ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ವಿದ್ಯಾರ್ಥಿಗಳಿಗೆ ಚೀನಾದಿಂದ ಬರಬೇಡಿ ಎಂದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 4: ಚೀನಾದಲ್ಲಿರುವ ಪಾಕಿಸ್ತಾನಿ ವಿದ್ಯಾರ್ಥಿಗಳು ವಾಪಸ್ ಬರುವುದು ಬೇಡ ಎಂದಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಒಂದೊಮ್ಮೆ ವಿದ್ಯಾರ್ಥಿಗಳು ಪಾಕಿಸ್ತಾನಕ್ಕೆ ಮರಳಿದರೆ ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹೀಗಾಗಿ ನೀವು ಚೀನಾದಲ್ಲೇ ಇರಿ ಎಂದು ಪಾಕಿಸ್ತಾನದ ರಾಯಭಾರಿ ನಗ್ಮಾನ ಹಷ್ಮಿ ಹೇಳಿದ್ದಾರೆ.

ಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ

ಭಾರತವು ಈಗಾಗಲೇ ಎರಡು ವಿಶೇಷ ವಿಮಾನಗಳನ್ನು ಕಳುಹಿಸಿ ಒಟ್ಟು 645 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಂಡು ಇಲ್ಲಿ ಚಿಕಿತ್ಸೆ ನೀಡುತ್ತಿದೆ. ಅವರನ್ನು ಎರಡು ದಿನಗಳ ಕಾಲ ತೀವ್ರ ನಿಗಾದಲ್ಲಿಡಲಾಗುತ್ತದೆ. ವಿಶೇಷ ತಜ್ಞರ ತಂಡವನ್ನು ನೇಮಿಸಲಾಗಿದೆ.

Imran Khan Refuses To Evacuate Students From China

ವಿದ್ಯಾರ್ಥಿಗಳು ಅಲ್ಲಿಂದ ಪಾಕಿಸ್ತಾನಕ್ಕೆ ಹಿಂದಿರುಗುವುದಾಗಿ ಒತ್ತಡ ಹಾಕುತ್ತಿದ್ದಾರೆ ಆದರೆ ಯಾವುದೇ ಕಾರಣಕ್ಕೂ ಅವರು ಪಾಕಿಸ್ತಾನಕ್ಕೆ ಬರುವುದು ಬೇಡ ಎಂದು ಪ್ರಧಾನಿಯ ವಿಶೇಷ ಅಧಿಕಾರಿ ಜಫರ್ ಮಿರ್ಜಾ ಹೇಳಿದ್ದರು.

ಕೊರೊನಾ ವೈರಸ್ ಬಗ್ಗೆ ಮಾಹಿತಿ ಕೊಟ್ಟ ವೈದ್ಯರ ಬಂಧಿಸಿದ್ದ ಚೀನಾ: ಕಾರಣವೇನು?ಕೊರೊನಾ ವೈರಸ್ ಬಗ್ಗೆ ಮಾಹಿತಿ ಕೊಟ್ಟ ವೈದ್ಯರ ಬಂಧಿಸಿದ್ದ ಚೀನಾ: ಕಾರಣವೇನು?

ಭಾರತದವರು ತಮ್ಮ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವ ಪಾಕಿಸ್ತಾನದ ವಿದ್ಯಾರ್ಥಿಗಳು ನಮ್ಮನ್ನೂ ಅದೇ ರೀತಿ ಕರೆದುಕೊಂಡು ಹೋಗಿ ಎಂದು ಕೇಳಿದ್ದರು.

ಚೀನಾದಲ್ಲಿ ಸಿಲುಕಿದ ಆಂಧ್ರದ ಟೆಕ್ಕಿ, ಈ ತಿಂಗಳು ಮದ್ವೆ ಇದೆ ಪ್ಲೀಸ್!ಚೀನಾದಲ್ಲಿ ಸಿಲುಕಿದ ಆಂಧ್ರದ ಟೆಕ್ಕಿ, ಈ ತಿಂಗಳು ಮದ್ವೆ ಇದೆ ಪ್ಲೀಸ್!

ನೇಪಾಳದ ವಿದ್ಯಾರ್ಥಿಯೊಬ್ಬರಲ್ಲಿ ಕೂಡ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಶ್ರೀಲಂಕಾ, ಬಾಂಗ್ಲಾದೇಶ ಕೂಡ ವುಹಾನ್‌ನಿಂದ ತಮ್ಮ ಪ್ರಜೆಗಳನ್ನು ಕರೆಸಿಕೊಳ್ಳುತ್ತಿದ್ದಾರೆ. ಚೀನಾದಲ್ಲಿ ಪಾಕಿಸ್ತಾನದ 28 ಸಾವಿರಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.ಚೀನಾಕ್ಕೆ ತೆರಳುವ ವಿಮಾನ ಸೇವೆಯನ್ನು ಪಾಕಿಸ್ತಾನವು ರದ್ದುಗೊಳಿಸಿದೆ.

English summary
Hundreds of stranded Pakistani students in the coronavirus-hit Wuhan city have made desperate pleas to the Imran Khan government to evacuate them from China's worst-affected Hubei province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X