ಜೈಲಿಗೆ ಹೋಗುವ ಭಯದಲ್ಲಿದ್ದ ಇಮ್ರಾನ್ ಖಾನ್ ಮುಕ್ತ ಮುಕ್ತ!

ಲಾಹೋರ್: ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿಗೆ ಗೌರವ ಇಲ್ಲ, ರಕ್ಷಣೆಯೂ ಇಲ್ಲ. ಕಂಡ ಕಂಡ ಕಡೆಗಳಲ್ಲಿ ಗುಂಡೂ ಹಾರಿಸುತ್ತಾರೆ, ಕೊಲೆ ಮಾಡೋದಕ್ಕೂ ಪ್ರಯತ್ನ ಪಡುತ್ತಾರೆ. ಅದ್ರಲ್ಲೂ ಪಾಕಿಸ್ತಾನದ ಕೇಂದ್ರ ಸರ್ಕಾರವೋ ಇಮ್ರಾನ್ ಖಾನ್ ಜೈಲಿಗೆ ಹೋದ್ರೆ ಸಾಕಪ್ಪ ಅಂತಾ ಯೋಜಿಸುತ್ತಿದೆ. ಇದನ್ನೆಲ್ಲಾ ಇಮ್ರಾನ್ ಖಾನ್ ಈಗ ಗೆದ್ದು ಬೀಗುತ್ತಿದ್ದಾರೆ.

ಮೊನ್ನೆ ಮೊನ್ನೆ ತಾನೆ ತಮ್ಮ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ಬೇಲ್ ವಿಸ್ತರಣೆ ಮಾಡಿಸಿಕೊಂಡಿದ್ದರು ಇಮ್ರಾನ್. ಅಲ್-ಖಾದಿರ್ ಟ್ರಸ್ಟ್ ಕೇಸ್‌ಗೆ ಸಂಬಂಧಿಸಿದಂತೆ ಇಮ್ರಾನ್‌ಗೆ ನೀಡಿದ್ದ ಜಾಮೀನು ಅವಧಿ ವಿಸ್ತರಣೆ ಆಗಿತ್ತು. ಮೇ 31ರ ತನಕ ನೀಡಲಾಗಿದ್ದ ಜಾಮೀನು ಅವಧಿಯನ್ನ ಜೂನ್ 19ರ ತನಕ ವಿಸ್ತರಣೆ ಮಾಡಿ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಕೋರ್ಟ್ ಆದೇಶ ನೀಡಿತ್ತು. ಇದಾದ ಬಳಿಕ ಮತ್ತೊಂದು ಕೇಸ್‌ನಲ್ಲೂ ಇಮ್ರಾನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಅದೂ ಭಯೋತ್ಪಾದನೆ ಆರೋಪದ ಕೇಸ್‌ನಲ್ಲಿ ಅನ್ನೊದು ವಿಶೇಷ.

Imran Khan bail has been extended

ಇಮ್ರಾನ್‌ಗೆ ಉಗ್ರನ ಪಟ್ಟ ಕಟ್ಟುವ ಪ್ಲ್ಯಾನ್ ಫ್ಲಾಪ್?

ಹೌದು, ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ನ್ಯಾಯಾಲಯ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ 3 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನಿನ ಅವಧಿಯನ್ನು ಜೂನ್‌ 13ರವರೆಗೆ ವಿಸ್ತರಣೆ ಮಾಡಿದೆ. ನ್ಯಾಯಾಲಯದ ಎದುರು ಹಾಜರಾಗಿದ್ದ ಇಮ್ರಾನ್ ಖಾನ್‌ಗೆ ರಿಲೀಫ್ ನೀಡಿದೆ ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ನ್ಯಾಯಾಲಯ. ನಿರೀಕ್ಷಣಾ ಜಾಮೀನಿನ ಅವಧಿ ವಿಸ್ತರಿಸಲು ಸಮ್ಮತಿ ನೀಡುವ ಮೂಲಕ ಪಾಕ್ ಕೇಂದ್ರ ಸರ್ಕಾರಕ್ಕೆ ಶಾಕ್ ನೀಡಿದೆ. ಇಮ್ರಾನ್ ಖಾನ್‌ಗೆ ಉಗ್ರನ ಪಟ್ಟ ಕಟ್ಟುವ ಪ್ಲ್ಯಾನ್ ಈ ಮೂಲಕ ಫ್ಲಾಪ್ ಆಯ್ತಾ? (Imran Khan Arrest) ಅನ್ನೋ ಡೌಟ್ ಶುರುವಾಗಿದೆ.

ಇಮ್ರಾನ್ ಬೇಡಿಕೊಂಡರೂ ಬಿಡಲಿಲ್ಲ!

ಅಷ್ಟಕ್ಕೂ ಇಮ್ರಾನ್ ಖಾನ್‌ಗೆ ಕೊಲೆ ಬೆದರಿಕೆ ಇದೆ. ಕಳೆದ ವರ್ಷ ಇಮ್ರಾನ್ ಖಾನ್ ಹತ್ಯೆ ಮಾಡಲು ಪ್ರಯತ್ನ ನಡೆದಿತ್ತು. ಆದ್ರೆ ಇಮ್ರಾನ್ ಮೇಲೆ ಹಾರಿಸಿದ್ದ ಗುಂಡು ಕಾಲಿಗೆ ಬಿದ್ದ ಪರಿಣಾಮ ಜೀವ ಉಳಿಸಿಕೊಂಡಿದ್ದರು. ಹೀಗಾಗಿ ಈಗಲೂ ತಮಗೆ ಕೊಲೆ ಬೆದರಿಕೆ ಇದ್ದು ಆ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಬರ್ತೀನಿ ಅಂತಾ ಖಾನ್ ಕೋರ್ಟ್ ಎದುರು ಬೇಡಿಕೊಂಡಿದ್ದರು. ಆದರೂ ಪಾಕ್ ನ್ಯಾಯಾಲಯ ಈ ಮನವಿಗೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ನೇರವಾಗಿ ಕೋರ್ಟ್‌ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ ಇಮ್ರಾನ್.

Imran Khan bail has been extended

ಕೊಲೆ ಕೇಸ್‌ನಲ್ಲೂ ಇಮ್ರಾನ್‌ಗೆ ಜಾಮೀನು!

ಪಾಕ್ ಮಾಜಿ ಪ್ರಧಾನಿಯನ್ನ ಅಕ್ಷರಶಃ ಕ್ರಿಮಿನಲ್ ರೀತಿ ನಡೆಸಿಕೊಳ್ಳಲಾಗ್ತಿದೆ. ಯಾಕಂದ್ರೆ ಇಮ್ರಾನ್ ಖಾನ್ ವಿರುದ್ಧ ಹತ್ತಾರು ಕೇಸ್ ಹಾಕಿ, ಹೇಗಾದರೂ ಮುಗಿಸಬೇಕು ಅಂತಾ ಯತ್ನಿಸುತ್ತಿದೆ. ಹೀಗಾಗಿಯೇ ಇಮ್ರಾನ್ ವಿರುದ್ಧ ಕೊಲೆ ಆರೋಪದ ಕೇಸ್‌ಗಳೂ ಬಿದ್ದಿವೆ ಅನ್ನೋ ಆರೋಪ ಇಮ್ರಾನ್ ಬೆಂಬಲಿಗರದ್ದು. ಈ ರೀತಿ ಪಿಟಿಐ ಅಂದ್ರೆ ಇಮ್ರಾನ್ ಪಕ್ಷದ ಕಾರ್ಯಕರ್ತ ಝಿಲ್ಲೆ ಶಾ ಹತ್ಯೆ ಪ್ರಕರಣದಲ್ಲೂ ಇಮ್ರಾನ್ ವಿಚಾರಣೆ ಎದುರಿಸುತ್ತಿದ್ದು, ಈ ಪ್ರಕರಣದಲ್ಲೂ ಜಾಮೀನು ಜೂನ್‌ 6ರವರೆಗೆ ವಿಸ್ತರಣೆ ಮಾಡಲಾಗಿದೆ.

ಇಮ್ರಾನ್ ಖಾನ್ ವಿರುದ್ಧ ಉಗ್ರಪಟ್ಟ!

ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಪಾಕಿಸ್ತಾನ ಸೇನಾ ನೆಲೆಗಳ ಮೇಲೆ ದಾಳಿ ಆಗಿತ್ತು. ಆ ವೇಳೆ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್, ಡಾಟಾ ಸೇರಿದಂತೆ ಸೇನಾ ವಸ್ತು ನಾಶ ಮಾಡಿದ ಆರೋಪದ ಹಿನ್ನೆಲೆ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ದಾರೆ. ಹೀಗಾಗಿ ಗಲಾಟೆ ಮಾಡಿದವರ ಮೇಲೆ ಉಗ್ರರ ಪಟ್ಟ ಕಟ್ಟಲಾಗಿದೆ. ಅದೇ ರೀತಿ ಇಮ್ರಾನ್ ವಿರುದ್ಧವೂ ಭಯೋತ್ಪಾದನೆ ಆರೋಪ ಹೊರಿಸಲು ಪ್ರಯತ್ನಿಸಲಾಗಿತ್ತು.

ಪಾಕಿಸ್ತಾನ ಸೇನೆಯಿಂದಲೇ ಪಿತೂರಿ?

ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ ಅನ್ನೋ ಆರೋಪವಿದೆ. ಉಗ್ರನ ಪಟ್ಟ ಕಟ್ಟುವುದು ಕೂಡ ಒಂದು ಪ್ಲ್ಯಾನ್ ಅನ್ನೋ ಮಾತು ಓಡಾಡ್ತಿದೆ.ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ, ಒಳಗೆ ಹಾಕಿದರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು ಅನ್ನೋ ಪ್ಲ್ಯಾನ್ ಇತ್ತು. ಆದ್ರೆ ಈಗ ಇಮ್ರಾನ್ ಖಾನ್ ತಮ್ಮ ವಿರುದ್ಧ ದಾಖಲಾಗಿರುವ ಒಂದೊಂದೇ ಕೇಸ್‌ನಲ್ಲಿ ಬಚಾವ್ ಆಗಿ ಬರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+