸಿ ಶಾಂತಿಗಾಗಿ ಬೇಡಿದ್ದಾರೆ.

ಕಳೆದ ನಾಲ್ಕು ವಾರಗಳಲ್ಲಿ ಕ್ರಮವಾಗಿ ಫ್ಲೋರಿಡಾ, ಟರ್ಕಿ, ಸೌದಿ ಅರೇಬಿಯಾ, ಜೋರ್ಡಾನ್, ಫ್ರಾನ್ಸ್ ಹಾಗೂ ಬಾಂಗ್ಲಾದೇಶದಲ್ಲಿ ನಡೆದ ಉಗ್ರರ ದಾಳಿಯ ಕಹಿ ನೆನಪಿನೊಂದಿಗೆ ಸಂಭ್ರಮಾಚರಣೆಗೆ ಅಣಿಯಾಗಿದ್ದಾರೆ.[ರೋಜಾ ಆಚರಿಸುವ ಮುಸ್ಲಿಂ ಸ್ನೇಹಿತನ ದಿನಚರಿ ಹೀಗಿರುತ್ತದೆ]

ಒಂದು ತಿಂಗಳ ಅತ್ಯಂತ ಶ್ರದ್ಧೆಯ ಉಪವಾಸ ವ್ರತ (ರೋಜಾ) ತೆರೆಬಿದ್ದಿದೆ. ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತವಾಗುವ ಮೊದಲು ಹನಿ ನೀರು ಕೂಡ ಹೊಟ್ಟೆಗಿಳಿಸದಂತಹ ಕಠಿಣ ವ್ರತ ಪಾಲನೆ ಸುಲಭವಲ್ಲ. ಒಂದು ತಿಂಗಳ ರೋಜಾ ನಂತರ ಇಂದು ಈದ್ ಉಲ್ ಫಿತ್ರ್ ಆಚರಣೆ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. [ಬಾಂಗ್ಲಾದೇಶ: ಪೊಲೀಸ್ ದಾಳಿಗೆ ಒಬ್ಬ ಉಗ್ರನ ಸಾವು]

ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ಸುಮಾರು 80,000ಕ್ಕೂ ಅಧಿಕ ಮುಸ್ಲಿಮರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದು ಅವಿಭಾಜ್ಯ ಯುರೋಪಿನ ಅತಿದೊಡ್ಡ ಜನ ಸಮೂಹದ ಒಟ್ಟಿಗೆ ಸಲ್ಲಿಸಿದ ಪ್ರಾರ್ಥನೆ ಎನಿಸಿದೆ.

ಇತ್ತೀಚೆಗೆ ಇರಾಕಿ ಉಗ್ರ ಪಡೆ ದಾಳಿಗೆ ಸಿಲಿಕಿದ್ದ ಬಾಗ್ದಾದ್ ನಲ್ಲಿ ಬಿಗಿ ಭದ್ರತೆ ನಡುವೆ ಪ್ರಾರ್ಥನೆ ಸಲ್ಲಿಕೆಯಾಗಿದೆ. ಯಮನ್ ನಲ್ಲಿ ಕಾರು ಬಾಂಬ್ ಸ್ಫೋಟ ಸಂಭವಿಸಿ 10 ಜನ ಮೃತಪಟ್ಟಿದ ಕಹಿ ಘಟನೆ ನಡೆದಿದೆ.

ಉಳಿದಂತೆ ಇಂಡೋನೇಷಿಯಾ, ಪಾಕಿಸ್ತಾನ, ಮಲೇಷಿಯಾ, ಬರ್ಲಿನ್ ನಲ್ಲಿ ಶಾಂತಿಯುತವಾಗಿ ಸಾಮೂಹಿಕ ಪ್ರಾರ್ಥನೆ ಕಂಡು ಬಂದಿದೆ. ಸಿಡ್ನಿಯಲ್ಲಿ 50,000 ಮಂದಿ ಒಟ್ಟಿಗೆ ಮುಂಜಾನೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಲಾಹೋರಿನಲ್ಲಿ ಈದ್ ಆಚರಣೆಗೆ ತೆರಳುತ್ತಿರುವ ಮಂದಿ

ಲಾಹೋರಿನಲ್ಲಿ ಈದ್ ಆಚರಣೆಗೆ ತೆರಳುತ್ತಿರುವ ಮಂದಿ

ಪಾಕಿಸ್ತಾನದ ಲಾಹೋರಿನ ರೈಲ್ವೆ ನಿಲ್ದಾಣದ ದೃಶ್ಯ. ಈದ್ ಉಲ್ ಫಿತ್ರ್ ಆಚರಣೆಗಾಗಿ ತಮ್ಮಮ್ಮ ಊರುಗಳಿಗೆ ತೆರಳುತ್ತಿರುವ ಮಂದಿ. ಚಿತ್ರ ಕೃಪೆ: ಪಿಟಿಐ

ಮೆಹಂದಿ, ಬಳೆಗಳ ಉಡುಗೊರೆ

ಮೆಹಂದಿ, ಬಳೆಗಳ ಉಡುಗೊರೆ

ಕರ್ನಾಟಕದ ಚಿಕ್ಕಮಗಳೂರಿನಲ್ಲಿ ರಮದಾನ್ ಮಾಸಾಚರಣೆ ಅಂಗವಾಗಿ ಮುಸ್ಲಿಂ ಮಹಿಳೆಯರಿಗೆ ಮೆಹಂದಿ ಹಾಗೂ ಬಳೆಗಳನ್ನು ನೀಡಿದ ಹಿಂದೂ ಮಹಿಳೆಯರು.

ಲೆಬನಾನ್ ದೇಶದಲ್ಲಿ ಈದ್ ಉಲ್ ಫಿತ್ರ್ ಆಚರಣೆ

ಲೆಬನಾನ್ ದೇಶದಲ್ಲಿ ಈದ್ ಉಲ್ ಫಿತ್ರ್ ಆಚರಣೆ

ಲೆಬನಾನ್ ದೇಶದಲ್ಲಿ ಈದ್ ಉಲ್ ಫಿತ್ರ್ ಆಚರಣೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತಮ್ಮ ಮಗನನ್ನು ಎತ್ತಿ ಹಿಡಿದಿದ್ದಾರೆ

ಅಫ್ಘಾನಿಸ್ತಾನದಲ್ಲಿ ಬಿಗಿ ಭದ್ರತೆ ನಡುವೆ ಜನ ಸಂಚಾರ

ಅಫ್ಘಾನಿಸ್ತಾನದಲ್ಲಿ ಬಿಗಿ ಭದ್ರತೆ ನಡುವೆ ಜನ ಸಂಚಾರ

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಬಿಗಿ ಭದ್ರತೆ ನಡುವೆ ಜನ ಸಂಚಾರ. ಈದ್ ಆಚರಣೆಗಾಗಿ ಮೂರು ದಿನಗಳ ರಜೆ

ಸಿರಿಯನ್ ಅಧ್ಯಕ್ಷರಿಂದ ಪ್ರಾರ್ಥನೆ

ಸಿರಿಯನ್ ಅಧ್ಯಕ್ಷರಿಂದ ಪ್ರಾರ್ಥನೆ

ಯುದ್ಧಪೀಡಿತ ಸಿರಿಯಾ ದೇಶದಲ್ಲಿ ಅಧ್ಯಕ್ಷ ಬಷರ್ ಅಸಾಸ್ ಜತೆ ಇತರೆ ನಾಯಕರು ಸಾಫ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಇರಾನ್ನಿನಲ್ಲಿ ಮಹಿಳೆಯರಿಂದ ಪ್ರಾರ್ಥನೆ

ಇರಾನ್ನಿನಲ್ಲಿ ಮಹಿಳೆಯರಿಂದ ಪ್ರಾರ್ಥನೆ

ಇರಾನ್ನಿನ ತೆಹರಾನ್ ನಲ್ಲಿ ಮುಸ್ಲಿಂ ಮಹಿಳೆಯರಿಂದ ಈದ್ ಉಲ್ ಫಿತ್ರ್ ಪ್ರಾರ್ಥನೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Muslims around the world celebrate Eid. Millions of people around the world have gathered for prayers and feasting to mark the end of the Holy Month. Extremists have struck in Florida, Turkey, Saudi Arabia, Jordan, France and Bangladesh in the last four weeks
Please Wait while comments are loading...