ಸರ್ಕಾರ ರಚನೆಗೆ ಮೋದಿ ಆಪ್ತ ಗೆಳೆಯ ವಿಫಲ, ಮತ್ತೆ ಚುನಾವಣೆ

ಜೆರುಸಲೇಮ್, ಮೇ 30: ಇಸ್ರೇಲ್‌ನಲ್ಲಿ ಸರ್ಕಾರ ರಚಿಸಲು ನಿಯೋಜಿತ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಮತ್ತೆ ಚುನಾವಣೆ ನಡೆಸಲು ನಿರ್ಧರಿಸಿದ್ದಾರೆ.

ಸುಮಾರು ಒಂದೂವರೆ ತಿಂಗಳ ಪ್ರಯತ್ನದ ಬಳಿಕ ಸಮ್ಮಿಶ್ರ ಸರ್ಕಾರ ರಚನೆ ಅಸಾಧ್ಯ ಮತ್ತೆ ಚುನಾವಣೆ ಎದುರಿಸುವುದು ಅನಿವಾರ್ಯ ಎನ್ನುವ ನಿರ್ಣಯವನ್ನು ಇಸ್ರೇಲ್ ಸಂಸತ್ತು ಅಂಗೀಕರಿಸಿದೆ.

In Defeat for Netanyahu Israel Moves to Hold New Election

ಇದರಿಂದ ಸೆಪ್ಟೆಂಬರ್ ವರೆಗೂ ಮಧ್ಯಂತರ ಸರ್ಕಾರ ಮುಂದುವರೆಯುವ ಸಾಧ್ಯತೆ ನಿಚ್ಛಳವಾಗಿದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ನೇತನ್ಯಾಹು ಕಳೆದ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 45 ಸೀಟುಗಳನ್ನು ಗೆದ್ದಿದ್ದರು.

ಬಹುಮತ ಸಾಬೀತುಪಡಿಸಲು ನೇತನ್ಯಾಹುಗೆ ಇನ್ನೂ 16 ಸೀಟುಗಳ ಅಗತ್ಯವಿತ್ತು.ಆದರೆ ಸಣ್ಣಪುಟ್ಟ ಪಕ್ಷಗಳ ಸದಸ್ಯರು ನೇತನ್ಯಾಹು ಬೆಂಬಲಕ್ಕೆ ನಿಲ್ಲಲು ಹಿಂಜರಿದಿದ್ದಾರೆ.

ಮೋದಿ ಆಪ್ತ ಸ್ನೇಹಿತ: ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನೇತನ್ಯಾಹು ಕೆಲ ದಿನಗಳ ಹಿಂದೆ ಸಮ್ಮಿಶ್ರ ಸರ್ಕಾರದ ಸವಾಲು ಪ್ರಸ್ತಾಪಿಸಿದ್ದರು.

ಮೋದಿ ಅಭೂತಪೂರ್ವ ಗೆಲುವಿಗೆ ಶುಭಾಶಯ ಕೋರಿದ್ದ ನೇತನ್ಯಾಹು ನಿಮಗೆ ಪೂರ್ಣ ಬಹುಮತ ದೊರೆತಿದೆ ಸರ್ಕಾರ ರಚಿಸುವುದು ಸುಲಭ ಆದರೆ ನನಗೆ ಅಂತಹ ಅವಕಾಶ ದೊರೆತಿಲ್ಲ, ಮೈತ್ರಿ ಪಕ್ಷಗಳೊಂದಿಗೆ ಸರ್ಕಾರ ನಡೆಸುವ ಸವಾಲಿದೆ ಎಂದು ಹೇಳಿಕೊಂಡಿದ್ದರು. ಈ ಕುರಿತು ಸಂಭಾಷಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಮೋದಿ ಪ್ರಧಾನಿಯಾದ ಬಳಿಕ ಈ ನಾಯಕರು ಮೂರ್ನಾಲ್ಕು ಭಾರಿ ಭೇಟಿಯಾಗಿದ್ದಾರೆ.ಇಸ್ರೇಲ್ ಹಾಗೂ ಭಾರತದ ಸಂಬಂಧ ವೃದ್ಧಿ ಜೊತೆಗೆ ವೈಯಕ್ತಿಕವಾಗಿಯೂ ಸಂಬಂಧ ಸುಧಾರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+