ಇಮ್ರಾನ್ ಖಾನ್ ರಿಲೀಸ್: ಮಾಜಿ ಹೆಂಡತಿಗೆ ಖುಷಿಯೋ ಖುಷಿ!

ಪಾಕಿಸ್ತಾನ: ಇಮ್ರಾನ್ ಬಿಡುಗಡೆಗೆ ಸುಪ್ರೀಂ ಆದೇಶಿಸಿದ ನಂತರ ಪಾಕಿಸ್ತಾನದಲ್ಲಿ ಪ್ರತಿಭಟನೆ & ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ. ಇದೇ ಹೊತ್ತಲ್ಲಿ ಇಮ್ರಾನ್ ಖಾನ್ ಮಾಜಿ ಹೆಂಡತಿ ಕೂಡ ಈ ಖುಷಿಯನ್ನ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಹಾಗಾದ್ರೆ ಯಾರು ಅದು ಇಮ್ರಾನ್ ಖಾನ್ ಮಾಜಿ ವೈಫ್? ಏನ್ ಹೇಳಿದ್ರು? ಅದರ ಕಂಪ್ಲೀಟ್ ಇನ್ಫರ್ಮೇಷನ್ ಇಲ್ಲಿದೆ.

ಅಂದಹಾಗೆ 1995ರಲ್ಲಿ ಇಮ್ರಾನ್ ಖಾನ್ ಮೊದಲ ಮದುವೆ ಆಗಿದ್ರು. ಬ್ರಿಟಿಷ್ ಚಲನಚಿತ್ರ ನಿರ್ಮಾಪಕಿಯಾದ ಜೆಮಿಮಾ ಗೋಲ್ಡ್ ಸ್ಮಿತ್, ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ ಆಗಿದ್ದ ಇಮ್ರಾನ್ ಅವರ ಕೈಹಿಡಿದರು. ಆದರೆ ಈ ಜೋಡಿ 2004ರಲ್ಲಿ ವಿಚ್ಛೇದನ ಪಡೆದಿತ್ತು. ಆದರೆ ಈಗ ಇಮ್ರಾನ್ ಖಾನ್ ಮಾಜಿ ಹೆಂಡತಿ ಬ್ರಿಟಿಷ್ ಬ್ಯೂಟಿ ಜೆಮಿಮಾ ಗೋಲ್ಡ್ ಸ್ಮಿತ್ ಮತ್ತೆ ಸುದ್ದಿಯಲ್ಲಿದ್ದಾರೆ. ತನ್ನ ಮಾಜಿ ಗಂಡನ ಬಿಡುಗಡೆಗೆ ಫುಲ್ ಖುಷ್ ಆಗಿದ್ದಾರೆ. ಹಾಗಾದ್ರೆ ತಮ್ಮ ಸ್ಪೆಷಲ್ ಟ್ವೀಟ್‌ನಲ್ಲಿ ಜೆಮಿಮಾ ಗೋಲ್ಡ್ ಸ್ಮಿತ್ ಅವರು ಇಮ್ರಾನ್ ಖಾನ್‌ಗೆ ಹೇಳಿದ್ದೇನು?

Imran Khan’s ex-wife & British filmmaker Jemima happy after supreme court order

ಅರ್ಥವು ಮೇಲುಗೈ ಸಾಧಿಸಿದೆ!

ಹೌದು, ಇಮ್ರಾನ್ ಖಾನ್ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಪಾಕಿಸ್ತಾನದಲ್ಲಿ ಉಗ್ರ ಪ್ರತಿಭಟನೆ ನಡೆದು ಕಂಡ ಕಂಡ ಕಡೆ ಇಮ್ರಾನ್ ಬೆಂಬಲಿಗರು ಬೆಂಕಿ ಹಚ್ಚುವಾಗಲೇ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಜೆಮಿಮಾ ಗೋಲ್ಡ್ ಸ್ಮಿತ್ ಅವರು, ಅಂತಿಮವಾಗಿ ಅರ್ಥವು ಮೇಲುಗೈ ಸಾಧಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಜೆಮಿಮಾ ಗೋಲ್ಡ್ ಸ್ಮಿತ್ ಮಾಡಿರುವ ಟ್ವೀಟ್ ಬರೋಬ್ಬರಿ 1 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದಿದ್ದು, 72 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

ಯಾವಾಗ ಬಿಡುಗಡೆ ಆಗ್ತಾರೆ ಇಮ್ರಾನ್?

ಹೌದು, ಪಾಕಿಸ್ತಾನ ಮಿಲಿಟರಿ ಹಾಗೂ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಸೇರಿ ಇಮ್ರಾನ್ ಖಾನ್‌ಗೆ ಖೆಡ್ಡ ತೋಡಿ, ಪಾಕಿಸ್ತಾನ ಮಾಜಿ ಪ್ರಧಾನಿಯನ್ನ ಜೈಲಿಗೆ ಕಳಿಸಿದ್ದ ಆರೋಪ ಇತ್ತು. ಭ್ರಷ್ಟಾಚಾರ ನಿಗ್ರಹದಳ ಬಳಸಿಕೊಂಡು ಈ ಕೆಲಸ ಮಾಡಿದ್ದಾರೆ ಎಂಬ ಆರೋಪವನ್ನ ಇಮ್ರಾನ್ ಬೆಂಬಲಿಗರು ಮಾಡುತ್ತಿದ್ದರು. ಇದೇ ಕಾರಣಕ್ಕಾಗಿ ಪಾಕಿಸ್ತಾನದ ಅತ್ಯುನ್ನತ ಕೋರ್ಟ್ ಸುಪ್ರೀಂಗೆ ಮನವಿ ಮಾಡಲಾಗಿತ್ತು. ಇದೀಗ ಇಮ್ರಾನ್ ಖಾನ್ ಬಂಧವೇ ಕಾನೂನುಬದ್ಧ ಅಲ್ಲ ಎಂಬ ಹೇಳಿಕೆಯನ್ನ ಪಾಕಿಸ್ತಾನ ಸುಪ್ರೀಂಕೋರ್ಟ್ ಹೇಳಿದೆ.

ಇಮ್ರಾನ್ ರಿಲೀಸ್‌ಗೆ ಕೌಂಟ್‌ಡೌನ್!

ಇನ್ನು ಸುಪ್ರೀಂಕೋರ್ಟ್ ಇಮ್ರಾನ್ ಬಂಧನ ಕಾನೂನು ಬದ್ಧವಲ್ಲ ಎಂದು ಹೇಳಿದ ಬಳಿಕ ಇಮ್ರಾನ್ ರಿಲೀಸ್ ಆಗಲೇಬೇಕು. ಆದ್ರೆ ಇಮ್ರಾನ್ ರಿಲೀಸ್ ಆಗೋದು ಯಾವಾಗ? ಎಂಬ ಪ್ರಶ್ನೆ ಅವರ ಬೆಂಬಲಿಗರನ್ನ ಕಾಡ್ತಿದೆ. ಇಲ್ಲಿಯ ತನಕ ಆ ಬಗ್ಗೆ ಯಾವುದೇ ಅಪ್‌ಡೇಟ್ ಸಿಗದೇ ಇದ್ದರೂ, ಶೀಘ್ರದಲ್ಲೇ ಇಮ್ರಾನ್ ಹೊರಗೆ ಬರುವ ನಿರೀಕ್ಷೆ ಇದೆ. ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ತಲುಪಿದ ಹಿನ್ನೆಲೆ ಪಾಕಿಸ್ತಾನದಲ್ಲಿ ಬಿಗಿ ಭದ್ರತೆಯನ್ನ ಕೈಗೊಳ್ಳಲಾಗಿದೆ. ಹಾಗೇ ಖಾನ್ ಬೆಂಬಲಿಗರು ಕೂಡ ಒಂದಷ್ಟು ಸೈಲೆಂಟ್ ಆಗಿದ್ದಾರೆ.

Imran Khan’s ex-wife & British filmmaker Jemima happy after supreme court order

ಪಾಕಿಸ್ತಾನ ಸುಪ್ರೀಂಕೋರ್ಟ್ ಹೇಳಿದ್ದೇನು?

2 ದಿನದ ಹಿಂದೆ ವಿಚಾರಣೆಗೆ ಅಂತಾ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಬಂಧನವಾಗಿತ್ತು. ಪಾಕಿಸ್ತಾನಿ ಅರೆಸೈನಿಕ ಪಡೆ ಇಮ್ರಾನ್ ಖಾನ್ ಅವರನ್ನ ಅರೆಸ್ಟ್ ಮಾಡಿತ್ತು. ಇದು ಪಾಕಿಸ್ತಾನದ ನೆಮ್ಮದಿ ಕೆಡಿಸಿತ್ತು. ಅದರಲ್ಲೂ ಇಮ್ರಾನ್ ಅವರನ್ನ ಬಂಧಿಸಿದ್ದ ರೀತಿ ಎಲ್ಲರನ್ನೂ ರೊಚ್ಚಿಗೆಬ್ಬಿಸಿದೆ. ಮತ್ತೊಂದ್ಕಡೆ ಇಮ್ರಾನ್ ಬಂಧನದ ಬಗ್ಗೆ ನಿನ್ನೆ ಇಸ್ಲಾಮಾಬಾದ್‌ ಹೈಕೋರ್ಟ್‌ ತೀರ್ಪು ನೀಡಿ ಇಮ್ರಾನ್ ಬಂಧನ ಸರಿಯಾಗಿದೆ ಎಂದಿತ್ತು. ಆದರೆ ಈಗ ಪಾಕಿಸ್ತಾನ ಸುಪ್ರೀಂಕೋರ್ಟ್ ಉಲ್ಟಾ ತೀರ್ಪು ನೀಡಿ, ಬಂಧನ ಕಾನೂನು ಬಾಹೀರ ಎಂದಿದೆ.

ಒಟ್ನಲ್ಲಿ ಇಮ್ರಾನ್ ಖಾನ್ ಬಿಡುಗಡೆಗೆ ಪಾಕಿಸ್ತಾನ ಸುಪ್ರೀಂಕೋರ್ಟ್ ಆದೇಶ ನೀಡಿರುವುದು ಅವರ ಬೆಂಬಲಿಗ ಪಡೆಗೆ ಮಾತ್ರವಲ್ಲ, ಮಾಜಿ ಪತ್ನಿ ಬ್ರಿಟಿಷ್ ಚಲನಚಿತ್ರ ನಿರ್ಮಾಪಕಿಯಾದ ಜೆಮಿಮಾ ಗೋಲ್ಡ್ ಸ್ಮಿತ್‌ಗೂ ಸಖತ್ ಖುಷಿ ಕೊಟ್ಟಿದೆ. ಮತ್ತೊಂದ್ಕಡೆ ಇಮ್ರಾನ್ ಬಿಡುಗಡೆ ನಂತರ ಪಾಕಿಸ್ತಾನದಲ್ಲಿ ರಾಜಕೀಯ ಕ್ರಾಂತಿ ಆರಂಭ ಆಗುವ ನಿರೀಕ್ಷೆ ಇದ್ದು, ಆಡಳಿತ ಪಕ್ಷಕ್ಕೆ ನಡುಕ ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+