ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲೆ ಕೇಸ್‌ನಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಬಚಾವ್?

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಇಸ್ಲಾಮಾಬಾದ್‌: ಪಾಕಿಸ್ತಾನದ ಪರಿಸ್ಥಿತಿಯೇ ಅರ್ಥವಾಗುತ್ತಿಲ್ಲ. ಆ ದೇಶದಲ್ಲಿ ಎಲ್ಲವೂ ಉಲ್ಟಾ. ಅದರಲ್ಲೂ ಜನಪ್ರತಿನಿಧಿ ಕೂಡ ಜೈಲಿಗೆ ಹೋಗ್ತಾರೆ, ಮಾಜಿ ಪ್ರಧಾನಿಗೆ ಗುಂಡು ಹಾರಿಸುವಷ್ಟು ಭಯಾನಕ ಸ್ಥಿತಿ ಅಲ್ಲಿದೆ. ಇಂತಹ ವಾತಾವರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧವೂ ಕೊಲೆ ಪ್ರಕರಣ ದಾಖಲಾಗಿ ಸಖತ್ ಸದ್ದು ಮಾಡುತ್ತಿದೆ.

ಹೌದು, ಇಮ್ರಾನ್ ಖಾನ್‌ನ ಜೈಲಿಗೆ ಹಾಕಲು ಅಲ್ಲಿನ ಸರ್ಕಾರ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿದೆ. ಆದರೆ ಪಾಕಿಸ್ತಾನದ ಕೇಂದ್ರ ಸರ್ಕಾರ ಮಾಡುತ್ತಿರುವ ಐಡಿಯಾ ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ಇಮ್ರಾನ್ ಖಾನ್ ಪಾಕ್ ನ್ಯಾಯಾಂಗ ವ್ಯವಸ್ಥೆಯ ಬಲದಿಂದಲೇ ಬಚಾವ್ ಆಗುತ್ತಿದ್ದಾರೆ. ಇದೀಗ ಕೊಲೆ ಪ್ರಕರಣದಲ್ಲಿ ತಮಗೆ ನೀಡಿರುವ ಜಾಮೀನು ಅವಧಿ ವಿಸ್ತರಿಸುವಂತೆ ಇಮ್ರಾನ್‌ ಖಾನ್‌ ಮಾಡಿದ್ದ ಮನವಿಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಪುರಸ್ಕರಿಸಿದೆ. ಆ ಮೂಲಕ ಅರೆಸ್ಟ್ ಆಗುವ ಭೀತಿಯಲ್ಲಿದ್ದ ಇಮ್ರಾನ್ ಖಾನ್‌ಗೆ ಮತ್ತಷ್ಟು ರಿಲೀಫ್ ಸಿಕ್ಕಿದೆ (Imran Khan Arrest).

Imran Khan bail has been extended in a Murder case

14 ದಿನ ಇಮ್ರಾನ್‌ಗೆ ಭಯವಿಲ್ಲ!

ಅಂದಹಾಗೆ ಇಮ್ರಾನ್ ಖಾನ್ ವಿರುದ್ಧ ಈಗಾಗಲೇ ಹತ್ತಾರು ಕೇಸ್‌ಗಳನ್ನು ಹಾಕಲಾಗಿದೆ. ಈ ಹಿನ್ನೆಲೆ ನಿತ್ಯ ಇಮ್ರಾನ್ ಕೋರ್ಟ್, ಪೊಲೀಸ್ ಸ್ಟೇಷನ್ ಅಂತಾನೆ ಪರದಾಡುತ್ತಿದ್ದಾರೆ. ಈಗ ಇಮ್ರಾನ್‌ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಜಾಮೀನು ಅವಧಿಯನ್ನು 14 ದಿನಗಳ ತನಕ ಮುಂದೂಡಿದೆ ಇಸ್ಲಾಮಾಬಾದ್‌ ಹೈಕೋರ್ಟ್‌. ಭಯೋತ್ಪಾದನೆಗೆ ಬೆಂಬಲ, ಗಲಭೆಗೆ ಪ್ರಚೋದನೆ, ಭ್ರಷ್ಟಾಚಾರ ಸೇರಿ ಲೆಕ್ಕವಿಲ್ಲದಷ್ಟು ಕೇಸ್ ಎದುರಿಸುತ್ತಿದ್ದಾರೆ ಖಾನ್. ಸ್ವತಃ ಅಲ್ಲಿನ ಸರ್ಕಾರವೇ ಈ ರೀತಿಯ ಕೇಸ್ ಹಾಕೋದಕ್ಕೆ ಬೆಂಬಲ ನೀಡುತ್ತಿದೆ ಅನ್ನೋ ಆರೋಪವೂ ಕೇಳಿಬರುತ್ತಿದೆ.

ಕೊಲೆ ಬೆದರಿಕೆ.. ಕೋರ್ಟ್‌ಗೆ ಹಾಜರ್!

ಅಲ್-ಖಾದಿರ್ ಟ್ರಸ್ಟ್ ಕೇಸ್‌ಗೆ ಸಂಬಂಧಿಸಿದಂತೆ ಇಮ್ರಾನ್‌ಗೆ ನೀಡಿದ್ದ ಜಾಮೀನು ಅವಧಿಯ ವಿಸ್ತರಣೆ ಬಳಿಕ ಈಗ ಮತ್ತೊಂದು ರಿಲೀಫ್ ಸಿಕ್ಕಿದೆ. ಭ್ರಷ್ಟಾಚಾರದ ಕೇಸ್‌ನಲ್ಲಿ ಜೂನ್ 19ರ ತನಕ ಇಮ್ರಾನ್ ಖಾನ್‌ಗೆ ಬಿಡುಗಡೆ ಸಿಕ್ಕಿದೆ. ಇದಾದ ಬಳಿಕ ಮತ್ತೊಂದು ಕೇಸ್‌ನಲ್ಲೂ ಈಗ ಇಮ್ರಾನ್‌ಗೆ ರಿಲೀಫ್ ಸಿಕ್ಕಿದೆ. ಅಷ್ಟಕ್ಕೂ ಇಮ್ರಾನ್ ಖಾನ್‌ಗೆ ಕೊಲೆ ಬೆದರಿಕೆ ಇದೆ. ಕಳೆದ ವರ್ಷ ಇಮ್ರಾನ್ ಹತ್ಯೆ ಮಾಡಲು ಪ್ರಯತ್ನ ನಡೆದಿತ್ತು. ಆದ್ರೆ ಇಮ್ರಾನ್ ಮೇಲೆ ಹಾರಿಸಿದ್ದ ಗುಂಡು ಕಾಲಿಗೆ ಬಿದ್ದ ಪರಿಣಾಮ ಜೀವ ಉಳಿಸಿಕೊಂಡಿದ್ದರು. ಇಷ್ಟಾದರೂ ನೇರವಾಗಿಯೇ ಇಮ್ರಾನ್ ಖಾನ್ ಕೋರ್ಟ್‌ಗೆ ಹಾಜರಾಗುವಂತೆ ಒತ್ತಡ ಹಾಕುತ್ತಿರುವ ಆರೋಪ ಇದೆ.

Imran Khan bail has been extended in a Murder case

ಉಗ್ರನ ಪಟ್ಟದಿಂದ ಜಸ್ಟ್ ಮಿಸ್!

ಇಮ್ರಾನ್ ಖಾನ್ ವಿರುದ್ಧ ಕೊಲೆ, ಭ್ರಷ್ಟಾಚಾರದ ಕೇಸ್ ಮಾತ್ರವಲ್ಲ, ಸಿಕ್ಕ ಸಿಕ್ಕ ಕೇಸ್‌ನ ಹಾಕಲಾಗುತ್ತಿದೆ. ಪಾಕಿಸ್ತಾನ ಸೇನೆ & ಪಾಕಿಸ್ತಾನ ಸರ್ಕಾರ ಸೇರಿ ಹಲವು ಕುತಂತ್ರ ನಡೆಸಿರೋ ಆರೋಪ ಇದೆ. ಹೀಗೆ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿ ಉಗ್ರನ ಪಟ್ಟ ಕಟ್ಟುವ ಪ್ರಯತ್ನವೂ ನಡೆದಿತ್ತು. ಈ ಕಾರಣಕ್ಕೆ ಖಾನ್ ಮನೆಗೆ ಸೇನೆ & ಲಾಹೋರ್ ಪ್ರಾಂತ್ಯದ ಪೊಲೀಸರನ್ನೇ ನುಗ್ಗಿಸಲಾಗಿತ್ತು. ಅಲ್ಲದೆ ಅಲ್ಲಿ ಉಗ್ರರಿಗೆ ಇಮ್ರಾನ್ ಜಾಗ ಕೊಟ್ಟಿದ್ದಾರೆ ಅನ್ನೋ ಆರೋಪ ಹೊರಿಸಲು ಪ್ರಯತ್ನಿಸಲಾಗಿತ್ತು. ಆದರೆ ಕುತಂತ್ರ ಯಾಕೋ ವರ್ಕೌಟ್ ಆಗಲೇ ಇಲ್ಲ.

ಹೀಗೆ ಇಮ್ರಾನ್ ಖಾನ್ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಯಾವ ಕ್ಷಣದಲ್ಲಿ ಈ ವ್ಯಕ್ತಿ ಮತ್ತೆ ಜೈಲಿಗೆ ಹೋಗ್ತಾರೋ ಗೊತ್ತಿಲ್ಲ. ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ಆಗಿತ್ತು. ಆಗ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್, ಡಾಟಾ ಸೇರಿದಂತೆ ಸೇನಾ ವಸ್ತು ನಾಶ ಮಾಡಿದ ಆರೋಪದ ಹಿನ್ನೆಲೆ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ದಾರೆ. ಇದೇ ಆರೋಪವನ್ನ ಇಮ್ರಾನ್ ವಿರುದ್ಧವೂ ಕಟ್ಟಲು ಪ್ರಯತ್ನಗಳು ಸಾಗಿವೆ. ಆದ್ರೆ ಈ ನಡುವೆ ಕೊಲೆ ಆರೋಪದಿಂದ ಪಾಕ್ ಮಾಜಿ ಪ್ರಧಾನಿ ಬಚಾವ್ ಆಗುವ ಲಕ್ಷಣ ಗೋಚರಿಸುತ್ತಿದೆ. ಇದು ಇಮ್ರಾನ್ ಖಾನ್ ಬೆಂಬಲಿಗರಿಗೆ ಒಂದಷ್ಟು ಖುಷಿ ಕೊಟ್ಟಿದೆ.

English summary
Imran Khan bail has been extended in a Murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X